ಆರು ಮಂದಿ ದುಷ್ಕರ್ಮಿಗಳ ಗುಂಪು ಬೈಕ್ ಚಾಲಕ ಹಾಗೂ ಸವಾರನ ಮೇಲೆ ಚಾಕು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ನಗದು ಜೊತೆ ಫೋನ್ ಪೇ ನಿಂದಲೂ ಹಣ ಲೂಟಿ ಮಾಡಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮದ್ದೂರು (ಫೆ.15) ಆರು ಮಂದಿ ದುಷ್ಕರ್ಮಿಗಳ ಗುಂಪು ಬೈಕ್ ಚಾಲಕ ಹಾಗೂ ಸವಾರನ ಮೇಲೆ ಚಾಕು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ನಗದು ಜೊತೆ ಫೋನ್ ಪೇ ನಿಂದಲೂ ಹಣ ಲೂಟಿ ಮಾಡಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾಮನಗರದ ಮೆಹಬೂಬ್ ನಗರ ಮೊಹಲ್ಲಾದ ಯಾಸಿನ್ ಖಾನ್ (24) ಹಾಗೂ ಅಬ್ದುಲ್ ರೆಹಮಾನ್ (23) ದುಷ್ಕರ್ಮಿಗಳ ಗುಂಪಿನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
undefined
ಕಾಂಗ್ರೆಸ್ ಸರ್ಕಾರದಿಂದ ದಲಿತರ ಹಣ ಹಗಲು ದರೋಡೆ, 500ಕ್ಕೂ ಹೆಚ್ಚು ರೈತರ ಆತ್ಮಹತ್ಯೆ: ವಿಜಯೇಂದ್ರ ವಾಗ್ದಾಳಿ
ಘಟನೆ ಸಂಬಂಧ ಪೊಲೀಸರು ತಾಲೂಕಿನ ಯರಗನಹಳ್ಳಿಯ ನಾಗೇಶ್ ಪುತ್ರ ಮೋಹನ್ ಕುಮಾರನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಐವರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಕಳೆದ ಜ.29ರಂದು ರಾತ್ರಿ 9 ರ ಸಮಯದಲ್ಲಿ ಹಲ್ಲೆಗೊಳಗಾದ ಯಾಸಿನ್ ಹಾಗೂ ಅಬ್ದುಲ್ ರೆಹಮಾನ್ ಅವರು ಮದ್ದೂರಿನ ತಮ್ಮ ಅತ್ತೆಯ ಮನೆಗೆ ಬಂದು ವಾಪಸ್ ರಾಮನಗರಕ್ಕೆ ತೆರಳುತ್ತಿದ್ದರು. ನಿಡಘಟ್ಟ ಗ್ರಾಮದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಯಾಸಿನ್ ಮತ್ತು ಅಬ್ದುಲ್ ಮೂತ್ರ ವಿಸರ್ಜನೆಗಾಗಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸುತ್ತಿದ್ದಾಗ ಸ್ಥಳಕ್ಕೆ ಧಾವಿಸಿದ ಮೋಹನ್ ಕುಮಾರ್ ಸೇರಿದಂತೆ ಆರು ಮಂದಿ ದುಷ್ಕರ್ಮಿಗಳು ಇಬ್ಬರ ನಡುವೆ ಜಗಳ ತೆಗೆದು ಚಾಕು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ಬೆಂಗಳೂರು: ಹಾಡುಹಗಲೇ ಸಿಗರೇಟ್ ಡಿಸ್ಟ್ರಿಬ್ಯೂಟರ್ ಮೇಲೆ ಮಚ್ಚು ಬೀಸಿ ₹15 ಲಕ್ಷ ದರೋಡೆ!
ನಂತರ 50 ಸಾವಿರಕ್ಕೆ ಬೇಡಿಕೆ ಇಟ್ಟ ಆರೋಪಿಗಳು ಯಾಸಿನ್ ಬಳಿ ಇದ್ದ 17,000 ಹಾಗೂ ಅಬ್ದುಲ್ ರೆಹಮಾನ್ ಬಳಿ ಇದ್ದ 5000 ಹಣವನ್ನು ದೋಚಿದ್ದಾರೆ. ನಂತರ ಅಬ್ದುಲ್ ಫೋನ್ ನಿಂದ 9 ಸಾವಿರ ರು. ಗಳನ್ನು ಫೋನ್ ಪೇ ಮಾಡಿಕೊಂಡು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 143, 323, 324, 384, 504. 506 ಹಾಗೂ 149 ಅನ್ವಯ ಪ್ರಕರಣ ದಾಖಲೆ ಮಾಡಿಕೊಂಡಿದ್ದಾರೆ.