
ಕೋಲ್ಕತ್ತಾ: ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನ ಪಟ್ಟ ಪತಿಯೋರ್ವ ಪತ್ನಿಯನ್ನು ಕೊಂದು ಆಕೆಯ ರಕ್ತ ಸೋರುತ್ತಿದ್ದ ತಲೆಯನ್ನು ಹಿಡಿದುಕೊಂಡು ಊರಿಡೀ ಸುತ್ತಿದ ಭಯಾನಕ ಘಟನೆ ಪಶ್ಚಿಮ ಬಂಗಾಳದಲ್ಲಿ ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ. ಗೌತಮ್ ಗುಚ್ಚೈತ್ ಎಂಬಾತನೇ ಹೀಗೆ ಪತ್ನಿಯನ್ನು ಕೊಂದು ವ್ಯಕ್ತಿ. ಮೊದಲಿಗೆ ಪತ್ನಿ ಫೂಲ್ರಾನಿ ಗುಚ್ಚೈತ್‌ನ ತಲೆಯನ್ನು ಕಟ್ಲಾಸ್‌ನಿಂದ ಕಡಿದ ಗೌತಮ್ ಬಳಿಕ ಒಂದು ಕೈಯಲ್ಲಿ ಕಟ್ಲಾಸ್ ಹಾಗೂ ಇನ್ನೊಂದು ಕೈಯಲ್ಲಿ ಪತ್ನಿಯ ತಲೆಯೊಂದಿಗೆ ಮನೆಯಿಂದ ಹೊರ ಬಂದಿದ್ದಾನೆ.
ಬಳಿಕ ಸಮೀಪದ ಟೀ ಶಾಪ್‌ಗೆ ತೆರಳಿ ಅಲ್ಲಿದ್ದ ಬೆಂಚೊಂದರ ಮೇಲೆ ಕುಳಿತಿದ್ದಾನೆ. ಜೊತೆಗೆ ಪಕ್ಕದಲ್ಲೇ ಕಟ್ಲಾಸ್ ಹಾಗೂ ಪತ್ನಿಯ ತಲೆಯನ್ನು ಇಟ್ಟಿದ್ದಾನೆ. ಅದೆಂಥಾ ಉಗ್ರ ಸ್ವರೂಪದಲ್ಲಿ ಈತ ಇದ್ದನೆಂದರೆ ಈ ದೃಶ್ಯವನ್ನು ನೋಡಿದ ಯಾರೂ ಕೂಡ ಆತನ ಬಳಿ ಹೋಗುವ ಧೈರ್ಯ ತೋರಿರಲಿಲ್ಲ, ಬಳಿಕ ಈ ವಿಚಾರವನ್ನು ಯಾರೋ ಪೊಲೀಸರಿಗೆ ತಿಳಿಸಿದ್ದು, ಬಳಿಕ ಸಮೀಪದ ಪಟಾಶ್‌ಪುರ ಪೊಲೀಸರ ತಂಡವೊಂದು ಸ್ಥಳಕ್ಕೆ ಬಂದು ಆತನನ್ನು ಬಂಧಿಸಿ ಕರೆದೊಯ್ದರು ಎಂದು ಘಟನೆಯನ್ನು ನೋಡಿದ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಅಕ್ರಮ ಸಂಬಂಧ ಶಂಕೆ: ಪತ್ನಿ ತಲೆ ಕಡಿದು ಪೊಲೀಸ್ ಠಾಣೆಗೆ ತಗೊಂಡೋದ ಭೂಪ
ಗೌತಮ್ ಗುಚೈತ್ ಸಂಚಾರಿ ವ್ಯಾಪಾರಿಯಾಗಿದ್ದು, ಪತ್ನಿಯೊಂದಿಗೆ ಉತ್ತಮ ಬಾಂಧವ್ಯವಿರಲಿಲ್ಲ, ಪತ್ನಿಯ ಮೇಲೆ ಸಂಶಯ ಹೊಂದಿದ್ದ ಆತನಿಗೆ ಪತ್ನಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವಿತ್ತು, ಈ ಜೋಡಿಗೆ ಅಪ್ರಾಪ್ತ ಮಗನೋರ್ವನಿದ್ದು, ಆತ 5ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆರೋಪಿ ಬಳಿಯಿಂದ ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ರಕ್ತಸಿಕ್ತ ತಲೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅದನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ಪತ್ನಿಯ ಕೊಲೆಗೈದ ಈ ಆರೋಪಿ 2021ರ ಮಾರ್ಚ್‌ನಲ್ಲಿ ಕೋಲ್ಕತ್ತಾದಲ್ಲಿರುವ ಅಲಿಪೊರ ಝೂನಲ್ಲಿ ಸಿಂಹಗಳಿರುವ ಬೋನಿನೊಳಗೆ ನುಗ್ಗಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. ಸಣ್ಣಪುಟ್ಟ ಗಾಯಗಳಿಂದ ಆತ ಅಂದು ಪಾರಾಗಿದ್ದ. ಈಗ ಪತ್ನಿಯನ್ನು ಹೀಗೆ ಭೀಕರವಾಗಿ ಕೊಂದು ಜೈಲು ಸೇರಿದ್ದಾನೆ.
ಅಕ್ರಮ ಸಂಬಂಧಕ್ಕೆ ಬೇಸತ್ತು ಪ್ರಿಯಕರನ ತಲೆ ಕಡಿದು ಪತ್ನಿಯ ಮನೆಮುಂದೆ ತಂದು ಬಿಸಾಕಿದ ಪತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ