Gold Fraud: ನಕಲಿ ಚಿನ್ನದಂಗಡಿ ತೆರೆದು ಅಕ್ಕಸಾಲಿಗನಿಗೆ ಮೋಸ..!

By Kannadaprabha NewsFirst Published Jan 19, 2022, 6:36 AM IST
Highlights

*  316 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿ
*  ರಾಜಾಜಿನಗರದಲ್ಲಿ ಅಂಗಡಿ ಮಳಿಗೆ ಬಾಡಿಗೆಗೆ ಪಡೆದಿದ್ದ ಗ್ಯಾಂಗ್‌
*  ಅಕ್ಕ ಸಾಲಿಗನಿಂದ ಚಿನ್ನ ಪಡೆದು ನಾಪತ್ತೆಯಾಗಿದ್ದ ಗ್ಯಾಂಗ್‌
 

ಬೆಂಗಳೂರು(ಜ.19): ಜುವೆಲ್ಲರಿ ಅಂಗಡಿ ಮಾಲೀಕನ ಸೋಗಿನಲ್ಲಿ ಅಕ್ಕಸಾಲಿಗನಿಂದ ಚಿನ್ನಾಭರಣ(Gold) ಪಡೆದು ಪರೀಕ್ಷೆ ಮಾಡಿಕೊಂಡು ಬರುವುದಾಗಿ ಚಿನ್ನಾಭರಣಗಳೊಂದೊಗೆ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು(Accused) ಮಾಗಡಿ ರಸ್ತೆ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಆಸ್ಟೀನ್‌ಟೌನ್‌ ನಿವಾಸಿ ಫರಾನ್‌ ಅಬ್ಬಾಸ್‌ (23) ಬಂಧಿತ(Arrest). ಆರೋಪಿಯಿಂದ .5 ಲಕ್ಷ ಮೌಲ್ಯದ 116 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿಬಿದನೂರಿನ ಅಲಿಪುರ ಮೂಲದ ಫರಾನ್‌ ಸೇರಿದಂತೆ ಮೂವರು ಸದಸ್ಯರ ತಂಡ, ಜುವೆಲ್ಲರಿ ಅಂಗಡಿ ಮಾಲೀಕರ ಸೋಗಿನಲ್ಲಿ ಅಕ್ಕಸಾಲಿಗರನ್ನು(Goldsmiths) ಗುರಿಯಾಗಿಸಿಕೊಂಡು ವಂಚಿಸಲು(Fraud) ಯೋಜನೆ ರೂಪಿಸಿದ್ದರು. ಅದರಂತೆ ಕಬ್ಬನ್‌ಪೇಟೆಯ ಕೆಲ ಅಕ್ಕಸಾಲಿಗರನ್ನು ಭೇಟಿಯಾಗಿ ಹೊಸದಾಗಿ ನಾವು ಜುವೆಲ್ಲರಿ ಅಂಗಡಿ ಆರಂಭಿಸಿದ್ದೇವೆ. ಗ್ರಾಹಕರಿಂದ(Customers) ಆಭರಣಗಳಿಗೆ ತುಂಬಾ ಬೇಡಿಕೆಯಿದೆ. ಹೀಗಾಗಿ ವೈವಿಧ್ಯಮಯ ವಿನ್ಯಾಸದ ಆಭರಣಗಳನ್ನು ಮಾಡಿಕೊಡಬೇಕು ಎಂದು ಹೇಳಿದ್ದಾರೆ. ಆದರೆ, ಆರೋಪಿಗಳು ಅಪರಿಚಿತರಾಗಿದ್ದರಿಂದ ಅಕ್ಕಸಾಲಿಗರು ಮನವಿ ತಿರಸ್ಕರಿಸಿದ್ದರು.

Bengaluru: ಸಿಎಂ ಮನೆಯಂಗಳದಲ್ಲೇ ಪೊಲೀಸರಿಂದ ಗಾಂಜಾ ದಂಧೆ, ಇಬ್ಬರು ಅರೆಸ್ಟ್

ನಕಲಿ ಜುವೆಲ್ಲರಿ ಅಂಗಡಿ!

ಅಕ್ಕಸಾಲಿಗರು ಅಂಗಡಿ, ವಿಳಾಸ ಇಲ್ಲವೆಂದು ಆರ್ಡರ್‌ ಪಡೆಯಲು ಹಿಂದೇಟು ಹಾಕುತ್ತಿರುವುದನ್ನು ಅರಿತ ಆರೋಪಿಗಳು, ಮಾಗಡಿ ರಸ್ತೆ ರಾಜಾಜಿ ನಗರದಲ್ಲಿ ಖಾಲಿ ಅಂಗಡಿ ಮಳಿಗೆ ಗುರುತಿಸಿ ಆ ಕಟ್ಟಡ ಮಾಲಿಕನಿಗೆ ಮುಂಗಡ .50 ಸಾವಿರ ಹಾಗೂ ಮಾಸಿಕ ಬಾಡಿಗೆ 25 ಸಾವಿರಕ್ಕೆ ಒಪ್ಪಿಸಿ ಮಳಿಗೆ ಬಾಡಿಗೆ ಪಡೆದಿದ್ದರು. ಆ ಮಳಿಗೆಗೆ ವಸುಂದರಾ ಜುವೆಲ್ಲ​ರ್ಸ್‌ ಎಂದು ನಾಮಫಲಕ ಹಾಕಿ ಒಳಗೆ ಕುರ್ಚಿ ಹಾಕಿದ್ದರು. ಬಳಿಕ ಈ ವಿಳಾಸಕ್ಕೆ ವಿಸಿಟಿಂಗ್‌ ಕಾರ್ಡ್‌ ಮಾಡಿ ಅಕ್ಕಸಾಲಿಗರ ಬಳಿ ತೆರಳಿ ತಮ್ಮ ಬಗ್ಗೆ ಪರಿಚಯಿಸಿಕೊಂಡಿದ್ದರು.

ಅದರಂತೆ ಕಬ್ಬನ್‌ ಪೇಟೆಯ ಅಕ್ಕಸಾಲಿಗರೊಬ್ಬರು ಆರೋಪಿಗಳಿಗೆ ಆಭರಣ ಮಾಡಿಕೊಡಲು ಒಪ್ಪಿದ್ದರು. ಹೀಗಾಗಿ ಆರೋಪಿಗಳು ಮೊದಲಿಗೆ 500 ಗ್ರಾಂ ಚಿನ್ನಾಭರಣಗಳಿಗೆ ಆರ್ಡರ್‌ ಕೊಟ್ಟಿದ್ದರು. ಕೆಲಸದ ಗುಣಮಟ್ಟ ನೋಡಿ ಹೆಚ್ಚಿನ ಆರ್ಡರ್‌ ಕೊಡುವುದಾಗಿ ಹೇಳಿದ್ದರು. ಈ ವಂಚಕರ ಮಾತು ನಂಬಿದ್ದ ಅಕ್ಕಸಾಲಿಗ ಜ.6ರಂದು 316 ಗ್ರಾಂ ತೂಕದ ಆಭರಣ ಮಾಡಿಕೊಂಡು ವಸುಂಧರಾ ಜ್ಯುವೆಲ​ರ್ಸ್‌ ಅಂಗಡಿಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳು ಆಭರಣ ಪಡೆದು ಪಕ್ಕದಲ್ಲೇ ಚಿಕ್ಕಪ್ಪನ ಅಂಗಡಿ ಇದೆ. ಅಲ್ಲಿ ಆಭರಣದ ಗುಣಮಟ್ಟ ಪರೀಕ್ಷಿಸಿಕೊಂಡು ಬರುವುದಾಗಿ ಆಭರಣ ಪಡೆದು ಹೊರಹೋಗಿದ್ದರು.

ಬಳಿಕ ತಾಸು ಕಳೆದರೂ ವಾಪಸ್‌ ಬರಲಿಲ್ಲ. ಮೊಬೈಲ್‌ಗೆ ಹತ್ತಾರು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ತಾನು ಮೋಸ ಹೋಗಿರುವುದು ಅಕ್ಕಸಾಲಿಗನಿಗೆ ಅರಿವಾಗಿದ್ದು, ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ತನಿಖೆ(Investigation) ನಡೆಸಿದ ಇನ್‌ಸ್ಪೆಕ್ಟರ್‌ ಜಿ.ಟಿ.ಶ್ರೀನಿವಾಸ್‌ ನೇತೃತ್ವದ ತಂಡ ಓರ್ವ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Rowdy Arrested: ಬೆಂಗಳೂರು ಪೊಲೀಸರಿಗೇ ಸವಾಲು ಹಾಕಿದ್ದವನಿಗೆ ಗುಂಡೇಟಿನ ಉತ್ತರ!

ಅತ್ತೆ ಮನೆಯಲ್ಲಿ ಗೌರವ ಸಿಗುತ್ತಿಲ್ಲ: ಜನ್ಮದಿನದಂದೇ ಷಡ್ಕನಿಗೆ ಚಾಕು ಇರಿದು ಹತ್ಯೆಗೆ ಯತ್ನ!

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಅವರ ಹುಟ್ಟುಹಬ್ಬದ ದಿನವೇ (Birthday) ಚಾಕುವಿನಿಂದ ಇರಿದು ಹತ್ಯೆಗೆ (stabbing) ಯತ್ನಿಸಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು (Byappanahalli Police) ಬಂಧಿಸಿದ್ದಾರೆ. ಬೈಯಪ್ಪನಹಳ್ಳಿಯ ಬಂಡೆನಗರ ನಿವಾಸಿ ಸುನೀಲ್‌(32) ಬಂಧಿತ. ಆರೋಪಿಯು ಜ.14ರಂದು ಪತ್ನಿಯ ಸಹೋದರಿಯ ಪತಿ ರಾಕೇಶ್‌ ಹೊಟ್ಟೆಗೆ ಚಾಕುನಿಂದ ಇರಿದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕೆಲ ವರ್ಷಗಳ ಹಿಂದೆ ಸುಶ್ಮಿತಾ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಶ್ಮಿತಾ ಸಹೋದರಿ ಜ್ಯೋತಿಕಾ ಒಂದು ವರ್ಷದ ಹಿಂದೆಯಷ್ಟೇ ರಾಕೇಶ್‌ ಅವರನ್ನು ಮದುವೆಯಾಗಿದ್ದಾರೆ. ಸುನೀಲ್‌ನ ಪಕ್ಕದ ಮನೆಯಲ್ಲಿ ಜ್ಯೋತಿಕಾ, ತಾಯಿ ಹಾಗೂ ರಾಕೇಶ್‌ ನೆಲೆಸಿದ್ದಾರೆ. ಈ ನಡುವೆ ಆರೋಪಿ ಸುನೀಲ್‌ಗೆ ಅತ್ತೆ ಮನೆಯಲ್ಲಿ ಹೆಚ್ಚಿನ ಗೌರವ ಸಿಗುತ್ತಿರಲಿಲ್ಲ. ಈ ವಿಚಾರವಾಗಿ ಸುನೀಲ್‌ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
 

click me!