Sexual Harassment : ಮದುವೆಯಾದ ಮಹಿಳೆಯ ಸ್ನಾನದ ವಿಡಿಯೋ ಮಾಡಿಕೊಂಡ ಸಂಬಂಧಿ ಮಾಡಿದ ಕೆಲಸ!

By Suvarna NewsFirst Published Jan 19, 2022, 12:29 AM IST
Highlights

*  ಮಹಿಳೆ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿಕೊಂಡ ಸೋದರ ಸಂಬಂಧಿ
* ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಆಕೆ ಮೇಲೆ ಅತ್ಯಾಚಾರ
* ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಕಿರಾತಕ

ಪುಣೆ(ಜ. 18)   ಮಹಿಳೆಯೊಬ್ಬರು (Woman) ಮಹಾರಾಷ್ಟ್ರದ ಪುಣೆಯ ಹಿಂಜೆವಾಡಿ ಪೊಲೀಸರಿಗೆ  ದೂರು ನೀಡಿದ್ದು, ತನ್ನ 25 ವರ್ಷದ ಸೋದರ ಸಂಬಂಧಿ ಮೇಲೆ ಆರೋಪ ಮಾಡಿದ್ದಾರೆ. ತಾನು ಸ್ನಾನ
ಮಾಡುತ್ತಿರುವ ವಿಡಿಯೋವನ್ನು (videro) ಕದ್ದು ಮಾಡಿಕೊಂಡಿರುವ ಸೋದರ ಸಂಬಂಧಿ  ಬ್ಲಾಕ್ ಮೇಲ್ (Blackmail)ಮಾಡಿದ್ದು ಅದನ್ನೇ ಇಟ್ಟುಕೊಂಡು  ಅತ್ಯಾಚಾರ (Rape) ಮಾಡಿದ್ದಾನೆ
ಎಂದು ಆರೋಪಿಸಿದ್ದಾರೆ. ತನಗೆ ಸಹಕಾರ ಕೊಡದೇ ಇದ್ದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ಥೇನೆ ಎಂದು ಬೆದರಿಕೆ ಹಾಕಿದ್ದ.

ಮಹಿಳೆ ಮೊದಲಿಗೆ ಆತನ ಮಾತಿಗೆ  ಭಯಗೊಂಡಿಲ್ಲ. ಆಕೆಯ ಮೇಲೆ ಹಲ್ಲೆಗೂ ಮುಂದಾಗಿದ್ದಾನೆ.  ತನ್ನ ಕಾಮದ ಆಸೆಯನ್ನು ಪೂರೈಸಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ. ನಿರಂತರ ದೌರ್ಜನ್ಯದಿಂದ ಕಂಗೆಟ್ಟ ಮಹಿಳೆ ಗಂಡನಿಗೆ ಘೋರ ಸಂಗತಿ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. 

 ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು  ಆತ ಸ್ವಗ್ರಾಮಕ್ಕೆ ಪರಾರಿಯಾಗಿದ್ದ.  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಿಯಕರನ ಜೊತೆ ಬೆತ್ತಲಾದ ಮೂರು ಮಕ್ಕಳ ತಾಯಿ: ಬಳಿಕ ನಡೆದಿದ್ದು ಭಯಾನಕ..!

ಕಾರ್ಮಿಕನಿಂದ ಅತ್ಯಾಚಾರ: ಪುಣೆಯಿಂದ ಇನ್ನೊಂದು ಅತ್ಯಾಚಾರದ ಪ್ರಕರಣ ವರದಿಯಾಗಿದೆ.  ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್‌ವಾಡ್ ಪ್ರದೇಶದಲ್ಲಿ 13 ವರ್ಷದ ಬಾಲಕಿಯ ಮೇಲೆ 21 ವರ್ಷದ ಕಾರ್ಮಿಕನೊಬ್ಬ
ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.  ಬಾಲಕಿಯ 35 ವರ್ಷದ ತಾಯಿ ದೂರು ನೀಡಿದ ನಂತರ, ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ.

 ಪೋಲೀಸರ ಪ್ರಕಾರ, ಬಂಧಿತ ಅಪ್ರಾಪ್ತ ವಯಸ್ಕಳನ್ನು ಆಕೆಯ ಪೋಷಕರು ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕ್ರೌರ್ಯ ಮೆರೆದಿದ್ದಾನೆ.  ಅವಳು ಒಬ್ಬಂಟಿಯಾಗಿದ್ದಾಗ ಆಕೆಯ ನಿವಾಸದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. . ತನಗಾದ ಅನಾಹುತವನ್ನು ಪೋಷಕರಿಗೆ ತಿಳಿಸಿದ ಬಳಿಕ ಪೊಲೀಸರಿಗೆ ದೂರು ನೀಡಿ ಆರೋಪಿಯನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

 ವರದಕ್ಷಿಣೆ ಬಾಕಿ ಹಣ ತರದಿದ್ದರೆ  ಬೆತ್ತಲೆ ವಿಡಿಯೋವನ್ನೇ ಸೋಶಿಯಲ್ ಮೀಡಿಯಾಕ್ಕೆ  ಅಪ್ ಲೋಡ್ ಮಾಡುತ್ತೇನೆ ಎಂದು ಪತ್ನಿಯನ್ನೇ ಬೆದರಿಸುತ್ತಿದ್ದ ಪ್ರಕರಣ ಶಿವಮೊಗ್ಗದಿಂದ ವರದಿಯಾಗಿತ್ತು. ಚಿಕ್ಕಮಗಳೂರು
ಜಿಲ್ಲೆಯ ವೆಲ್ ಕಮ್ ಗೇಟ್ ನ ಸಂತ್ರಸ್ತೆಯ ಪತಿ ಸಲ್ಮಾನ್, ಅತ್ತೆ ಸಾಹೀರಾ, ಮಾವ ಶೌಕತ್ ಖಾನ್ ಮತ್ತು ನಾದಿನಿ ಸಮೀನಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಹೊಸನಗರ ಹುಂಚದ ಮಹಿಳೆಗೆ ಮತ್ತು  ಶೃಂಗೇರಿ  ವೆಲ್ ಕಮ್ ಗೇಟ್ ನ ಸಲ್ಮಾನ್ ಜತೆ ಕಳೆದ ವರ್ಷ ವಿವಾಹವಾಗಿತ್ತು. ವಿವಾಹದ ವೇಳೆ 90 ಗ್ರಾಂ ಬಂಗಾರ,  ಮೂರು ಲಕ್ಷ ರೂ. ವರದಕ್ಷಿಣೆ ನೀಡಲು ಸಂತ್ರಸ್ತ ಮಹಿಳೆ ತಂದೆ ಒಪ್ಪಿಗೆ ನೀಡಿದ್ದರು.  ಮದುವೆಗೆ ಮುಂಚೆ ಎರಡು ಲಕ್ಷ ರೂ. ಹಣ ಮತ್ತು ನಾಲ್ಕು ಗ್ರಾಂ ಉಂಗುರ ಮದುವೆ ಬಳಿಕ  90 ಗ್ರಾಂ ಬಂಗಾರ ಮತ್ತು ಗೃಹುಪಯೋಗಿ ಸಾಮಗ್ರಿಗಳನ್ನು ನೀಡಿದ್ದರೂ  ಕಿರುಕುಳ ಮಾತ್ರ
ಮುಂದುವರಿದಿತ್ತು.

ಹೆಂಡತಿ ಸ್ನಾನ ಮಾಡುವ ವಿಡಿಯೋ, ಫೋಟೋಗಳನ್ನು ತೆಗೆದುಕೊಂಡ ಪತಿಯೊಬ್ಬ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡಿದ್ದ ಪ್ರಕರಣ ಲೂಧಿಯಾನದಿಂದ ವರದಿಯಾಗಿತ್ತು.  ಪತಿ ಆಕೆಗೆ ಗೊತ್ತಾಗದಂತೆ ಬಾತ್​ರೂಂನಲ್ಲಿ
ಕ್ಯಾಮೆರಾ ಅಡಗಿಸಿಟ್ಟಿದ್ದ. ನಂತರ ಅದರಲ್ಲಿ ಚಿತ್ರೀಕರಣವಾದ ವಿಡಿಯೋ, ಫೋಟೋಗಳನ್ನಿಟ್ಟುಕೊಂಡು ಆಕೆಗೆ ಹಣಕ್ಕಾಗಿ ಕಿರುಕುಳ ನೀಡಿದ್ದ.  20 ಲಕ್ಷ ರೂಪಾಯಿ ಕೊಡು, ಇಲ್ಲದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

 

 

click me!