Kite Manja Slits Throat: ಮೊಪೆಡ್ ನಲ್ಲಿ ಬರುತ್ತಿದ್ದವನ ಪ್ರಾಣ ತೆಗೆದ ಗಾಳಿಪಟದ ದಾರ!

Published : Jan 18, 2022, 09:56 PM ISTUpdated : Jan 18, 2022, 09:58 PM IST
Kite Manja Slits Throat: ಮೊಪೆಡ್ ನಲ್ಲಿ ಬರುತ್ತಿದ್ದವನ ಪ್ರಾಣ ತೆಗೆದ ಗಾಳಿಪಟದ ದಾರ!

ಸಾರಾಂಶ

* ಮಾನವನ  ಜೀವಕ್ಕೆ ಎರವಾದ  ಗಾಳಿಪಟದ ದಾರ * ಮನೆಗೆ ಹಿಂದಿರುಗಿತ್ತಿದ್ದ ವ್ಯಕ್ತಿಯ ಕುತ್ತಿಗೆಗೆ ಬಿಗಿದ ಮಾಂಜಾ * ಆಸ್ಪತ್ರೆಯಿಂದ ಹಿಂದಿರುಗುತ್ತಿದ್ದ ದಂಪತಿ * ಪ್ರಾಣಿ-ಪಕ್ಷಿಗಳ ಜೀವಕ್ಕೆ ಕಂಟಕವಾಗುವ  ದಾರ

ಹೈದರಾಬಾದ್ (ಜ. 18)  ಇದೊಂದು ಘೋರ ಘಟನೆ. ಬೈಕ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಗಾಳಿಪಟದ (Kite)ಮಾಂಜಾಕ್ಕೆ ಬಲಿಯಾಗಿದ್ದಾರೆ. ತೆಲಂಗಾಣದ (Telangana) ಮಂಚೇರಿಯಲ್ ಜಿಲ್ಲೆಯಲ್ಲಿ ಮರಕ್ಕೆ ನೇತಾಡುತ್ತಿದ್ದ ಗಾಜು ಲೇಪಿತ  ಮಾಂಜಾ ಜೀವ ಬಲಿಪಡೆದಿದೆ. ಮರದಲ್ಲಿ ನೇತಾಡುತ್ತಿದ್ದ  ಮಾಂಜಾ ಕತ್ತು ಸೀಳಿದೆ.

39 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ಜನವರಿ 15 ರಂದು ಓಲ್ಡ್ ಮಂಚೇರಿಯಲ್ ಪಟ್ಟಣದ ಕಾರ್ಮಿಕ ಭೀಮಯ್ಯ (39), ತನ್ನ ಪತ್ನಿ ಶಾರದಾ ಅವರೊಂದಿಗೆ ಆಸ್ಪತ್ರೆಗೆಯಿಂದ ಮನೆಗೆ ಹಿಂದಿರುಗುತ್ತಿದ್ದರು.   ಮೊಪೆಡ್‌ನಲ್ಲಿ ಮನೆಗೆ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನನ್ನ ಪತಿ  ಬೆರಳು ಕಟ್ ಮಾಡಿಕೊಂಡಿದ್ದರು.  ಗಾಯಕ್ಕೆ ಚಿಕತ್ಸೆ ಪಡೆಯಲು  ಆಸ್ಪತ್ರೆಗೆ (Hospital) ತೆರಳಿದ್ದೇವು. ವೈದ್ಯರು ಧನುರ್ವಾಯು ಚುಚ್ಚುಮದ್ದನ್ನು ನೀಡಿದ ನಂತರ ನಾವು ಮೆಡಿಕಲ್ ಶಾಪ್‌ಗೆ ಹೋಗಿ ಔಷಧಿಗಳನ್ನು(Medicine) ಖರೀದಿಸಿದೆವು. . ನಾವು ಮೊಪೆಡ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ಅವರು ಸೇತುವೆಯನ್ನು ದಾಟಿದ ನಂತರ ವಾಹನ ಇದ್ದಕ್ಕಿದ್ದಂತೆ ನಿಂತಿದೆ.  ಪತಿಯ ಕುತ್ತಿಗೆಗೆ  ಗಾಳಿಪಟ ಮಾಂಜಾ ಸಿಕ್ಕಿಹಾಕಿಕೊಂಡಿದೆ. ಗಂಟಲಿನಿಂದ ರಕ್ತಸ್ರಾವವಾವ ಆರಂಭವಾಗಿದೆ.

ದಾರಿಹೋಕರ ನೆರವು ಪಡೆದುಕೊಂಡ ಶಾರದಾ ಗಂಡನ ಕುತ್ತಿಗೆಯಿಂದ ಗಾಳಿಪಟದ ಮಾಂಜಾ ತೆಗೆದಿದ್ದಾರೆ.  ಅಲ್ಲಿಂದ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಲಾಯಿತಾದರೂ ಪ್ರಯೋಜನವಾಗಲಿಲ್ಲ. ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

3 ವರ್ಷದ ಮಗುವನ್ನು ಹೊತ್ತೊಯ್ದ ಗಾಳಿಪಟ!

ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಪಾಯವನ್ನುಂಟುಮಾಡುವ ಕ್ರಿಯೆಯಿಂದ ನೋವುಂಟುಮಾಡುವುದು) ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

 ಪ್ರತಿ ವರ್ಷ ಗಾಳಿಪಟದ ದಾರದ ಪುಡಿ ಗಾಜು ಹಾಕಿದ 'ಮಾಂಜಾ' ಮಾನವನ ಜೀವಕ್ಕೆ  ಮಾರಕ. ಪಕ್ಷಿಗಳ ಜೀವಕ್ಕೂ  ಅಪಾಯವನ್ನುಂಟುಮಾಡುತ್ತದೆ 

ಹಲವಾರು ರಾಜ್ಯ ಸರ್ಕಾರಗಳು  ಮಾಂಜಾ  ಮಾರಾಟವನ್ನು ನಿಷೇಧಿಸಿವೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಸಂಪೂರ್ಣ ನಿಷೇಧ ಆಗಿಲ್ಲ.  ಗಾಳಿಪಟಗಳನ್ನು ಹಾರಿಸಲು ಬಳಸುವ ಸಾಂಪ್ರದಾಯಿಕ ಹತ್ತಿ ದಾರವನ್ನು ಈ ಗಾಜಿನ ಲೇಪಿತ ನೈಲಾನ್ / ಪ್ಲಾಸ್ಟಿಕ್ ಮಾಂಜಾಕ್ಕೆ ಬದಲಾಯಿಸಲಾಗಿದ್ದು , ಇದನ್ನು "ಚೀನೀಸ್ ಎಂದೂ ಕರೆಯುತ್ತಾರೆ. ಸುಲಭಕ್ಕೆ ಕತ್ತರಿಸಿಕೊಳ್ಳಬಾರದು ಎಂದು ಮಾಡಿಕೊಂಡಿದ್ದ ಕೆಲಸ ಮಾನವ ಮತ್ತು ಪ್ರಾಣಿ ಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

ಹಾರಿಸಿಕೊಂಡು ಹೋದ ಗಾಳಿಪಟ:  ಶ್ರೀಲಂಕಾದಲ್ಲಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು  ಅಕ್ಷರಶಃ  ದಾರದಲ್ಲಿ ನೇತಾಡಿದ್ದರು.  ಶ್ರೀಲಂಕಾ (Sri Lanka)ದ ಜಾಫ್ನಾ (Jaffna) ಜಿಲ್ಲೆಯಲ್ಲಿರುವ ಪಾಯಿಂಟ್ ಪೆಡ್ರೊದಲ್ಲಿ ಒಂದು ಮಗುವಿನ ತಂದೆ ಗಾಳಿಪಟವನ್ನು ಹಾರಿಸುತ್ತಿದ್ದಾಗ, ಎಲ್ಲಿಂದಲೂ ಬೀಸಿ ಬಂದ ದೊಡ್ಡ ಗಾಳಿಯ ಪರಿಣಾಮ ಅವರು ಕೂಡ ಗಾಳಿಪಟದ ಜೊತೆ ಮೇಲೇರಿ ಹಗ್ಗದೊಂದಿಗೆ ನೇತಾಡುವಂತಾಗಿತ್ತು.  ನದರಸಾ ಮನೋಹರನ್  ಸುಮಾರು 30 ರಿಂದ 40 ಅಡಿಗಳಷ್ಟು ಎತ್ತರಕ್ಕೆ ಅವರು ಹಾರಲ್ಪಟ್ಟಿದ್ದರು. ಪ್ಯಾರಾಚೂಟ್ ನಂತೆ ಭಾಸವಾಗಿತ್ತು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,  ಮನೋಹರನ್ ಅವರ ದೊಡ್ಡ ಗಾಳಿಪಟಕ್ಕೆ ಜೋಡಿಸಲಾದ ಸೆಣಬಿನ ಹಗ್ಗದಲ್ಲಿ ನೇತಾಡುತ್ತಿರುವುದು ಕಾಣಿಸುತ್ತಿದೆ. ನಂತರ ಸ್ವಲ್ಪ ಹೊತ್ತಿನಲ್ಲೇ ಮನೋಹರನ್ ಅವರು ಕೆಳಗೆ ಬಿದ್ದಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅವರನ್ನು ಸ್ಥಳೀಯ ಪಾಯಿಂಟ್ ಪೆಡ್ರೊ ಆಸ್ಪತ್ರೆ (Point Pedro Hospital) ಗೆ ದಾಖಲಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ