ಐಶಾರಾಮಿ ಕಾರಿನಲ್ಲಿ ಜಾನುವಾರು ಕಳವು: ಓರ್ವನ ಬಂಧನ

Published : Jun 18, 2022, 04:45 AM IST
ಐಶಾರಾಮಿ ಕಾರಿನಲ್ಲಿ ಜಾನುವಾರು ಕಳವು: ಓರ್ವನ ಬಂಧನ

ಸಾರಾಂಶ

*   ತ್ಯಾಗರ್ತಿ ಗ್ರಾಮದಲ್ಲಿ ಜೂ.8ರಂದು ಐಷಾರಾಮಿ ಕಾರಿನಲ್ಲಿ ಜಾನುವಾರು ಕಳ್ಳತನ  *  ಹೈಫೈ ಕಾರಿನಲ್ಲಿ ಜಾನುವಾರು ಕಳವು  * ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ಕು ಜನ ಆರೋಪಿಗಳ ಬಂಧನಕ್ಕೆ ಕ್ರಮ   

ಸಾಗರ(ಜೂ.18):  ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಜೂ.8ರಂದು ಐಷಾರಾಮಿ ಕಾರಿನಲ್ಲಿ ಜಾನುವಾರು ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗ್ರಾಮಾಂತರ ಠಾಣೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.

ಗ್ರಾಮದಲ್ಲಿ ಹೈಫೈ ಕಾರಿನಲ್ಲಿ ಜಾನುವಾರು ಕಳವು ನಡೆದ ಘಟನೆ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಜಿಲ್ಲಾ ರಕ್ಷಣಾಧಿಕಾರಿ ಲಕ್ಷಿ ್ಮೕಪ್ರಸಾದ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಡಾ.ವಿಕ್ರಮ್‌ ಅಮಾತೆ ಮಾರ್ಗದರ್ಶನದಲ್ಲಿ, ಸಾಗರ ಪೊಲೀಸ್‌ ಸಹಾಯಕ ಅಧೀಕ್ಷಕ ರೋಹನ್‌ ಜಗದೀಶ್‌, ಗ್ರಾಮಾಂತರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಪ್ರವೀಣಕುಮಾರ್‌, ಕಾರ್ಗಲ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ತಿರುಮಲೇಶ್‌ ನಾಯ್‌್ಕ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.

SHIVAMOGGA: ಮದುವೆಗೆ ಅಡ್ಡಿಯಾದ ಕುಜದೋಷ: ವಿಷ ಸೇವಿಸಿದ್ದ ಮಹಿಳಾ ಪೇದೆ ಸಾವು!

ತಂಡವು ಪ್ರಕರಣದ ಮೊದಲನೇ ಆರೋಪಿ ಶಿವಮೊಗ್ಗ ಟಿಪ್ಪುನಗರ ವಾಸಿ ಮಹ್ಮದ್‌ ಇರ್ಫಾನ್‌ ಯಾನೆ ಗೌತಮ್‌ ಯಾನೆ ಶೇಖ್‌ ಮಹ್ಮದ್‌ ಸಾದಿಕ್‌ ಎಂಬಾತನನ್ನು ವಶಕ್ಕೆ ಪಡೆದಿದೆ. ಬಂಧಿತನಿಂದ .10 ಲಕ್ಷ ರು. ಮೌಲ್ಯದ ಮಹೇಂದ್ರ ಎಕ್ಸ್‌ಯುವಿ ಕಾರು, ಜಾನುವಾರು ಕಡಿದು ಮಾರಾಟ ಮಾಡಿದ ಬಾಬ್ತು .25 ಸಾವಿರ ನಗದು, ಜಾನುವಾರು ಕಟಾವು ಮಾಡಲು ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ಕು ಜನ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಸುಜಾತ, ರಘುವೀರ್‌, ಸಿಬ್ಬಂದಿ ತಾರಾನಾಥ್‌, ಸನಾವುಲ್ಲಾ, ರತ್ನಾಕರ್‌, ಸಂತೋಷ್‌ ನಾಯ್‌ಕ, ಶ್ರೀಧರ್‌, ಅಶೋಕ್‌, ರವಿಕುಮಾರ್‌, ಈರಯ್ಯ ಮಠಪತಿ, ಪ್ರಕಾಶ್‌ ಅಂಬ್ಲಿ, ಪ್ರವೀಣಕುಮಾರ್‌, ಸುನೀಲ್‌, ಗಿರೀಶ್‌ ಬಾಬು ಪಾಲ್ಗೊಂಡಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ