ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ ಹಾಕಿ 75 ವರ್ಷದ ಉದ್ಯಮಿಯಿಂದ ಮಹಿಳೆ ಅತ್ಯಾಚಾರ

Published : Jun 17, 2022, 10:47 PM IST
ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ ಹಾಕಿ 75 ವರ್ಷದ ಉದ್ಯಮಿಯಿಂದ ಮಹಿಳೆ ಅತ್ಯಾಚಾರ

ಸಾರಾಂಶ

ಅಧಿಕಾರಿಗಳ ಪ್ರಕಾರ, ಆರೋಪಿ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ.

ಮುಂಬೈ (ಜೂ. 17): ಆಘಾತಕಾರಿ ಘಟನೆಯೊಂದರಲ್ಲಿ ಮುಂಬೈನ ಜುಹು ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ 35 ವರ್ಷದ ಮಹಿಳೆಯನ್ನು 75 ವರ್ಷದ ಉದ್ಯಮಿಯೊಬ್ಬಅತ್ಯಾಚಾರ ಮಾಡಿದ್ದಾನೆ. ಈ ಸಂಬಂಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅನ್ವಯ ಆರೋಪ ಹೊರಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಅಧಿಕಾರಿಗಳ ಪ್ರಕಾರ, ಆರೋಪಿ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ಉದ್ಯಮಿಯ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮತ್ತೊಂದು ವಿಸ್ಮಯಕಾರಿ ಟ್ವಿಸ್ಟ್ ಏನೆಂದರೆ, ಉದ್ಯಮಿಯ ವಿರುದ್ಧ ದೂರು ದಾಖಲಿಸದಂತೆ ಬೆದರಿಕೆ ಹಾಕುವ "ಡಿ" ಗ್ಯಾಂಗ್‌ನಿಂದ ತನಗೆ ಫೋನ್ ಕರೆ ಬಂದಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆರೋಪಿ ಉದ್ಯಮಿ ಸಂತ್ರಸ್ತೆಯಿಂದ 2 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡಿರಲಿಲ್ಲ. ಇದಲ್ಲದೆ, ಸಂತ್ರಸ್ತ ಮಹಿಳೆ ತನ್ನ ವಿರುದ್ಧ ನಡೆಯುತ್ತಿರುವ ಅಪರಾಧಗಳ ವಿರುದ್ಧ ಮಾತನಾಡಲು ಪ್ರಯತ್ನಿಸಿದಾಗ ಉದ್ಯಮಿ ಬೆದರಿಕೆ ಹಾಕಿದ್ದ" ಎಂದು ಮಹಿಳೆ ದೂರಿದ್ದಾರೆ. 

ಇದನ್ನೂ ಓದಿ: ಬಾವನ ಮರ್ಮಾಂಗಕ್ಕೆ ಬಿಸಿ ನೀರು ಸುರಿದ ಅತ್ತಿಗೆ: ಕಾರಣ ಇಷ್ಟೇ

ಆರೋಪಿ ಉದ್ಯಮಿ ಮತ್ತು ದಾವೂದ ಇಬ್ರಾಹಿಂನೊಂದಿಗೆ ಸಂಬಂಧ ಹೊಂದಿರುವ ಇತರರು ಆಕೆಯನ್ನು ಮಾತನಾಡಿದರೆ ಕೊಲೆ ಮಾಡಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ತನಿಖೆಯನ್ನು ಈಗ ಅಂಬೋಲಿ ಪೊಲೀಸರಿಂದ ಎಂಐಡಿಸಿ ಪೊಲೀಸರಿಗೆ ವರ್ಗಾಯಿಸಲಾಗಿದೆ. ಎಂಐಡಿಸಿ ಪೊಲೀಸರು ಮಹಿಳೆಯ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಧಾನಿ ಮೋದಿ ಅಪಹಾಸ್ಯ ಮಾಡಿದ್ದ ಕೈ ಕಾರ್ಯಕರ್ತೆ ವಿರುದ್ಧ ದೂರು!
ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ, ಹೆತ್ತ ತಾಯಿಯ ಎದುರೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ರು!