SBI Robbery: ಬ್ಯಾಂಕ್‌ ದರೋಡೆ ಮಾಡಿದವನ ಸಿನಿಮೀಯ ರೀತಿ ಬಂಧನ

By Kannadaprabha NewsFirst Published Jan 19, 2022, 7:59 AM IST
Highlights

*  ಚೂರಿ ತೋರಿಸಿ 6.39 ಲಕ್ಷ ಹಾಕಿಕೊಂಡು ಪರಾರಿಗೆ ಯತ್ನ
*  ಓಡುತ್ತಿದ್ದವನ ಬೆನ್ನಟ್ಟಿಬಂಧಿಸಿದ ಪೊಲೀಸ್‌ ಉಮೇಶ, ಮಂಜುನಾಥ
*  ಬಂಧಿತ ಆರೋಪಿ ಆರೋಪಿ ಮದುಮಗ
 

ಹು​ಬ್ಬ​ಳ್ಳಿ(ಜ.19):  ಹಾಡಹಗಲೇ ಇಲ್ಲಿನ ಕೊಪ್ಪಿಕರ ರಸ್ತೆ ಎಸ್‌ಬಿಐಗೆ(State Bank of India) ಬಂದಾತ ಮ್ಯಾನೇಜರ್‌ ಹಾಗೂ ಕ್ಯಾಶಿಯರ್‌ಗೆ ಏಕಾಏಕಿ ಚೂರಿ ತೋರಿಸಿ ಬೆದರಿಸಿ 6.39 ಲಕ್ಷ ದರೋಡೆ(Robbery) ಮಾಡಿಕೊಂಡು ಪರಾರಿ ಆಗುವಾಗ ಬೆನ್ನಟ್ಟಿದ ಇಬ್ಬರು ಪೊಲೀಸರು(Police) ಆತನನ್ನು ಸಿನಿಮೀಯ ರೀತಿ ಬಂಧಿಸಿದ್ದಾರೆ(Arrest). ವಿ​ಜ​ಯ​ಪುರ ಮೂ​ಲದ ಪ್ರ​ವೀಣಕು​ಮಾರ್‌ (30) ಆರೋಪಿ. ಮಂಗ​ಳ​ವಾರ ಮ​ಧ್ಯಾಹ್ನ 2.15ರ ಸು​ಮಾ​ರಿಗೆ ಇ​ಲ್ಲಿಯ ಕೊ​ಪ್ಪಿ​ಕರ ರ​ಸ್ತೆಯ ಬ್ಯಾಂಕ್‌ಗೆ ಮಂಕಿ ಕ್ಯಾಪ್‌ ಹಾ​ಕಿ​ಕೊಂಡು ಬಂದ ಪ್ರ​ವೀಣಕು​ಮಾರ್‌ ಕೈ​ಯಲ್ಲಿ ಚೂರಿ ಹಿ​ಡಿದು ಕ್ಯಾ​ಶಿ​ಯರ್‌ ಹಾಗೂ ಮ್ಯಾ​ನೇ​ಜ​ರ್‌ಗೆ ಚಾಕು ತೋ​ರಿಸಿ ಹಣ ಕೊಡುವಂತೆ ಬೆದರಿಸಿದ್ದಾನೆ. ಕ್ಯಾಶ್‌ ಕೌಂಟರ್‌ ಇದ್ದೆಡೆ ಕರೆದೊಯ್ದು ಬ್ಯಾಗಿಗೆ 6,39,125 ಹಾಕಿಕೊಂಡಿದ್ದಾನೆ. ಬಳಿಕ ಪ​ರಾ​ರಿ​ಯಾ​ಗಲು ಮುಂದಾಗಿದ್ದಾನೆ.

ಈ ವೇಳೆ ಬ್ಯಾಂಕ್‌ ಮತ್ತು ಹೊರಭಾ​ಗ​ದಲ್ಲಿ ಸಾ​ರ್ವ​ಜ​ನಿ​ಕರು ತ​ಡೆ​ಯಲು ಮುಂದಾದ ವೇಳೆ ಅ​ವ​ರಿಗೂ ಚಾಕು ತೋರಿಸಿ ಓಡಿದ್ದಾನೆ. ಜನತೆ ಬೆನ್ನುಹತ್ತಿದ್ದನ್ನು ಕಂಡ ಟ್ರಾಫಿಕ್‌ ನಿರ್ವಹಣೆ ಮಾಡುತ್ತಿದ್ದ ಸಂಚಾರ ಠಾಣೆ ಪೊ​ಲೀ​ಸ್‌ ಸಿ​ಬ್ಬಂದಿ(Traffic Police) ಉ​ಮೇಶ ಬಂಗಾರಿ ಹಾಗೂ ಗಸ್ತಿನಲ್ಲಿದ್ದ ಉ​ಪ​ನ​ಗರ ಠಾ​ಣೆಯ ಮಂಜು​ನಾಥ ಹಾ​ಲ​ವರ ಕಳ್ಳನನ್ನು(Thief) ಬೆನ್ನತ್ತಿದರು. ಸುಮಾರು 200 ಮೀ. ಓಡಿ ಆತನನ್ನು ಹಿಡಿದಿದ್ದಾರೆ. ತಕ್ಷಣ ಹಣ ಮತ್ತು ಆತನ ಬಳಿಯಿದ್ದ ಚಾ​ಕು ವಶಕ್ಕೆ ಪಡೆದಿದ್ದಾರೆ.

Bengaluru Robbery: ಸಾಲ ಕೊಡದ್ದಕ್ಕೆ ಸೋದರತ್ತೆ ಮನೆ ದರೋಡೆ ನಂಬಿಕೆ ದ್ರೋಹಿ..!

ಈ ಕು​ರಿತು ಸು​ದ್ದಿ​ಗೋ​ಷ್ಠಿ​ಯಲ್ಲಿ ಮಾ​ತ​ನಾ​ಡಿದ ಪೊ​ಲೀಸ್‌ ಆ​ಯುಕ್ತ ಲಾ​ಬೂ​ರಾಮ್‌(Laburam), ಆರೋಪಿ ಎ​ರಡು ದಿ​ನ​ಗಳ ಹಿಂದೆ ಹು​ಬ್ಬ​ಳ್ಳಿಗೆ(Hubballi) ಬಂದು ಲಾ​ಡ್ಜ್‌​ನಲ್ಲಿ ವಾ​ಸ​ವಾ​ಗಿ​ದ್ದ ಎಂಬ ಮಾ​ಹಿತಿ ದೊ​ರೆ​ತಿದೆ. ಈ ಬಗ್ಗೆ ಮತ್ತು ಆ​ತನ ಹಿ​ನ್ನೆ​ಲೆಯ ಇ​ನ್ನಷ್ಟು ವಿ​ಚಾ​ರಣೆ ಮಾ​ಡ​ಲಾ​ಗು​ತ್ತಿ​ದೆ. ಪೊ​ಲೀ​ಸ್‌ ಸಿ​ಬ್ಬಂದಿ ಸ​ಮಯಪ್ರಜ್ಞೆ ಹಾಗೂ ಸಾ​ರ್ವ​ಜ​ನಿ​ಕರ ಸ​ಹ​ಕಾ​ರ​ದಿಂದ ಹಾ​ಡ​ಹ​ಗಲೇ ಬ್ಯಾಂಕ್‌ ದ​ರೋಡೆ ಮಾ​ಡು​ತ್ತಿದ್ದ ಆ​ರೋ​ಪಿ​ ಬಂಧಿ​ಸ​ಲಾ​ಗಿದೆ. ಜನತೆ ಕೂಡ ಉ​ತ್ತಮ ಸ​ಹ​ಕಾರ ನೀ​ಡಿದ್ದಾರೆ.

ಆರೋಪಿ ಹಿಡಿದ ಕ​ರ್ತ​ವ್ಯ​ನಿ​ರತ ಪೊ​ಲೀಸ್‌ ಸಿ​ಬ್ಬಂದಿ ಉ​ಮೇಶ ಬಂಗಾರಿ ಹಾಗೂ ಮಂಜು​ನಾಥ ಹಾ​ಲ​ವರ ಅವರಿಗೆ ತಲಾ 25 ಸಾ​ವಿರ ಬ​ಹು​ಮಾನ ಘೋ​ಷಣೆ ಮಾ​ಡ​ಲಾ​ಗಿದೆ ಎಂದು ತಿ​ಳಿ​ಸಿ​ದರು. ಈ ವೇಳೆ ದ​ಕ್ಷಿಣ ವಿ​ಭಾ​ಗ ಎ​ಸಿಪಿ ಆ​ರ್‌.ಕೆ. ಪಾ​ಟೀಲ, ಶ​ಹರ ಠಾಣೆ ಪಿಐ ಆ​ನಂದ ಒ​ನ​ಕುದ್ರೆ, ಉ​ಪ​ನ​ಗರ ಠಾಣೆ ಪಿಐ ಡಿ.ಬಿ. ರ​ವಿ​ಚಂದ್ರ ಸೇ​ರಿ​ ಇ​ತ​ರರು ಇ​ದ್ದ​ರು.

ಆರೋಪಿ ಮದುಮಗ

ದರೋಡೆಗೆ ಯತ್ನಿಸಿದವ ಮೈ​ಸೂರಿನ(Mysuru) ಖಾ​ಸಗಿ ಕಂಪ​ನಿ​ಯಲ್ಲಿ ಕೆ​ಲಸ ನಿ​ರ್ವ​ಹಿ​ಸು​ತ್ತಿದ್ದ. ಅಲ್ಲದೆ, ಸದ್ಯ ಮ​ದುವೆ(Marriage) ನಿ​ಶ್ಚ​ಯ​ವಾ​ಗಿತ್ತು ಎಂದು ಹೇಳಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ತನಿಖೆಯಿಂದಲೇ ಸ​ಮಗ್ರ ಮಾ​ಹಿತಿ ಪ​ಡೆ​ಯ​ಲಾ​ಗು​ವುದು ಎಂದು ಕಮಿಷನರ್‌ ಲಾ​ಬೂ​ರಾಮ್‌ ತಿ​ಳಿ​ಸಿ​ದರು.

Robbery Case: ತಾನೇ ಖಾರದ ಪುಡಿ ಎರಚಿಕೊಂಡು ದರೋಡೆ ಕಥೆ ಕಟ್ಟಿದ ಭೂಪ..!

ಅಂಗಡಿ, ಫೈನಾನ್ಸ್‌ ನೌಕರರ ಸುಲಿಗೆ ಮಾಡುತ್ತಿದ್ದ ಚೋಟಾ ಟೈಗರ್‌ ಬಂಧನ

ಬೆಂಗಳೂರು: ಅಂಗಡಿ-ಮುಂಗಟ್ಟುಗಳು, ಫೈನಾನ್ಸ್‌ ನೌಕರರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿ ಶೀಟರ್‌ನೊಬ್ಬನನ್ನು(Rowdysheeter) ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿ(Arrest) ಜೈಲಿಗಟ್ಟಿದ್ದಾರೆ.  ಹೆಬ್ಬಾಳ ಕನಕನಗರದ ತಬ್ರೇಜ್‌ ಪಾಷಾ ಅಲಿಯಾಸ್‌ ಚೋಟಾ ಟೈಗರ್‌(44)(Chota Tiger) ಬಂಧಿತ(Arrest) ರೌಡಿ ಶೀಟರ್‌. ಕಳೆದ ತಿಂಗಳು ಅಂಗಡಿಗಳಲ್ಲಿ ಫೈನಾನ್ಸ್‌ ಹಣ ಸಂಗ್ರಹಿಸಿಕೊಂಡು ಜೆ.ಸಿ.ನಗರದ ಚರ್ಚ್‌ ರಸ್ತೆಯ ಶ್ರೀನಿವಾಸ ಬೇಕರಿ ಬಳಿ ಹೋಗುತ್ತಿದ್ದ ಫೈನಾನ್ಸ್‌ ಕಂಪನಿಯೊಂದರ(Finance Company) ನೌಕರರನ್ನು ಅಪರಿಚಿತ ವ್ಯಕ್ತಿಯೊಬ್ಬ ಅಡ್ಡಗಟ್ಟಿ ಬೆದರಿಸಿ ಆತನಿಂದ 28 ಸಾವಿರ ನಗದು ಸುಲಿಗೆ ಮಾಡಿ ಪರಾರಿಯಾಗಿದ್ದ. 

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಜೆ.ಸಿ.ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮುನಿಕೃಷ್ಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 10 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!