
ಕಿರಣ್ .ಕೆ.ಎನ್.ಕ್ರೈಂ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.
ಬೆಂಗಳೂರು (ಮಾ.25): ಸಾಮಾನ್ಯವಾಗಿ ಕಳ್ಳತನ ಮಾಡೋರು ಅಂದ್ರೆ ಹೆಚ್ಚಾಗಿ ಪುರುಷರೇ ಇರ್ತಾರೇ.ಆದರೆ ಇಲ್ಲೋಬ್ಬಳು ಮಹಿಳೆ ಬರೋಬ್ಬರಿ 20 ಬಾರಿ ಜೈಲಿಗೆ ಹೋಗಿ ಬಂದ್ರು ಬುದ್ದಿ ಕಲಿತ್ತಿಲ್ಲ. ಹೀಗೆ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನ ವಿದ್ಯಾರಣ್ಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಯಂತಿ ಅಲಿಯಾಸ್ ಕುಟ್ಟಿಯಮ್ಮ ಅಂತ. ಕಳೆದ 10 ವರ್ಷಗಳ ಹಿಂದೆ ಕಳ್ಳತನಕ್ಕೆ ಇಳಿದಿರುವ ಈಕೆ ಇವತ್ತಿಗೂ ಕಳ್ಳತನವನ್ನೆ ಮಾಡುತ್ತಿದ್ದಾಳೆ. ಸದ್ಯ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಕೇಸಲ್ಲಿ ಅರೆಸ್ಟ್ ಮಾಡಿ ಮತ್ತೆ ಕೃಷ್ಣನ ಜನ್ಮಸ್ಥಾನಕ್ಕೆ ಕಳಿಸಿದ್ದಾರೆ.
ಜಯಂತಿ ಇಂದು ನಿನ್ನೆ ಕಳ್ಳತನಕ್ಕೆ ಇಳಿದವಳಲ್ಲ ಸುಮಾರು 10 ವರ್ಷಗಳ ಹಿಂದೆಯೇ ಕಳ್ಳತನಕ್ಕೆ ಇಳಿದವಳು. ಇವತ್ತಿಗೂ ಅದೇ ವೃತ್ತಿಯನ್ನ ಮಾಡಿಕೊಂಡಿದ್ದಾಳೆ. ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಕೆ ಮೇಲೆ ಬರೋಬ್ಬರಿ 23 ಕೇಸುಗಳಿವೆ. ಇದುವರೆಗೂ 20 ಕ್ಕೂ ಹೆಚ್ಚು ಬಾರಿ ಜೈಲಿಗೆ ಹೋಗಿ ಬಂದಿದ್ದಾಳೆ. ಆದರೆ ಇಷ್ಟಾದರೂ ಬುದ್ದಿ ಕಲಿಯದ ಜಯಂತಿ ಕಳ್ಳತನ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾಳೆ. ಅದರಲ್ಲೂ ಎಲ್ಲರೂ ರಾತ್ರಿ ವೇಳೆ ಕಳ್ಳತನಕ್ಕೆ ಹೋದ್ರೆ ಜಯಂತಿ ಹಗಲಲ್ಲೆ ಬೀಗ ಹಾಕಿರುವ ಮನೆಗಳಿಗೆ ಕನ್ನ ಹಾಕುತ್ತಾಳೆ. ಕಳ್ಳತನ ಮಾಡುವ ಮೊದಲು ಏರಿಯಾದಲ್ಲಿ ನಡೆದುಕೊಂಡೆ ಹೋಗುತ್ತಾಳೆ.
ಪ್ರಾಚೀನ ಕಾಲದ ವಿಷ್ಣು ವಿಗ್ರಹ ವಿದೇಶಕ್ಕೆ ರಫ್ತು ಮಾಡಲು ಯತ್ನ: ಆರೋಪಿ ಬಂಧನ
ಬೀಗ ಹಾಕಿದೆ ಅನ್ನಿಸುವ ಮನೆಗಳಿಗೆ ಹೋಗಿ ಮೊದಲಿಗೆ ಕಾಲಿಂಗ್ ಬೆಲ್ ಮಾಡ್ತಾಳೆ. ಯಾರಾದ್ರು ಬಾಗಿಲು ತೆಗೆದ್ರೇ, ಅಡ್ರೆಸ್ ಕೇಳಲು ಬಂದಿದೇ ಎಂದು ಹೇಳಿ ಅವರು ಇಲ್ವಾ ಎನ್ನುತ್ತಾಳೆ. ಆಕಸ್ಮಾತ್ ಯಾರು ಬಾಗಿಲು ತೆಗೆಯಲು ಇಲ್ಲಾ ಅನ್ನೊದು ಪಕ್ಕ ಆಯ್ತು. ಅಲ್ಲೇ ಅಕ್ಕಪಕ್ಕದಲ್ಲಿ ಎಲ್ಲಿಯಾದ್ರು, ಪಾಟ್ , ಸ್ಲಿಪ್ಪರ್ ಸ್ಟಾಂಡ್‌ನಲ್ಲಿ ಕೀ ಇಟ್ಟಿದ್ದಾರೆ ಎಂದು ಹುಡುಕಿ ಅಲ್ಲಿ ಕೀ ತೆಗೆದುಕೊಂಡು ಮನೆಯಲ್ಲಿ ಇದ್ದ ಎಲ್ಲಾ ಒಡವೆಗಳನ್ನು ದೋಚುತಿದ್ಲು ಅನ್ನೋದು ಪೊಲೀಸರ ವಿಚಾರಣೆ ಹಾಗೂ ತನಿಖೆ ವೇಳೆ ಗೊತ್ತಾಗಿದೆ.
ಸದ್ಯ ಜಯಂತಿಯ ಬಂಧನದಿಂದ 75 ಗ್ರಾಂ ಚಿನ್ನ, 630 ಗ್ರಾಂ ಬೆಳ್ಳಿ ವಸ್ತುಗಳನ್ನ ವಿದ್ಯಾರಣ್ಯಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ 20 ಕ್ಕೂ ಹೆಚ್ಚು ಬಾರಿ ಜೈಲಿಗೆ ಹೋಗಿ ಬಂದಿರುವ ಜಯಂತಿ ಇನ್ನು ಮುಂದೆ ಪಾಠ ಕಲಿಯುತ್ತಾಳ ಎಂಬುದನ್ನು ಕಾದು ನೋಡಬೇಕಿದೆ.
'ಡ್ರಗ್ಸ್ ಪೆಡ್ಲರ್‌ಗಳ ಎನ್‌ಕೌಂಟರ್ ಮಾಡಿ: ಮಾದಕ ವ್ಯಸನಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು, ಡ್ರಗ್ಸ್ ಪೆಡ್ಲರ್‌ಗಳನ್ನು ಎನ್‌ಕೌಂಟರ್ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು, ಶಾಲೆಗಳಲ್ಲಿ ನೈತಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಪಕ್ಷಾತೀತವಾಗಿ ಸಲಹೆ ನೀಡಿದ ಸದಸ್ಯರು, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾರಾಟದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಕಠಿಣ ಕ್ರಮದ ಮೂಲಕ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
Bagalkot: ಮುಸ್ಲಿಂ ಹೆಸರಲ್ಲಿ ಕೋಮು ದ್ವೇಷದ ಪೋಸ್ಟ್: ಹಿಂದೂ ಯುವಕ ಅರೆಸ್ಟ್
ನಿಯಮ 330ರ ಅಡಿ ರಾಜ್ಯಾದ್ಯಂತ ಅದರಲ್ಲೂ, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಡ್ರಗ್ಸ್ ಮಾರಾಟದಿಂದ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮಾದಕ ವ್ಯಸನಿಗಳಾಗುತ್ತಿರುವ ಕುರಿತು ಸುಮಾರು ಎರಡು ಗಂಟೆ ಕಾಲ ಸದನದಲ್ಲಿ ಚರ್ಚೆ ನಡೆಯಿತು. ಬಿಜೆಪಿಯ ಶಶೀಲ್ ಜಿ.ನಮೋಶಿ ಮಾತನಾಡಿ, ಪಂಜಾಬ್ ಬಿಟ್ಟರೆ ಅತ್ಯಂತ ಹೆಚ್ಚು ಡ್ರಗ್ಸ್ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿವೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಡಿಒ ನೇತೃತ್ವದಲ್ಲಿ ತಂಡ ಹಾಗೂ ಬೆಂಗಳೂರಿನ ಶಾಲೆ, ಕಾಲೇಜುಗಳಲ್ಲಿ ತನಿಖಾ ತಂಡಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್‌ನ ಎಸ್.ರವಿ ಮಾತನಾಡಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಗಾಂಜಾ, ಡ್ರಗ್ಸ್ ಹೆಚ್ಚುತ್ತಿದೆ. ಕೇಂದ್ರದ ಎನ್‌ಸಿಬಿ ಮಾದರಿಯಲ್ಲಿ ರಾಜ್ಯದಲ್ಲಿ ಎಸ್‌ಸಿಬಿಯನ್ನು ರಚಿಸಬೇಕು. ಪ್ರಮುಖವಾಗಿ ಡ್ರಗ್ ಮಾರಾಟ ಮಾಡುವವರ ವಿರುದ್ಧ ಕಾನೂನು ಅತ್ಯಂತ ಸರಳವಾಗಿದೆ, ಹಾಗಾಗಿ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ