
ಬೆಂಗಳೂರು(ಮಾ. 24) ರಾಯಿಟರ್ಸ್ (Reuters)ಸುದ್ದಿ ಸಂಸ್ಥೆಯ ಪತ್ರಕರ್ತೆ(Journalist) ನೇಣು (Hang)ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅನುಮಾನಾಸ್ಪದ ರೀತಿ ಸಾವು (Death) ಕಂಡಿದ್ದು ಪೊಲೀಸರು (Bengaluru Police) ಎಲ್ಲ ಕೋನಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ
ರಾಯಿಟರ್ಸ್ ಸುದ್ದಿ ಸಂಸ್ಥೆಯ ಶ್ರುತಿ (35) ಸಾವನ್ನಪ್ಪಿದ್ದಾರೆ. ಶ್ರುತಿ ಅವರನ್ನು ಪತಿ ಅನೀಶ್ ಕೊಯಾಡನ್ ಕೊಲೆ ಮಾಡಿದ್ದಾನೆ ಎಂದು ಶ್ರುತಿ ಸಹೋದರ ನಿಶಾಂತ್ ನಾರಾಯಣನ್ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2017 ರಲ್ಲಿ ಶ್ರು ಹಾಗೂ ಅನೀಶ್ ಮದುವೆಯಾಗಿತ್ತು. ಬೆಂಗಳೂರಿಗೆ ಮರಳಿದ್ದ ದಂಪತಿ ವೈಟ್ ಫೀಲ್ಡ್ ಸಮೀಪದ ನಲ್ಲೂರಹಳ್ಳಿ ರಸ್ತೆಯಲ್ಲಿರುವ ಎಸ್. ವಿ. ಮೈಪೇರ್ ಅಪಾರ್ಟ್ ಮೆಂಟ್ನಲ್ಲಿ ವಾಸವಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅನೀಶ್ ಹಾಗೂ ಶ್ರುತಿ ನಡುವಿನ ಸಂಬಂಧ ಹಳಸಿತ್ತು. ಸಂಬಳದ ಹಣವನ್ನು ತವರು ಮನೆಗೆ ನೀಡುತ್ತೀಯಾ ಎಂದು ಪತ್ನಿ ಮೇಲೆ ಗಂಡ ಕೂಗಾಡುತ್ತಿದ್ದ ಎಂದು ಸಹೋದರ ಆರೋಪಿಸಿದ್ದಾನೆ.
ಶ್ರುತಿ ಶವವಾಗಿ ಪತ್ತೆಯಾದ ದಿನ ಆಕೆಯ ಪತಿ ಅನೀಶ್ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಎಂಬಲ್ಲಿಗೆ ತೆರಳಿದ್ದ. ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಾಯಿ ಮನೆಯಿಂದ ಕರೆ ಮಾಡಿದರೂ ಉತ್ತರ ಸಿಗದ ಹಿನ್ನೆಲೆಯಲ್ಲಿ ಬಂದು ನೋಡಿದಾಗ ವಿಚಾರ ಗೊತ್ತಾಗಿದೆ.
ಬೆಂಗಳೂರಿನಲ್ಲಿ ಶೃತಿಯ ಸಹೋದರ ಇಂಜಿನಿಯರ್ ಆಗಿರುವ ನಿಶಾಂತ್ ಕೂಡಲೇ ಆಕೆಯ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿಯನ್ನು ಫೋನ್‌ನಲ್ಲಿ ಸಂಪರ್ಕಿಸಿ ಆಕೆಯ ಕೊಠಡಿಯನ್ನು ಪರಿಶೀಲಿಸಿದ್ದಾರೆ. ಆದರೆ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಬಾಲ್ಕನಿಯಿಂದ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸಹೋದರಿ ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಬೆಂಗಳೂರಿನಲ್ಲೇ ಇರುವ ಶ್ರುತಿ ಸಹೋದರ ನಿಶಾಂತ್ ತಕ್ಷಣ ಸಹೋದರಿ ವಾಸವಿದ್ದ ಜಾಗಕ್ಕೆ ಬಂದಿದ್ದ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನೀಶ್ ಪ್ರತಿನಿತ್ಯ ತಂಗಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಶ್ರುತಿಯ ಸಹೋದರ ನಿಶಾಂತ್ ಆರೋಪಿಸಿದ್ದಾರೆ.
ನಡು ಬೀದಿಯಲ್ಲಿ ನಾರಿಯರ ಬಿಗ್ ಫೈಟ್, ನಿಯಂತ್ರಿಸುವಲ್ಲಿ ಪೊಲೀಸರು ಸುಸ್ತೋ ಸುಸ್ತು
ಪ್ರತಿ ತಿಂಗಳು ತನ್ನ ಸಂಬಳದ ಒಂದು ಭಾಗವನ್ನು ತನ್ನ ಪೋಷಕರ ಮನೆಗೆ ಕಳುಹಿಸುವ ಶ್ರುತಿ ಅಭ್ಯಾಸದಿಂದಾಗಿ ಇಬ್ಬರ ನಡುವೆ ಘರ್ಷಣೆ ಉಂಟಾಗಿದೆ. ಅಮಲು ಏರಿಸಿಕೊಂಡ ಗಂಡ ಪತ್ನಿಯನ್ನು ಮನಸಿಗೆ ಬಂದಂತೆ ನಿಂದಿಸುತ್ತಿದ್ದ ಎಂದು ಸಹೋದರ ದೂರಿನಲ್ಲಿ ಹೇಳಿದ್ದಾರೆ.
ಪತ್ನಿಯ ದೈನಂದಿನ ಚಲನವಲನಗಳ ಮೇಲೆ ನಿಗಾ ಇಡಲು ಮನೆ ಸುತ್ತ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿದ್ದ. ಆಕೆ ಹೇಳಿದ್ದನ್ನೆಲ್ಲಾ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಎಂಬ ಆರೋಪವನ್ನು ಸಹೋದರ ಮಾಡಿದ್ದಾನೆ. ಅನೀಶ್ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದು ನಿಂದಿಸುತ್ತಿದ್ದ ಎಂದು ನಿಶಾಂತ್ ಪೊಲೀಸರಿಗೆ ತಿಳಿಸಿದ್ದಾನೆ. ವರದಿಗಳ ಪ್ರಕಾರ, ನಿಶಾಂತ್ ಪತ್ನಿ ಮಾ. 20 ಮತ್ತು 21 ರಂದು ಶ್ರುತಿಯೊಂದಿಗೆ ಪೋನ್ ನಲ್ಲಿ ಮಾತನಾಡಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಇದಾದ ಮೇಲೆ ಮನೆಗೆ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶ್ರುತಿ ಪತ್ತೆಯಾಗಿದ್ದಾರೆ.
ಜನವರಿಯಲ್ಲಿಯೂ ಶ್ರುತಿ ಮೇಲೆ ಗಂಡ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಶ್ರುತಿ ಕೂಗಿಕೊಂಡ ಕಾರಣ ಸೆಕ್ಯೂರಿಟಿ ಗಾರ್ಡ್ ಗಳು ಆಕೆಯ ರಕ್ಷಣೆ ಮಾಡಿದ್ದರು. ಶೃತಿ ವಿದ್ಯಾನಗರ ಚಾಲಾ ರಸ್ತೆಯಲ್ಲಿ ವಾಸಿಸುವ ಮಾಜಿ ಶಿಕ್ಷಕ ಮತ್ತು ಪರಿಸರ ಹೋರಾಟಗಾರ ನಾರಾಯಣನ್ ಪೆರಿಯ ಮತ್ತು ಮಾಜಿ ಶಿಕ್ಷಕಿ ಸತ್ಯಭಾಮಾ ಅವರ ಪುತ್ರಿ. ರಾಯಿಟರ್ಸ್ ಮಂಗಳವಾರ ಆಂತರಿಕ ಮೇಲ್ ಮೂಲಕ ಶ್ರುತಿ ಸಾವಿನ ಸುದ್ದಿಯನ್ನು ಹಂಚಿಕೊಂಡಿತು ಮತ್ತು ಅವರಿಗಾಗಿ ಎರಡು ನಿಮಿಷಗಳ ಮೌನವನ್ನು ಆಚರಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ