Bus Accident: ದತ್ತಪೀಠದ ಬಳಿ ಕಂದಕಕ್ಕೆ ಉರುಳಿದ ಖಾಸಗಿ ಬಸ್

Published : Mar 24, 2022, 08:19 PM ISTUpdated : Mar 24, 2022, 08:54 PM IST
Bus Accident: ದತ್ತಪೀಠದ ಬಳಿ ಕಂದಕಕ್ಕೆ ಉರುಳಿದ ಖಾಸಗಿ ಬಸ್

ಸಾರಾಂಶ

* ದತ್ತಪೀಠ ರಸ್ತೆಯಲ್ಲಿ ಖಾಸಗಿ ಬಸ್ ಕಂದಕಕ್ಕೆ‌  * ಮತ್ತೊಂದು ಖಾಸಗಿ ಬಸ್ ಅಪಘಾತ * ಬಸ್ ಕಂದಕಕ್ಕೆ ಉರುಳಿ ಇಬ್ಬರಿಗೆ ಗಂಭೀರ ಗಾಯ  * ದತ್ತಪೀಠಕ್ಕೆ ತೆರಳುವ ದಾರಿಯಲ್ಲಿ ಅಪಘಾತ

ಚಿಕ್ಕಮಗಳೂರು (ಮಾ. 24) ಖಾಸಗಿ ಬಸ್ (Private Bus) ಅಪಘಾತದಲ್ಲಿ (Accident) ಆರು ಜನ ಮೃತಪಟ್ಟ ಘಟನೆ ಮಾಸುವಮುನ್ನ ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಖಾಸಗಿ ಬಸ್ಸೊಂದು (Bus)  ಕಂದಕ್ಕೆ ಉರುಳಿರುವ ಘಟನೆ ನಡೆದಿದೆ. ದತ್ತಪೀಠದ (Dattatreya Swamy Dattapita)ರಸ್ತೆಯಲ್ಲಿ ಚಾಲಕನ ನಿಯಂತ್ರಣ‌  ತಪ್ಪಿ ಕಂದಕಕ್ಕೆ ಖಾಸಗಿ ಬಸ್ ಬಿದ್ದಿದೆ. ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ  ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ದತ್ತಪೀಠದ ರಸ್ತೆಯ ಅತ್ತಿಗುಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ 40ಅಡಿ ಆಳದ  ಕಂದಕಕ್ಕೆ ಉರುಳಿ ಬಿದ್ದ ಘಟನೆ ಸಂಜೆ ನಡೆದಿದೆ. ಬಸ್ ಕಂದಕಕ್ಕೆ ಹಲವರಿಗೆ ಗಾಯ ,ಮೂರು ವರ್ಷದ ಮಗು ಕೂಡ ಪ್ರಾಣಾಪಾಯದಿಂದ ಪಾರಾಗಿದೆ.

ದತ್ತಪೀಠದಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿ ದ್ದಾಗ ಘಟನೆ ಸಂಭವಿಸಿದ್ದು, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಗಿರಿಗೆ  ತೆರಳಿದ್ದ 7ಜನರು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಓರ್ವ ವೃದ್ಧೆಯ ಸ್ಥಿತಿ ಗಂಭೀರವಾಗಿದ್ದು ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರು ವರ್ಷದ ಹೆಣ್ಣು ಮಗು ಅಪಾಯದಿಂದ ಪಾರಾಗಿದ್ದಾಳೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

 ಗಾಯಗೊಂಡವರ ಮಾಹಿತಿ : ರಶೀದಾ(45), ಜರೀನಾ ಬಾನು(50), ಬೇಗಂಬಿ(74), ಶಾಯಿನಾಬಾನು(23), ಸಾಧಿಕಾ ಶೇಖ್(5), ಸಾಧೀಕ್(23), ಸೈದಾಬಾನು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಬೇಗಂಬಿ ಮತ್ತು ಶಾಯಿನಾ ಬಾನು ಹುಬ್ಬಳ್ಳಿ ಮೂಲದವರು ಹಾಗೂ ರಶೀದಾಬಾನು ಚಿಕ್ಕಮಗಳೂರು ತಾಲ್ಲೂಕು ಅತ್ತಿಗುಂಡಿಯವರಾದ್ದಾರೆ. ಗಾಯಗೊಂಡವರನ್ನು ಚಿಕ್ಕಮಗಳೂರು ನಗರದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾ ಖಲಿಸಲಾಗಿದೆ.ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಸಮೀಪದಲ್ಲಿ ತಗ್ಗು ಪ್ರದೇಶದಲ್ಲಿ ಬಸ್ ನಿಲ್ಲಿಸಲಾಗಿತ್ತು. ಬಸ್ ಹೊರಡುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಆಳಕ್ಕೆ ಬಸ್ ಉರುಳಿದೆ. ಸಂಜೆ ವೇಳೆ ಮಳೆಯೊಂದಿಗೆ ಮಂಜು ಕವಿದ ವಾತವರಣವಿದ್ದರಿಂದ ಘಟನೆ ಸಂಭವಿಸಲು ಕಾರಣ ಎನ್ನಲಾಗುತ್ತಿದೆ.ತಕ್ಷಣ ಸ್ಥಳೀಯರು ಅಂಬ್ಯುಲೆನ್ಸ್‍ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಬಸ್‍ನಲ್ಲಿ ಕಡಿಮೆ ಪ್ರಯಾಣಿಕರಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ, ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತೆ ಆವರಣದಲ್ಲಿ ಜನರು ಧಾವಿಸಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಎಸ್‍ಪಿ ಶೃತಿ, ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿನೀಡಿ ಘಟನೆ ಸಂಬಂಧ ಪರಿಶೀಲನೆ ನಡೆಸಿದರು.

Road Accident: ಐವರು ವಿದ್ಯಾರ್ಥಿಗಳ ಜೀವ ತೆಗೆದ ಬಸ್.. ಹಾಸನಲ್ಲಿ ಭೀಕರ ಅಪಘಾತ

ತುಮಕೂರಿನ ಪಾವಗಡ ಬಳಿ ಖಾಸಗಿ ಬಸ್ ಪಲ್ಟಿಆಗಿ ಸುಮಾರ್ 8 ಜನರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದೊಡ್ಡ ದುರಂತ ಜನರ ಮನಸ್ಸಲ್ಲಿ ಮಾಸುವ ಮುನ್ನವೇ ಚಾಮರಾಜನಗರ ಜಿಲ್ಲೆಯಲ್ಲೂ ಬಸ್ ಪಲ್ಟಿಯಾಗಿತ್ತು.

ಹನೂರು ತಾಲುಕು   ಮಂಗಲ-ಕಾಮಗೆರೆ ನಡುವಿನ ರಸ್ತೆಯಲ್ಲಿ ಎದುರಿನಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಹಳ್ಳ ಕ್ಕೆ ಬಸ್ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಹಲವರು ಗಾಯಗೊಂಡಿದ್ದು ಗಾಯಾಳುಗಳನ್ಮು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದಕ್ಕೂ ಒಂದು ವಾರ ಮುನ್ನ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕುಡುವಾಳೆ ಬಳಿ ಕೊಳ್ಳೇಗಾಲದಿಂದ ಪಿ.ಜಿ.ಪಾಳ್ಯಕ್ಕೆ ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿತ್ತು. ಬಸ್ ಸೇತುವೆಯಿಂದ ಕಾಲುವೆಗೆ ಉರುಳಿ ಬಿದ್ದಿತ್ತು.  ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 96 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮಾಳಿಗನತ್ತ ಗ್ರಾಮದ ಶಿವಮ್ಮ(70), ಪಿ.ಜಿ.ಪಾಳ್ಯದ ರಮೇಶ್(28), ಆಸ್ಪತ್ರೆಗೆ ಸಾಗಿಸ್ತಿದ್ದಾಗ ಮಾರ್ಗಮಧ್ಯೆ ಸಣ್ಣರಾಯಪ್ಪ(60) ಮೃತಪಟ್ಟಿದ್ದರು.

ತುಮಕೂರಿನಲ್ಲಿ ಬಸ್ ದುರಂತ
ಮಾರ್ಚ್ 19ರಂದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು, ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದು, ಹಲವು ಗಾಯಗೊಂಡಿದ್ದರು. ಬಾಳಿ ಬದುಕಬೇಕಿದ್ದ ಜೀವಗಳು ಕೊನೆಯಾಗಿದ್ದವು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!