
ಹೊಳೆಹೊನ್ನೂರು (ಆ.03): ಇಲ್ಲಿಗೆ ಸಮೀಪದ ಅರದೋಟ್ಲು ಬಳಿ ಕೌಟುಂಬಿಕ ಸಮಸ್ಯೆ ಹಿನ್ನೆಲೆ ಭಾವನನ್ನೇ ರಸ್ತೆ ಅಪಘಾತ ನೆಪದಲ್ಲಿ ಕೊಲ್ಲಲು ಯತ್ನಿಸಿದ ಭಾಮೈದುನನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಆನವೇರಿ ಕಾಲೇಜಿನ ಉಪನ್ಯಾಸಕ ರಂಗಪ್ಪ (53) ಅಪಘಾತದಿಂದ ಗಾಯಗೊಂಡ ವ್ಯಕ್ತಿಯಾಗಿದ್ದು, ಡಿಕ್ಕಿ ಹೊಡೆಸಿದ ಇಬ್ಬರಲ್ಲಿ ಅಶೋಕ ಎಂಬಾತನನ್ನು ಬಂಧಿಸಲಾಗಿದೆ.
ಆಗಿದ್ದೇನು?: 17 ವರ್ಷಗಳ ಹಿಂದೆ ಅಕ್ಕನ ಮಗಳಾದ ಭಾಗ್ಯ ಅವರನ್ನು ರಂಗಪ್ಪ ಮದುವೆಯಾಗಿದ್ದರು. ಭಾಗ್ಯ ರಂಗಪ್ಪ ಸಹಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಎರಡೂವರೆ ವರ್ಷಗಳ ಹಿಂದೆ ಉಪನ್ಯಾಸಕ ರಂಗಪ್ಪ ಮತ್ತು ಭಾಗ್ಯ ದಾಂಪತ್ಯದಲ್ಲಿ ಕುಟುಂಬದ ವಿಚಾರದಲ್ಲಿ ತಕಾರಾರು ಉಂಟಾಗಿದೆ. ಇದರಿಂದಾಗಿ ತಮ್ಮ ಮೂವರು ಮಕ್ಕಳಲ್ಲಿ ಒಬ್ಬಳು ಉಪನ್ಯಾಸಕರ ಬಳಿ ವಾಸವಾಗಿದ್ದರೆ, ಉಳಿದ ಇಬ್ಬರು ಭಾಗ್ಯ ಬಳಿ ವಾಸಿಸುತ್ತಿದ್ದರು.
ರಾಜ್ಯ ಕಾಂಗ್ರೆಸಿಗರಿಗೆ ಸೂಟ್‌ಕೇಸ್ ಟಾರ್ಗೆಟ್: ಎನ್.ರವಿಕುಮಾರ್ ಲೇವಡಿ
ರಂಗಪ್ಪ ಅವರನ್ನು ಬಿಟ್ಟು ಹೋದ ಮೇಲೂ ಪತ್ನಿ ಭಾಗ್ಯ ಅವರು ಆಗಿಂದಾಗ್ಗೆ ಪೋನ್ ಮಾಡಿ, ಆಸ್ತಿ ಕೊಡು ಇಲ್ಲವಾದರೆ ನನ್ನ ತಮ್ಮ ಅಶೋಕ ಮತ್ತು ಅಣ್ಣಪ್ಪ ಅವರಿಗೆ ಹೇಳಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಆಗ ರಂಗಪ್ಪ ಅವರು ಎಲ್ಲ ಆಸ್ತಿಯೂ ನಿನಗೇ ಕೊಡುತ್ತೇನೆ, ಮನೆಗೆ ಬಾ ಎಂದು ಕರೆಯುತ್ತಿದ್ದರು. ಆದರೆ, ಶಿಕ್ಷಕಿ ಮನೆಗೆ ಬಾರದೇ ಕಲ್ಲಿಹಾಳ್ ಸರ್ಕಲ್‌ನಲ್ಲಿ ಅಣ್ಣನ ಮಗ ಅಣ್ಣಪ್ಪನೊಂದಿಗೆ ವಾಸವಾಗಿದ್ದರು.
ಬುಧವಾರ ಬೆಳಗ್ಗೆ ರಂಗಪ್ಪ ಅವರು ದಾನವಾಡಿ ಗ್ರಾಮದಿಂದ ಬೈಕ್ನಲ್ಲಿ ಭದ್ರಾವತಿಗೆ ಹೋಗಿ, ತಾವು ನೂತನವಾಗಿ ಕಟ್ಟಿಸುತ್ತಿರುವ ಮನೆ ನೋಡಿಕೊಂಡು ವಾಪಸ್ಸು ದಾನವಾಡಿಗೆ ಬರುತ್ತಿದ್ದರು. ಅರದೊಟ್ಲು ಗ್ರಾಮ ಮಾರ್ಗವಾಗಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಲಗೇಜ್ ವಾಹನವೊಂದು ರಂಗಪ್ಪ ಅವರ ಬೈಕ್‌ಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದಾಗಿ ರಂಗಪ್ಪ ರಸ್ತೆ ಪಕ್ಕದಲ್ಲಿದ್ದ ಚರಂಡಿಗೆ ಬೈಕ್ ಸಮೇತ ಬಿದ್ದಿದ್ದಾರೆ. ಸ್ಥಳೀಯರು ಅಪಘಾತ ಎಸಗಿದ ಲಗೇಜ್ ವಾಹನವನ್ನು ತಡೆದು ನಿಲ್ಲಿಸಿದ್ದು, ಅದರಲ್ಲಿದ್ದ ಚಾಲಕ ಮತ್ತು ಇನ್ನೊಬ್ಬನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.
ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಆಗ ಲಗೇಜ್ ವಾಹನದಲ್ಲಿ ರಂಗಪ್ಪ ಪತ್ನಿಯ ಸಹೋದರ ಅಶೋಕ ಇರುವುದು ತಿಳಿದುಬಂದಿದೆ. ಆದರೆ, ಚಾಲಕನ ಹೆಸರು ತಿಳಿದುಬಂದಿಲ್ಲ. ಬಳಿಕ ಗಾಯಾಳು ರಂಗಪ್ಪ ಅವರನ್ನು ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಶೋಕನನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ