
ಕಲಬುರಗಿ(ಆ.03): ಜೈಲಿನಲ್ಲಿರುವ ಪತಿಗೆ ಪತ್ನಿ ಗಾಂಜಾ ಸರಬರಾಜಲು ಮಾಡಲು ಯತ್ನಿಸಿರುವ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ನಗರದ ಕೇಂದ್ರ ಕಾರಾಗೃಹದಲ್ಲಿರುವ ಪತಿ ಜಾಲೇಂದ್ರನಾಥ ಕಾವಳೆ ಎಂಬಾತನಿಗೆ ಆತನ ಪತ್ನಿ ಸುನಿತಾ ಕಾವಳೆ ಗಾಂಜಾ ಸರಬರಾಜು ಮಾಡಲು ಯತ್ನಿಸಿದ್ದಾಳೆ.
ಜೈಲಿನಲ್ಲಿರುವ ಪತಿ ಜಾಲೇಂದ್ರನಾಥನನ್ನು ಭೇಟಿಯಾಗಲು ಸುನಿತಾ ಕಾರಾಗೃಹಕ್ಕೆ ಹೋಗಿದ್ದಳು. ಈ ವೇಳೆ ಆಕೆ ಪತಿ ಜಾಲೇಂದ್ರನಾಥನಿಗೆ ನೀಡಲು ತಂದಿದ್ದ ಜೀನ್ಸ್ ಪ್ಯಾಂಟ್ ಪರಿಶೀಲಿಸಿದಾಗ ಪ್ಯಾಂಟಿನ ಬೆಲ್ಟ್ ಪಟ್ಟಿಯ ಒಳಬದಿಯಲ್ಲಿ ಕೈಯಿಂದ ಹೊಲಿಗೆ ಹಾಕಿದ ದಪ್ಪ ವಸ್ತು ಕಂಡು ಬಂದಿದೆ. ಹೊಲಿಗೆ ಬಿಚ್ಚಿ ನೋಡಿದಾಗ ಅದರಲ್ಲಿ 15 ಗ್ರಾಂ. ಗಾಂಜಾ ಇರುವುದು ಪತ್ತೆಯಾಗಿದೆ. ಇದೇ ವೇಳೆ ಮಹಿಳಾ ಫ್ರಿಸ್ಕಿಂಗ್ ರೂಮಿನಲ್ಲಿ ತಪಾಸಣೆಗೆ ಹೋಗಿದ್ದ ಸುನಿತಾ ಪರರಾಗಿಯಾಗಿದ್ದಾಳೆ.
ಬೆಂಗಳೂರು: ಪೊಲೀಸರ ಕಂಡು ಓಡಿದವರ ಬೈಕ್‌ನಲ್ಲಿ ಗಾಂಜಾ, ಡ್ಯಾಗರ್ ಪತ್ತೆ..!
ಈ ಸಂಬಂಧ ಜೈಲಿನ ವಾಡರ್ನ್ ವಿಜಯಕುಮಾರ ಕುದರೆ ಅವರು ಸುನಿತಾ ಕಾವಳೆ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಾರಾಗೃಹಗಳ ತಿದ್ದುಪಡಿ ಅಧಿನಿಯಮ ಹಾಗೂ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ