ಹೊಂಗನೂರು ಗ್ರಾಮದ ರಾಘವೇಂದ್ರ ವೈನ್ಸ್‌ಗೆ ಬಂದ ಅದೇ ಗ್ರಾಮದ ನಾಲ್ಕೈದು ಯುವಕರ ಗುಂಪು ಮದ್ಯವನ್ನು ಸಾಲ ನೀಡುವಂತೆ ಬಾರ್ ಕ್ಯಾಷಿಯರ್ ಗುರುಸಿದ್ದೇಗೌಡರನ್ನು ಒತ್ತಾಯಿಸಿದೆ. ಸಾಲ ನೀಡದ್ದಕ್ಕೆ ಆಕ್ರೋಶಗೊಂಡ ಗುಂಪು, ಗುರುಸಿದ್ದೇಗೌಡ ಹಾಗೂ ಬಾರ್ ಸಿಬ್ಬಂದಿ ಚೆಲುವರಾಜು ಮೇಲೆ ಹಲ್ಲೆ ನಡೆಸಿದೆ.
ಚನ್ನಪಟ್ಟಣ(ಆ.03): ಮದ್ಯ ಸಾಲ ನೀಡದಿದ್ದಕ್ಕೆ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಘಟನೆ.
ಹೊಂಗನೂರು ಗ್ರಾಮದ ರಾಘವೇಂದ್ರ ವೈನ್ಸ್‌ಗೆ ಬಂದ ಅದೇ ಗ್ರಾಮದ ನಾಲ್ಕೈದು ಯುವಕರ ಗುಂಪು ಮದ್ಯವನ್ನು ಸಾಲ ನೀಡುವಂತೆ ಬಾರ್ ಕ್ಯಾಷಿಯರ್ ಗುರುಸಿದ್ದೇಗೌಡರನ್ನು ಒತ್ತಾಯಿಸಿದೆ. ಸಾಲ ನೀಡದ್ದಕ್ಕೆ ಆಕ್ರೋಶಗೊಂಡ ಗುಂಪು, ಗುರುಸಿದ್ದೇಗೌಡ ಹಾಗೂ ಬಾರ್ ಸಿಬ್ಬಂದಿ ಚೆಲುವರಾಜು ಮೇಲೆ ಹಲ್ಲೆ ನಡೆಸಿದೆ.
ತಲಪಾಡಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿ ಮುವಾದ್ ಬಂಧನ
ಬಾರ್ ಮೇಲೆ ಕಲ್ಲು ತೂರಿ, ಬಾಟಲ್‌ನಿಂದ ಪುಂಡರು ಹಲ್ಲೆ ಮಾಡಿದ್ದು, ಹಲ್ಲೆ ನಡೆಸಿರುವ ವಿಡಿಯೋ ಬಾರ್ ಬಳಿ ಇದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊಂಗನೂರು ಗ್ರಾಮದ ಗಿರಿ, ಕೀರ್ತಿ, ಮನು, ಕೃಷ್ಣ, ಅಭಿ ದಾಂಧಲೆ ನಡೆಸಿದ್ದು, ಕ್ರಮ ಜರುಗಿಸುವಂತೆ ಬಾರ್ ಕ್ಯಾಷಿಯರ್ ಗುರುಸಿದ್ದೇಗೌಡ ದೂರು ನೀಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.