ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಬಂಧನ

By Govindaraj SFirst Published Jan 23, 2023, 7:43 AM IST
Highlights

ನೇಪಾಳ  ಮೂಲಕ ಭಾರತ ಗಡಿ ದಾಟಿ, ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಇಕ್ರಾ ಜೀವನಿ (19) ಎಂಬುವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜ.23): ನೇಪಾಳ  ಮೂಲಕ ಭಾರತ ಗಡಿ ದಾಟಿ, ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಇಕ್ರಾ ಜೀವನಿ (19) ಎಂಬುವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ನಿವಾಸಿ ಇಕ್ರಾ, ಡೇಟಿಂಗ್ ಆ್ಯಪ್‌ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್‌ರನ್ನು ಪರಿಚಯಿಸಿಕೊಂಡು ಮದುವೆಯಾ ವಿವಾಹವಾಗಿದ್ದರು. ಬಳಿಕ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ವಾಸವಾಗಿದ್ದರು. 

ಈ ಮಧ್ಯೆ ತಾಯಿಯನ್ನ ಸಂಪರ್ಕ ಮಾಡಲು ಇಕ್ರಾ ಜೀವನಿ ಯತ್ನಿಸಿದ್ದು, ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತಚರ ಇಲಾಖೆ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ ಹಾಗೂ ಮುಲಾಯಂ ಸಿಂಗ್‌ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿ ಯುವತಿಯನ್ನ ವಿಚಾರಣೆ ನಡೆಸಿದಾಗ ರಾವಾ ಯಾದವ್ ಎಂಬ ಹೆಸರು ಬದಲಾಯಿಸಿಕೊಂಡು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದ ಸಂಗತಿ ತಿಳಿಯಿತು. ಇನ್ನು ಬಂಧಿತ ಯುವತಿಯ ಬಗ್ಗೆ ಎಫ್‌ಆರ್‌ಆರ್‌ಓ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದು, ಅಧಿಕಾರಿಗಳು ಇಕ್ರಾರನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಿದ್ದಾರೆ.

Bengaluru: ಆರು ವಾರದ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಅರೆಸ್ಟ್!

ನಾಲ್ವರು ದರೋಡೆಕೋರರ ಬಂಧನ: ಚನ್ನಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಾರಿನಲ್ಲಿ ಕುಳಿತಿದ್ದ ಅನುಮಾನಾಸ್ಪದ ತಂಡದ ಮೇಲೆ ಪೊಲೀಸರು ದಾಳಿ ಮಾಡಿದ್ದ ವೇಳೆ ಪರಾರಿಯಾಗಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ತೌಷಿಫ್‌ ಪಾಷಾ, ನಿಷಾದ್‌ ಪಾಷಾ, ನದೀಮ್‌ ಪಾಷಾ, ಚಂದ್‌ ಪಾಷಾ ಬಂಧಿತ ಆರೋಪಿಗಳು.

ಕಾರಿನಲ್ಲಿ ಕುಳಿತು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ತಂಡದ ಮೇಲೆ ನಗರ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿ ಸೆರೆ ಸಿಕ್ಕಿದ್ದು, ಉಳಿದ ನಾಲ್ಕು ಮಂದಿ ತಲೆಮರೆಸಿಕೊಂಡಿದ್ದರು. ಬಂಧಿತ ಇಮ್ರಾನ್‌ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆ ನಾಲ್ಕು ಆರೋಪಿಗಳ ಸುಳಿವು ದೊರೆತಿದೆ. ಬಂಧಿತರೆಲ್ಲರೂ ಮೈಸೂರಿನ ಗೌಸಿಯಾನಗರದ ನಿವಾಸಿಗಳಾಗಿದ್ದು, ಬಸ್‌ ನಿಲ್ದಾಣ ಸೇರಿದಂತೆ ಜನಜಂಗುಳಿ ಸ್ಥಳಗಳಲ್ಲಿ ಪ್ರಯಾಣಿಕರ ಮೊಬೈಲ್‌, ಚಿನ್ನಾಭರಣ, ನಗದು ಕಳವು ಮಾಡುವ ದಂಧೆಯಲ್ಲಿ ತೊಡಗಿದ್ದರು.

ಬಾರ್‌ನಲ್ಲಿ ಗ್ರಾಹಕರಿಗೆ ಜಾಗ ಬಿಟ್ಟಿಲ್ಲ ಎಂದು ಕಿರಿಕ್: ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಬಾರ್ ಸಿಬ್ಬಂದಿಗಳು

ರಾತ್ರಿ ವೇಳೆ ಕಾರಲ್ಲಿ ಹೆದ್ದಾರಿಯಲ್ಲಿ ಲಾರಿ, ಟ್ರಕ್‌ಗಳನ್ನು ಅಡ್ಡಗಟ್ಟಿ ಡಕಾಯಿತಿ ಮಾಡುತ್ತಿದ್ದರು. ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮಂಡ್ಯ ಸೇರಿದಂತೆ ಹಲವಾರು ಕಡೆ ನಡೆದ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ನೂಕುನುಗ್ಗುಲಿರುವ ಬಸ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದು, ಕಳವು ಮಾಡಿ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಕಳವು ಮಾಡಿದ ಮೊಬೈಲ್‌ಗಳನ್ನು ಮೈಸೂರಿನ ಇರ್ಫಾನ್‌ಗೆ 2ರಿಂದ 3 ಸಾವಿರ ರು.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

click me!