
ಬೆಂಗಳೂರು (ಜ.22): ಟ್ರಾಫಿಕ್ ಡ್ಯೂಟಿ ಮುಗಿಸಿ ಮನೆಗೆ ಹೋಗುವಾಗ ಶಿವಾಜಿನಗರದ ಸಂಚಾರಿ ವಿಭಾಗದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಸತ್ಯ ಅವರು ಹೃದಯಾಘಾತವಾಗಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಚಾರಿ ಎಎಸ್‌ಐ ಸತ್ಯ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ. ಡ್ಯೂಟಿ ಮುಗಿಸಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಿ (ತ್ರಿಬಲ್ ಡ್ಯೂಟಿ) ವಾಪಾಸ್ ಮನೆಗೆ ಹೋಗುವಾಗ ಹೃದಯಾಘಾತ ಆಗಿದೆ. ಸತತ 24 ಗಂಟೆಗಳ ಕಾಲ ಕೆಲಸ ಮಾಡಿದ್ದರಿಂದ ತೀವ್ರ ಒತ್ತಡದಿಂದ ಸಾವನ್ನಪ್ಪಿದ್ದಾರೆ. ಪೊಲೀಸ್ ಇಲಾಖೆಯ ಹಣೆ ಬರಹವೇ ಇಷ್ಟು. ಬೆಳಗ್ಗೆ 8 ರಿಂದ ಮಾರನೆ ದಿನ 8 ಗಂಟೆಯವರೆಗೆ ಡ್ಯೂಟಿ ಮಾಡ್ತಾರೆ. ಮಾಡಿಲ್ಲವೆಂದರೆ ಮೆಮೋ ಇಶ್ಯೂ ಮಾಡ್ತಾರೆ. ಸರ್ಕಾರಕ್ಕೆ ಪೊಲೀಸರ ಬಗ್ಗೆ ಗಮನ ಇಲ್ಲ ಎಂದು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಬದಲಾಗಲಿದೆಯೇ ಪೊಲೀಸ್ ಡ್ರೆಸ್.? : ಒನ್ ನೇಷನ್ ಒನ್ ಯೂನಿಫಾರ್ಮ್‌ಗೆ ರಾಜ್ಯ ತಾತ್ವಿಕ ಒಪ್ಪಿಗೆ
ತ್ರಿಬಲ್ ಡ್ಯೂಟಿ ಬಗ್ಗೆ ಸ್ಪಷ್ಟನೆ ಇಲ್ಲ: ಆದರೆ, ಎಸ್‌ಐ ಸತ್ಯ ಅವರು ದಿನದ 24 ಗಂಟೆಗಳ ಕಾಲ (ತ್ರಿಬಲ್ ಡ್ಯೂಟಿ) ಮಾಡಿದ್ದಾರೆಯೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ, ತಮ್ಮ ಕೆಲಸವನ್ನು ಮುಗಿಸಿ ಮನೆಗೆ ಹೋಗುವ ವೇಳೆ ಕುಸಿದುಬಿದ್ದು, ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಶಿವಾಜಿನಗರ ಟ್ರಾಫಿಕ್ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸತ್ಯ ಅವರು, ಕರ್ತವ್ಯದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಸಂತಾಪ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ