ತಾಯಿಗೆ ಎಳನೀರು ತರಲು ಹೋಗಿದ್ದ ಮಗ ತೆಂಗಿನಮರದಿಂದ ಬಿದ್ದು ಸಾವು!

By Ravi Janekal  |  First Published Jun 7, 2024, 11:53 AM IST

ಶಿವಮೊಗ್ಗ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಕಾರ್ಮಿಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಶಿವಮೊಗ್ಗ ಜಿಲ್ಲೆಯ ಬಿದರಗೋಡು ಗ್ರಾಮದ ಗುಜುಗೊಳ್ಳಿಯಲ್ಲಿ ನಡೆದಿದೆ.


ಶಿವಮೊಗ್ಗ (ಜೂ.7) ಶಿವಮೊಗ್ಗ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಕಾರ್ಮಿಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಶಿವಮೊಗ್ಗ ಜಿಲ್ಲೆಯ ಬಿದರಗೋಡು ಗ್ರಾಮದ ಗುಜುಗೊಳ್ಳಿಯಲ್ಲಿ ನಡೆದಿದೆ.

ನಾಗೇಂದ್ರ (45) ಮೃತ ಕಾರ್ಮಿಕ, ಆಗುಂಬೆ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದ್ದು, ಈ ವೇಳೆ ರಕ್ಷಿತ್ ಕಿಡಿ ಎಂಬುವವರ ಅಡಕೆ ತೋಟದಲ್ಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕ. ಭಾರೀ ಮಳೆಯಾಗುತ್ತಿದ್ದರಿಂದ ಮರದ ಕೆಳಗೆ ನಿಂತಿದ್ದ ಕಾರ್ಮಿಕ ಈ ವೇಳೆ ಮರಕ್ಕೆ ಸಿಡಿಲು ಬಡಿದಿದೆ. ಪಕ್ಕದಲ್ಲೇ ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Tap to resize

Latest Videos

undefined

ಘಟನೆ ಬಳಿಕ ಮೃತ ಅಡಕೆ ತೋಟದ ಮಾಲೀಕ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರು: ಮೇಲಾಧಿಕಾರಿ ಕಿರುಕುಳ? ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಅಕ್ಷರ ದಾಸೋಹ ಅಧಿಕಾರಿ

ತೆಂಗಿನಮರದಿಂದ ಬಿದ್ದು ಯುವಕ ಸಾವು:

ಕೆಆರ್ ನಗರ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳನೀರು ತರಲು ಹೋಗಿದ್ದ ಯುವಕ ತೆಂಗಿನಮರದಿಂದ ಬಿದ್ದ ದುರ್ಮರಣಕ್ಕೀಡಾದ ಘಟನೆ ಕೆಆರ್ ನಗರದ ಮುಂಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗುಜರಾತ್‌ ಅಧಿಕಾರಿಗಳಿಂದ ಲಂಚ ಪಾವತಿಗೂ ಇಎಂಐ ವ್ಯವಸ್ಥೆ ಜಾರಿ!

ಚೇತನ್ (27) ಮೃತ ದುರ್ದೈವಿ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ತಾಯಿ. ಹೀಗಾಗಿ ಎಳನೀರು ತರಲು ಜಮೀನಿಗೆ ಹೋಗಿದ್ದ ಯುವಕ. ತೆಂಗಿನ ಮರ ಹತ್ತಿ ಎಳನೀರು ಕೀಳುವಾಗ ಕಾಲು ಜಾರಿ ಮರದಿಂದ ಕೆಳಗ್ಗೆ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಸದ್ಯ ಘಟನೆ ಸಂಬಂಧ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!