
ಬೆಂಗಳೂರು (ನ.8) ಗ್ರಾಹಕರ ಸೋಗಿನಲ್ಲಿ ಜುವೆಲರಿ ಅಂಗಡಿಗೆ ತೆರಳಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Bengaluru Crime: ಸ್ನೇಹಿತೆಯ ಮನೆಗೇ ಕನ್ನ ಹಾಕಿದ್ದ ಖದೀಮರ ಬಂಧನ
ಟಿನ್‌ಫ್ಯಾಕ್ಟರಿ ರೈಲ್ವೆ ಕ್ವಾರ್ಟರ್ಸ್ ಹಿಂಭಾಗ 4ನೇ ಕ್ರಾಸ್ ನಿವಾಸಿ ನದಿಯಾ (34) ಬಂಧಿತರು. ವಿಚಾರಣೆ ವೇಳೆ ಈಕೆ ನೀಡಿದ ಮಾಹಿತಿ ಮೇರೆಗೆ 3.20 ಲಕ್ಷ ರು. ಮೌಲ್ಯದ 63.94 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಯಶವಂತಪುರದ ಮಹಾವೀರ್ ಜುವೆಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಮಹಿಳೆ ಮಕ್ಕಳ ಉಂಗುರ ತೋರಿಸುವಂತೆ ಸಿಬ್ಬಂದಿಗೆ ಹೇಳಿದ್ದಾಳೆ. ಈ ವೇಳೆ ಸಿಬ್ಬಂದಿ ಉಂಗುರು ತೋರಿಸಲು ಮುಂದಾ ದಾಗ, ಗಮನ ಬೇರೆಡೆ ಸೆಳೆದು ಒಂದು ಉಂಗುರವನ್ನು ಕಳವು ಮಾಡಿದ್ದಳು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ನದಿಯಾ ಕಳ್ಳತನ ಪ್ರವೃತ್ತಿ ಹೊಂದಿದ್ದು, ಬಸ್ ನಿಲ್ದಾಣಗಳು, ಬಸ್‌ಗಳಲ್ಲಿ ಪ್ರಯಾಣಿಸುವ ವೃದ್ಧರನ್ನು ಟಾರ್ಗೆಟ್ ಮಾಡಿ ಅವರ ಬ್ಯಾಗ್‌ಗಳನ್ನು ಕಳವು ಮಾಡುತ್ತಿದ್ದಳು. ಅಷ್ಟೇ ಅಲ್ಲದೆ, ಜುವೆಲÜರಿ ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಉಂಗುರು, ಕಿವಿಯೋಲೆ ಸೇರಿದಂತೆ ಸಣ್ಣ ಚಿನ್ನಾಭರಣಗಳನ್ನು ತೋರಿಸುವಂತೆ ಕೇಳಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದಳು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈಕೆಯ ಬಂಧನದಿಂದ ಯಶವಂತಪುರ ಎರಡು, ಜೀವನ ಭೀಮಾನಗರ, ಜಾಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಬಿದ್ದದ್ದು ಹೇಗೆ?
ಆರೋಪಿ ನಾದಿಯಾ ಆಗಾಗ ಯಶವಂತಪುರದ ಮಹಾವೀರ್ ಜುವೆಲರಿ ಅಂಗಡಿಗೆ ತೆರಳಿ ಮಕ್ಕಳ ಚಿನ್ನದ ಉಂಗುರ, ಓಲೆ, ತಾಳಿ ಇತ್ಯಾದಿ ಒಡವೆಗಳನ್ನು ತೋರಿಸುವಂತೆ ಹೇಳುತ್ತಿದ್ದಳು. ಸ್ವಲ್ಪ ಚಿನ್ನಾಭರಣ ನೋಡಿ ಬಳಿಕ ಖರೀದಿಸದೆ ಮತ್ತೆ ಬರುವುದಾಗಿ ಹೇಳಿ ಹೋಗುತ್ತಿದ್ದಳು. ಜುಲವೆರಿ ಅಂಗಡಿಯಲ್ಲಿ ಆಗಾಗ ಸಣ್ಣ ಪ್ರಮಾಣ ಒಡವೆಗಳ ಲೆಕ್ಕದಲ್ಲಿ ವ್ಯತ್ಯಯ ಬರುತ್ತಿತ್ತು. ಚಿಕ್ಕ ಒಡವೆಗಳಾದ್ದರಿಂದ ಲೆಕ್ಕದಲ್ಲಿ ವ್ಯತ್ಯಾಸ ಬಂದಿರಬಹುದು ಎಂದು ಭಾವಿಸಿ ದೂರು ನೀಡಿರಲಿಲ್ಲ.
Gold Theft| ಪ್ರಯಾಣಿಕರ ಸೋಗಲ್ಲಿ ಚಿನ್ನಾಭರಣ ಕದೀತಿದ್ದ ಖದೀಮರ ಬಂಧನ
ಆದರೆ, ಇತ್ತಿಚೆಗೆ ಉಂಗುರ ನಾಪತ್ತೆಯಾದ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮರಾ ತೆಗೆದು ನೋಡಿದಾಗ ನಾದಿಯಾ ಕೈ ಚಳಕ ಬೆಳಕಿಗೆ ಬಂದಿದೆ. ಬಳಿಕ ಜುವೆಲರಿ ಅಂಗಡಿ ಮಾಲಿಕ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ನಾದಿಯಾಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ