ಮೂತ್ರ ವಿರ್ಜಸನೆ ಸಮಸ್ಯೆ, ಜ್ವರ ಹಾಗೂ ವಾಂತಿಯಿಂದ ಬಳಲುತ್ತಿದ್ದ 4 ತಿಂಗಳ ಗಂಡು ಮಗು ಚಿಕಿತ್ಸೆಗೆಂದು ದಾಖಲಾಗಿ ಆರೋಗ್ಯ ಸುಧಾರಿಸಿದ ಹಿನ್ನಲೆಯಲ್ಲಿ ಇನ್ನೇನು ಮನೆಗೆ ಡಿಸ್‌ಚಾರ್ಜ್ ಆಗಬೇಕೆಂದಾಗ ವೈದ್ಯರ ಸಲಹೆ ಮೇರೆ ರಕ್ತ ಪರೀಕ್ಷೆಗೆ ತೆರಳಿ ರಕ್ತ ಪಡೆಯುವ ವೇಳೆ ಮಗು ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಚಿಕ್ಕಬಳ್ಳಾಪುರ (ನ.08): ಮೂತ್ರ ವಿರ್ಜಸನೆ ಸಮಸ್ಯೆ, ಜ್ವರ ಹಾಗೂ ವಾಂತಿಯಿಂದ ಬಳಲುತ್ತಿದ್ದ 4 ತಿಂಗಳ ಗಂಡು ಮಗು ಚಿಕಿತ್ಸೆಗೆಂದು ದಾಖಲಾಗಿ ಆರೋಗ್ಯ ಸುಧಾರಿಸಿದ ಹಿನ್ನಲೆಯಲ್ಲಿ ಇನ್ನೇನು ಮನೆಗೆ ಡಿಸ್‌ಚಾರ್ಜ್ ಆಗಬೇಕೆಂದಾಗ ವೈದ್ಯರ ಸಲಹೆ ಮೇರೆ ರಕ್ತ ಪರೀಕ್ಷೆಗೆ ತೆರಳಿ ರಕ್ತ ಪಡೆಯುವ ವೇಳೆ ಮಗು ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಏನಿದು ಘಟನೆ?: ಚಿಕ್ಕಬಳ್ಳಾಪುರ ತಾಲೂಕಿನ ಕೊರೇನಹಳ್ಳಿ ನಿವಾಸಿಗಳಾದ ಸಂಧ್ಯಾ ಹಾಗೂ ಗಂಗರಾಜು ದಂಪತಿಯ 4 ತಿಂಗಳ ಗಂಡು ಮಗು ಹಲವು ದಿನಗಳಿಂದ ವಾಂತಿ ಹಾಗೂ ಜ್ವರ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆಯ ಮಕ್ಕಳು ತಜ್ಞ ವೈದ್ಯರು ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಆರೋಗ್ಯ ಪರೀಕ್ಷೆ ನಡೆಸಿದ್ದು ಮಗುವಿನ ಪೋಷಕರು ಹೇಳುವ ಪ್ರಕಾರ ಮಗುವಿನ ಆರೋಗ್ಯ ಸುಧಾರಿಸಿದೆ. ಸೋಮವಾರ ಬೆಳಗ್ಗೆ ರೌಂಡ್ಸ್‌ಗೆ ಬಂದ ಮಕ್ಕಳ ತಜ್ಞರು ಮಗು ಮೂತ್ರ ವಿರ್ಜಸನೆ ಸರಿ ಹೋಗಿದೆ.
Chitradurga: ಮುರುಘಾ ಮಠದಲ್ಲಿದ್ದ 47 ಪೋಟೋಗಳನ್ನು ಕದ್ದಿದ್ದ ಕಳ್ಳರು ಅಂದರ್!
ಜ್ವರ ಕೂಡ ವಾಸಿ ಆಗಿದೆ ನೀವು ಮನೆಗೆ ಡಿಸ್‌ಚಾರ್ಜ್ ಮಾಡಿಕೊಂಡು ಹೋಗಬಹುದೆಂದು ತಿಳಿಸಿದ್ದಾರೆ. ಅದಕ್ಕೂ ಮೊದಲು ಮಗುವಿಗೆ ರಕ್ತ ಪರೀಕ್ಷೆ ಒಮ್ಮೆ ನಡೆಸಿಕೊಂಡು ಬನ್ನಿ ಎಂದಿದ್ದಾರೆ. ಆಗ ಮಗುವನ್ನು ಪೋಷಕರು ರಕ್ತ ಪಡೆಯುವ ಕೇಂದ್ರಕ್ಕೆ ಹೋಗಿದ್ದಾಗ ರಕ್ತ ಪಡೆಯುವ ವೇಳೆ ಮಗು ಇದ್ದಕ್ಕಿದ್ದಂತೆ ಉಸಿರಾಟ ನಿಲ್ಲಿಸಿ ಅಸುನೀಗಿದೆ. ದಿಢೀರ್‌ನೆ ಆದ ಈ ಘಟನೆಯಿಂದ ಪೋಷಕರು ಕಂಗಾಲಾಗಿ ಓಡೋಡಿ ಮಗುವನ್ನು ವೈದ್ಯರ ಬಳಿ ತಂದು ತೋರಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ.
ವೈದ್ಯರ ನಿರ್ಲಕ್ಷ್ಯ ಅಲ್ಲ, ಸ್ಪಷ್ಟನೆ: ಮಗುವನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು. ಸಂಬಂಧಿಕರು ಕೂಡ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಮಗುವಿನ ಸಾವಿನ ಪ್ರಕರಣದ ಬಗ್ಗೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸರಾದ ಡಾ.ಬೈರಾರೆಡ್ಡಿ ಪ್ರತಿಕ್ರಿಯಿಸಿ ಮಗುವಿಗೆ ವೈದ್ಯರು ಸಮರ್ಪಕವಾಗಿ ವೈದ್ಯಕೀಯ ಸೇವೆ ನೀಡಿದ್ದಾರೆ. ಆದರೆ ಮಗು ಅಕಸ್ಮಿಕವಾಗಿ ಮೃತಟ್ಟಿದ್ದು ವೈದ್ಯರ ಅಥವ ಸಿಬ್ಬಂದಿ ನಿರ್ಲಕ್ಷ್ಯ ಮಾಡಿಲ್ಲ. ಚಿಕಿತ್ಸೆ ವೇಳೆ ಯಾವುದೇ ಲೋಪ ಆಗಿಲ್ಲ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ: ನಿಖಿಲ್ ಕುಮಾರಸ್ವಾಮಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ಕನ್ನಡಪ್ರಭದೊಂದಿಗೆ ಘಟನೆ ಕುರಿತು ಮಾತನಾಡಿ, ಮಗು ಮೂತ್ರ ವಿರ್ಜನೆ, ಜ್ವರ ಹಾಗೂ ವಾಂತಿಯಿಂದ ಬಳಲುತ್ತಿದ್ದರ ಬಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರಕ್ತ ಪಡೆಯುವಾಗ ಮಗು ಉಸಿರಾಟ ನಿಲ್ಲಿಸಿ ಮೃತಪಟ್ಟಿದೆ. ಇದರಲ್ಲಿ ಆಸ್ಪತ್ರೆಯ ವೈದ್ಯರ ಅಥವಾ ಸಿಬ್ಬಂದಿ ಲೋಪ ಇಲ್ಲ ಎಂದರು.