Chitradurga: ಮುರುಘಾ ಮಠದಲ್ಲಿದ್ದ 47 ಪೋಟೋಗಳನ್ನು ಕದ್ದಿದ್ದ ಕಳ್ಳರು ಅಂದರ್!

By Govindaraj S  |  First Published Nov 7, 2022, 11:48 PM IST

ಮುರುಘಾ ಮಠದಲ್ಲಿ ರಾತ್ರೋರಾತ್ರಿ ಪೋಟೋಗಳನ್ನು ಕದ್ದು ಪರಾರಿ ಆಗಿದ್ದ ಕಳ್ಳರು ಕೊನೆಗೂ ಅಂದರ್ ಆಗಿದ್ದಾರೆ. ಮುರುಘಾ ಮಠದ ರಾಜಾಂಗಣದಲ್ಲಿ ಮುರುಘಾ ಶ್ರೀ ವಿವಿಧ ಗಣ್ಯರ ಜೊತೆಗೆ ಇದ್ದ ಪೋಟೋಗಳನ್ನು ರಾತ್ರಿ ಕಳ್ಳತನ‌ ಮಾಡಿದ್ದ ಖದೀಮರು ಇಂದು ಪೊಲೀಸರ ಅತಿಥಿ ಆಗಿದ್ದಾರೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ನ.07): ಮುರುಘಾ ಮಠದಲ್ಲಿ ರಾತ್ರೋರಾತ್ರಿ ಪೋಟೋಗಳನ್ನು ಕದ್ದು ಪರಾರಿ ಆಗಿದ್ದ ಕಳ್ಳರು ಕೊನೆಗೂ ಅಂದರ್ ಆಗಿದ್ದಾರೆ. ಮುರುಘಾ ಮಠದ ರಾಜಾಂಗಣದಲ್ಲಿ ಮುರುಘಾ ಶ್ರೀ ವಿವಿಧ ಗಣ್ಯರ ಜೊತೆಗೆ ಇದ್ದ ಪೋಟೋಗಳನ್ನು ರಾತ್ರಿ ಕಳ್ಳತನ‌ ಮಾಡಿದ್ದ ಖದೀಮರು ಇಂದು ಪೊಲೀಸರ ಅತಿಥಿ ಆಗಿದ್ದಾರೆ. ಮಠದ ರಾಜಾಂಗಣದಲ್ಲಿ ಇದ್ದ ಸಮಾರು 47 ಪೋಟೋಗಳನ್ನು ರಾತ್ರೋರಾತ್ರಿ ಕಳ್ಳ, ಖದೀಮರಂತೆ ಬಂದವರು ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರ ಆಧಾರದ ಮೇಲೆ ಮಠದ ಅಂಧಿನ ಉಸ್ತುವಾರಿಗಳು ಆಗಿದ್ದ ಶ್ರೀಗಳ‌ ಆಧಾರದ ಮೇಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ರು. 

Tap to resize

Latest Videos

ಕಳ್ಳತನ ಮಾಡುವ ವೇಳೆ ಇಬ್ಬರು ಕಳ್ಳರು ರಾತ್ರಿ ವೇಳೆ ಮಠಕ್ಕೆ ಆಗಮಿಸಿ ಮಠದ ರಾಜಾಂಗಣದಲ್ಲಿ ಮುರುಘಾ ಶ್ರೀ ವಿವಿಧ ಅತಿಥಿ ಗಣ್ಯರೊಂದಿಗೆ ತೆಗೆಸಿಕೊಂಡಿದ್ದ ಪೋಟೋಗಳನ್ನು ಕಂಪ್ಲೀಟ್ ಆಗಿ ತೆಗೆದುಕೊಂಡು ಹೋಗುವ ಮೂಲಕ ಕಳ್ಳತನ ಮಾಡಿದ್ರು. ಸೆಪ್ಟೆಂಬರ್ 6ರ ರಾತ್ರಿ ಈ ಘಟನೆಯು ಸಂಭವಿಸಿದ್ದು ಕೂಡಲೇ ಎಚ್ಚೆತ್ತ ಮುರುಘಾ ಮಠದ ಉಸ್ತುವಾರಿ ಶ್ರೀಗಳು ಹಾಗೂ ಆಪ್ತರು ಕೂಡಲೇ ದೂರು ದಾಖಲಿಸಿದ್ದರು. ಪೋಟೋಗಳು ಕಳವು ಆಗುವ ಸಂದರ್ಭದಲ್ಲಿ ಮುರುಘಾ ಮಠದಲ್ಲಿ ಮೂರು ದಿನಗಳ ಸರಳವಾದ ಶರಣ‌‌ ಸಂಸ್ಕೃತಿ ಉತ್ಸವ ನಡೆಯುತ್ತಿದ್ದರ ಪರಿಣಾಮವಾಗಿ ಅಂದು ಮಠದಲ್ಲಿ ಮುರುಘಾ ಶ್ರೀಗಳ‌ ಪೋಟೋ ಕೂಡ ಇರಬಾರದು ಎಂದು ಖದೀಮರು ಕಳ್ಳತನ ಮಾಡಿದ್ದರು ಎಂಬ ಮಾಹಿತಿ ಪೊಲೀಸರ ಮೂಲಕ ಬೆಳಕಿಗೆ ಬಂದಿದೆ. 

ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್‌ ಹೆಬ್ಬಾರ್‌

ಇದಕ್ಕೆ ಪೂರಕವಾಗಿ ಅಂದಿನ ಮುರುಘಾ ಮಠದ ಉಸ್ತುವಾರಿ ಶ್ರೀಗಳಾಗಿದ್ದ ಹೆಬ್ಬಾಳ ವಿರಕ್ತ ಮಠದ‌ ಮಹಾಂತ ರುದ್ರೇಶ್ವರ ಶ್ರೀಗಳು, ಪಟ್ಟ ಭದ್ರ ಹಿತಾಸಕ್ತಿಗಳಿಂದ ಉದ್ದೇಶಪೂರ್ವಕ ಕಳ್ಳತನ ಮಾಡಿದ್ದಾರೆ. ಭಕ್ತರ ವೇಷದಲ್ಲಿ ಬಂದು 47 ಫೋಟೋಗಳು ಕಳ್ಳತನ ಮಾಡಲಾಗಿದೆ. ಸೆಕುರಿಟಿ ಗಾರ್ಡ್‌ಗೆ ಚಿತ್ರಗಳನ್ನು ಸ್ವಚ್ಛಗೊಳಿಸಿ ತರುವುದಾಗಿ ಹೇಳಿ ಕಳ್ಳತನ ಮಾಡಲಾಗಿದ್ದು, ಎಸ್‌ಜೆಎಮ್ ಸಂಸ್ಥೆಯ ಕೆಲ‌ ನೌಕರರು ಭಾಗಿ ಆಗಿರಬಹುದು ಗೊತ್ತಿರುವವರೇ ಕಳ್ಳತನ ಮಾಡಿರಬಹುದು. ಮಠದಲ್ಲಿ ಅತ್ಯಮೂಲ್ಯ ವಸ್ತುಗಳು ಇವೆ ಮಠಕ್ಕೆ ಪೊಲೀಸ್ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಎಸ್‌ಜೆಎಮ್ ಕಾರ್ಯದರ್ಶಿ ಎಸ್.ಬಿ.ವಸ್ತ್ರದಮಠ ಸೆಪ್ಟೆಂಬರ್ 6ರಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ 47 ಫೋಟೋಸ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದರು. 

Bidar: ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ಸಚಿವ ಪ್ರಭು ಚವ್ಹಾಣ್ ಚಾಲನೆ

ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಬಂಧನ ಮಾಡಲಾಯಿತು. ಆರೋಪಿ ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನಮೂರ್ತಿ ಅಲಿಯಾಸ್ ಸ್ವಾಮಿ, ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಬಂಧಿಸಲಾಯಿತು. ಮಠದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಕಳ್ಳತನ ದೃಶ್ಯ, ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಳ ಬಂಧಿಸಿದ ಪೊಲೀಸರು. ಚಿತ್ರದುರ್ಗ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿದ ಪೊಲೀಸರು ಎ1 ಮೋಹನ ಮೂರ್ತಿ ಅಲಿಯಾಸ್ ಸ್ವಾಮಿಯನ್ನು 2ದಿನ ಪೊಲೀಸ್ ಕಸ್ಟಡಿ ಪಡೆದಿದ್ದಾರೆ. ಎ2 ಶಿವಾನಂದಸ್ವಾಮಿ 14ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯ ಅಪಘಾತಕ್ಕೀಡಾಗಿ ಜಾಲು ಮುರಿದುಕೊಂಡಿದ್ದಾನೆ ಎರಡನೇ ಆರೋಪಿ ಶಿವಾನಂದಸ್ವಾಮಿ.

click me!