Chitradurga ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಕಿರಾತಕರು ಪರಾರಿ

Published : Jul 03, 2022, 10:15 PM IST
Chitradurga ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಕಿರಾತಕರು ಪರಾರಿ

ಸಾರಾಂಶ

* ತಲೆ ಭಾಗಕ್ಕೆ ಬಲವಾಗಿ ಹೊಡೆದು ಮಹಿಳೆ ಹತ್ಯೆ * ಚಿತ್ರದುರ್ಗದ ಮಠದ ಕುರುಬರಹಟ್ಟಿ ಗ್ರಾಮದಲ್ಲಿ ನಡೆದ ಘಟನೆ * ಕೊಲೆಯಾದ ಮಹಿಳೆ ಯಾರೆಂಬ ಗುರುತು ಇನ್ನೂ ಪತ್ತೆಯಾಗಿಲ್ಲ

ಚಿತ್ರದುರ್ಗ, (ಜುಲೈ. 03): ಕತ್ತು ಹಿಸುಕಿ ತಲೆ ಭಾಗಕ್ಕೆ ಬಲವಾಗಿ ಹೊಡೆದು ಮಹಿಳೆಯನ್ನು ಹತ್ಯೆಗೈದಿರೋ ಘಟನೆ ಮಠದ ಕುರುಬರಹಟ್ಟಿ ಬಳಿ ನಡೆದಿದೆ‌. ನಿರ್ಮಾಣ ಹಂತದ ಕಟ್ಟಡದ ಬಳಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಕಿರಾತಕರು ಪರಾರಿಯಾಗಿದ್ದಾರೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ. ಆ ಮಹಿಳೆ ಯಾರು ಎಂಬುದೇ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಕೊಲೆಯಾದ ಮಹಿಳೆ ಯಾರೆಂಬ ಗುರುತು ಇನ್ನೂ ಪತ್ತೆಯಾಗಿಲ್ಲ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಸ್ಥಳೀಯರಿಗಂತು ಗೊತ್ತೇ ಆಗಿಲ್ಲ. ಇಂತಹ ದೃಶ್ಯಗಳಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ನಗರದ ಕೂದಲಳತೆ ಅಂತರದಲ್ಲಿರುವ ಮಠದ ಕುರುಬರಹಟ್ಟಿ ಗ್ರಾಮ. ನಿನ್ನೆ(ಶನಿವಾರ) ಸಂಜೆ ಸುಮಾರಿಗೆ ಗ್ರಾಮದ ಹೊರವಲಯದಲ್ಲಿರುವ ನಿರ್ಮಾಣ ಹಂತದಲ್ಲಿ ನಡೆಯುತ್ತಿರುವ ಕಟ್ಟಡದ ಬಳಿ ಕೆಲಸಕ್ಕೆಂದು ಗಾರೆ ಕೆಲಸದವರು ತೆರಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಮಹಿಳೆ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ: ರೇಪ್‌ & ಮರ್ಡರ್ ಶಂಕೆ

 ಆ‌ ಮಹಿಳೆ ಯಾರು, ಯಾವ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಅಕ್ಕ ಪಕ್ಕದ ಗ್ರಾಮಸ್ಥರು ಯಾರು ನೋಡಿದ್ರು ನಮಗೆ ಗೊತ್ತಿಲ್ಲ, ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.  ಕೊಲೆ ಮಾಡಿರುವ ಭೀಕರತೆ‌ ನೋಡಿದ್ರೆ ದೊಡ್ಡ ಮಟ್ಟದ ವ್ಯವಹಾರಕ್ಕೆ ಕೊಲೆ ಆಗಿರಬೇಕು ಎಂಬ ಅನುಮಾನ ಎಲ್ಲರಲ್ಲೂ ಮೂಡುತ್ತದೆ. ಅಪರಿಚಿತ ಮಹಿಳೆಯ ಕತ್ತು ಇಸುಕಿ, ತಲೆಗೆ ಬಲವಾಗಿ ಹೊಡೆಯುವ ಮೂಲಕ ಕೊಲೆ ಮಾಡಲಾಗಿದೆ. ನಂತರ ಆಕೆಯ ಗುರುತು ಹಾಗೂ ಶವ ಸಿಗಬಾರದು ಎಂದು ಅಲ್ಲೇ ನಿರ್ಮಾಣ ಮಾಡ್ತಿದ್ದ ಕಟ್ಟಡದ ಸಾಮಾಗ್ರಿಗಳನ್ನು ಮುಚ್ಚಿ ಆರೋಪಿಗಳು ಪರಾರಿ ಆಗಿದ್ದಾರೆ. ಮಾರನೇ ದಿನ ಕೆಲಸಕ್ಕೆ ಬಂದ ಗಾರೆ ಕೆಲಸದವರು ಶವವನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಿನ್ನೆ(ಶನಿವಾರ) ಸಂಜೆ ಸುಮಾರಿಗೆ ಮಠದ ಕುರುಬರಹಟ್ಟಿ ಗ್ರಾಮದ ಬಳಿ ಸುಮಾರು ೨೫ರಿಂದ ೩೦ ವರ್ಷರ ಅಪರಿಚಿತ ಮಹಿಳೆಯ ಶವ ಸಿಕ್ಕ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ನಮ್ಮ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಯಾರೋ ಆರೋಪಿಗಳು ಆಕೆಯನ್ನು ಕತ್ತು ಇಸುಕಿ,‌ತಲೆಗೆ ಬಲವಾಗಿ ಹೊಡೆಯುವ ಮೂಲಕ ಕೊಲೆಗೈದಿದ್ದಾರೆ. ಆದ್ರೆ ಇದುವರೆಗೂ ಮೃತ ಮಹಿಳೆ ಯಾರು ಎಂಬುದು ತಿಳಿದು ಬಂದಿಲ್ಲ. ಇನ್ನೂ ಈ ಘಟನೆ ಸಂಬಂಧ ಈಗಾಗಲೇ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿರೋ ಆರೋಪಿ ಯಾರು ಹಾಗೂ ಕೊಲೆ ಆಗಿರುವ ಮಹಿಳೆ ಯಾರು ಎಂಬುದು ಪತ್ತೆಯಾಗಬೇಕಿದೆ ಅಂತಾರೆ ಎಸ್ಪಿ.

ಒಟ್ಟಾರೆಯಾಗಿ ಮಹಿಳೆಯ ಕೊಲೆ ಮಾಡಿ ಆಕೆಯನ್ನು ಯಾರೂ ಪತ್ತೆ ಹಚ್ಚಬಾರದು ಎಂದು ಆರೋಪಿಗಳು ಶವವನ್ನು ಮುಚ್ಚಿಡಲು ಪ್ರಯತ್ನಿಸಿರೋದು ವಿಷಾದನೀಯ. ಆದ್ದರಿಂದ ಕೂಡಲೇ ಪೊಲೀಸರು ಆಕೆ ಯಾರು? ಆ ಮಹಿಳೆಯ ಕೊಲೆಗೆ ಕಾರಣ ಏನು? ಕೊಲೆ ಮಾಡಿದ ಆರೋಪಿಗಳು ಯಾರು ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಶಿಕ್ಷೆ ನೀಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷಕ್ಕೆ ಕೆಲವೇ ಹೊತ್ತಲ್ಲಿ ಶಾಕ್! ಕೊಳ್ಳೇಗಾಲದಲ್ಲಿ ಭೀಕರ ಅಗ್ನಿ ಅವಘಡ; ಬೇಕರಿ ಸೇರಿದಂತೆ ಮೂರು ಅಂಗಡಿಗಳು ಭಸ್ಮ!
ಕಾನೂನು ತಾರತಮ್ಯ ಉಲ್ಲೇಖಿಸಿ ಪೋಸ್ಟ್; 'ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ' ಎಂದ ವಿಜಯಲಕ್ಷ್ಮೀ ದರ್ಶನ್