ಇವನು ಅಂತಿಂಥ ಕಳ್ಳನಲ್ಲ. ಕಳ್ಳತನ ಹೋದಲೆಲ್ಲಾ ಮದುವೆ ಮತ್ತು ಗೆಳತಿಯರು. 10 ಮಡದಿಯರಲ್ಲಿ ಒಬ್ಬಳು ಪಂಚಾಯ್ತಿ ಸದಸ್ಯೆ ಮತ್ತು ಮತ್ತೊಬ್ಬಳು ಸಿನಿಮಾಅ ಹೀರೋಯಿನ್. ಸ್ವಂತ ಊರಿನಲ್ಲಿ ಈತ ಅಭಿವೃದ್ಧಿಯ ಹರಿಕಾರ.
ಪಾಟನಾ: 10 ಪತ್ನಿಯರು, 6 ಗೆಳತಿಯರನ್ನು ಹೊಂದಿರುವ ವ್ಯಕ್ತಿ ಉಳಿದುಕೊಳ್ಳುವುದು ಫೈವ್ ಸ್ಟಾರ್ ಹೋಟೆಲ್ ಮತ್ತು ಈತನಿಗೆ ಓಡಾಡಲು ಜಾಗ್ವಾರ್ ಕಾರ್ ಬೇಕು. ಇಂದು ನಾವು ನಿಮಗೆ ಹೇಳುತ್ತಿರೋದು ಯಾವುದೇ ಕೋಟ್ಯಧಿಪತಿ ಉದ್ಯಮಿಯ ಕಥೆಯಲ್ಲ. ಇದು ಕಳ್ಳನೊಬ್ಬನ ಲೈಫ್‌ಸ್ಟೈಲ್. ಈತನ ಹೆಸರು ಮೊಹಮ್ಮದ್ ಇರ್ಫಾನ್ ಉರ್ಫ್ ಉಜಾಲೆ. 10 ಮಡದಿಯಲ್ಲಿ ಒಬ್ಬರು ಜಿಲ್ಲಾ ಪಂಚಾಯ್ತಿ ಸದಸ್ಯೆ, ಒಬ್ಬರು ನಟಿಯಾಗಿದ್ದು ಮುಂಬೈನಲ್ಲಿ ವಾಸವಾಗಿದ್ದಾರೆ. ಮೊಹಮ್ಮದ್ ಇರ್ಫಾನ್ ತಾನು ಕಳ್ಳತನಕ್ಕೆ ಹೋಗುವ ಮೊದಲು ಅಲ್ಲಿಯ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸಿ, ಪ್ರೀತಿಸಿ ಮದುವೆಯಾಗುತ್ತಾನೆ.
ಎರಡು ವರ್ಷಗಳ ಹಿಂದೆ ಗಾಜಿಯಾಬಾದ್ ಪಟ್ಟಣದ ಕವಿನಗರದ ಕೊತ್ವಾಲಿ ಠಾಣೆಯ ಪೊಲೀಸರು ಬಂಧಿಸಿದಾಗ ಮೊಹಮ್ಮದ್ ಇರ್ಫಾನ್‌ನ ಕಹಾನಿ ಬೆಳಕಿಗೆ ಬಂದಿತ್ತು. ಈ ವೇಳೆ ಆತನ ಬಳಿಯಲ್ಲಿದ್ದ ಜಾಗ್ವಾರ್ ಕಾರ್ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕಾರ್ ಆತನ ಪತ್ನಿಯ ಹೆಸರಿನಲ್ಲಿ ರಿಜಿಸ್ಟರ್ ಆಗಿತ್ತು. ಇರ್ಫಾನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಆತನಿಗೆ 10 ಪತ್ನಿಯರು ಮತ್ತು ಆರು ಗೆಳತಿಯರಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಆದ್ರೆ ಗೆಳತಿಯರ ಸಂಖ್ಯೆ ಆತನಿಗೂ ನಿಖರವಾಗಿ ಗೊತ್ತಿರಲಿಲ್ಲ ಎಂದು ವರದಿಯಾಗಿದೆ.
ಯಾವ ನಗರಕ್ಕೆ ಅಪರಾಧ ಕೃತ್ಯ ಎಸಗಲು ಹೋಗುತ್ತಾನೆ ಅಲ್ಲಿ ಓರ್ವ ಯುವತಿಯ ಸ್ನೇಹ ಸಂಪಾದಿಸುತ್ತಿದ್ದನು. ನಂತರ ಪ್ರೀತಿಸಿ ಮದುವೆ ಮಾಡಿಕೊಳ್ಳುತ್ತಿದ್ದಳು. ಮೊದಲ ಪತ್ನಿ ಊರಿನಲ್ಲಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದಾಳೆ. ಎರಡನೇ ಪತ್ನಿ ಭೋಜಪುರಿ ಸಿನಿಮಾದ ನಟಿಯಾಗಿದ್ದು, ಮುಂಬೈನಲ್ಲಿ ವಾಸವಾಗಿದ್ದಾರೆ. ಗ್ರಾಮದ ಜನರು ಇರ್ಫಾನ್‌ನನ್ನು ದೇವರ ರೂಪದಲ್ಲಿ ಕಾಣುತ್ತಾರೆ. ಕಳ್ಳತನ ಮೊತ್ತದ ಬಹುದೊಡ್ಡ ಭಾಗವನ್ನು ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲಿ ವಿನಿಯೋಗಿಸುತ್ತಿದ್ದನು. ಹಾಗಾಗಿಯೇ ಊರಿಗೆ ಉಪಕಾರಿಯಾಗಿ ಇರ್ಫಾನ್ ಗುರುತಿಸಿಕೊಂಡಿದ್ದನು.
ಮಾಲೀಕರ ಆಹಾರದಲ್ಲಿ ಮೂತ್ರ ಸೇರಸ್ತಿದ್ದು ಯಾಕೆ ಎಂಬುದರ ಸತ್ಯ ಬಿಚ್ಚಿಟ್ಟ ರೀನಾ? ಕಾರಣ ಕೇಳಿ ಎಲ್ಲರೂ ಶಾಕ್
ಕಳ್ಳತನ ಮಾಡಿದ ಹಣದಿಂದಲೇ ಊರಿನ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿದ್ದನು. ಈತನ ಈ ಕೆಲಸಗಳಿಂದಲೇ ಇರ್ಫಾನ್ ಪತ್ನಿ ಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲಲು ಕಾರಣ ಎಂದು ವರದಿಯಾಗಿದೆ. ಈತನ ಎರಡನೇ ಬಾರಿ ಪಂಚಾಯ್ತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಪೊಲೀಸರ ಪ್ರಕಾರ, ಮೊಹಮ್ಮದ್ ಇರ್ಫಾನ್ ಯಾವಾಗಲೂ ದೊಡ್ಡ ದೊಡ್ಡ ಕಳ್ಳತನದಲ್ಲಿ ಭಾಗಿಯಾಗುತ್ತಿದ್ದನು.
ಕಳ್ಳತನಕ್ಕೆ ನಗರಗಳಿಗೆ ಹೋಗುತ್ತಿದ್ದ ಇರ್ಫಾನ್, ಅಲ್ಲಿಯ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಏಳೆಂಟು ದಿನ ಉಳಿದುಕೊಂಡು ಅಲ್ಲಿಯ ಶ್ರೀಮಂತರ ಮನೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದನು. ನಂತರ ಎಲ್ಲವನ್ನೂ ಖಾತ್ರಿ ಮಾಡಿಕೊಂಡ ನಂತರವೇ ಯಶಸ್ವಿಯಾಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದನು. ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಸಂದರ್ಭದಲ್ಲಿ ತನ್ನನ್ನು ಕೋಟ್ಯಧಿಪತಿ, ಉದ್ಯಮಿ ಆರ್ಯನ್ ಖನ್ನಾ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದನು. ತನ್ನ ಐಷಾರಾಮಿ ಉಡುಗೆ-ತೊಡುಗೆ ಮತ್ತು ಚೆಂದದ ಭಾಷೆಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದನು. ಹೀಗೆ ಬಿಹಾರದಿಂದ ದೆಹಲಿಯವರೆಗೆ ಪ್ರಯಾಣಿಸಿ ಕಳ್ಳತನ ಮಾಡುತ್ತಿದ್ದನು. ಕೆಲವೊಮ್ಮೆ ಕಳ್ಳತನಕ್ಕಾಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದನು.
ವಧುವಿನ ಜೊತೆ ಕಾರ್‌ನಲ್ಲಿ ಶುರು ಹಚ್ಕೊಂಡು ವರ; ಮನೆ ತಲುಪೋವರೆಗಾದ್ರೂ ವೇಟ್ ಮಾಡು ಗುರು ಎಂದ ನೆಟ್ಟಿಗರು