ಉತ್ತರಕನ್ನಡ: ಜೊಯಿಡಾ ಜಿಂಕೆ ಬೇಟೆ‌ ಪ್ರಕರಣ, ಇಬ್ಬರು ಆರೋಪಿಗಳ ಬಂಧನ

By Girish Goudar  |  First Published Oct 17, 2024, 7:06 PM IST

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ಅರಣ್ಯದ ಯರಮುಖ ಭಾಗದಲ್ಲಿ ಆರೋಪಿಗಳು ಜಿಂಕೆ ಬೇಟೆಯಾಡಿದ್ದರು. ಜಿಂಕೆಯ ಮಾಂಸ ಮತ್ತು ಚರ್ಮ ಬೇಯಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು. 


ಉತ್ತರಕನ್ನಡ(ಅ.17):  ಜಿಂಕೆ ಬೇಟೆ‌ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು(ಗುರುವಾರ) ಬಂಧಿಸಿದ್ದಾರೆ. ತಲೆಮರೆಸಿಕೊಂಡ ಪ್ರಕರಣದ ಮುಖ್ಯ ಆರೋಪಿಗಳಾದ ನಾರಾಯಣ ದಬ್ಗಾರ ಮತ್ತು ದೀಪಕ ನಾಯ್ಕನನ್ನ ಬಂಧಿಸಲಾಗಿದೆ. 

ಜಿಲ್ಲೆಯ ಜೊಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ಅರಣ್ಯದ ಯರಮುಖ ಭಾಗದಲ್ಲಿ ಆರೋಪಿಗಳು ಜಿಂಕೆ ಬೇಟೆಯಾಡಿದ್ದರು. ಜಿಂಕೆಯ ಮಾಂಸ ಮತ್ತು ಚರ್ಮ ಬೇಯಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು. 

Latest Videos

undefined

ಉತ್ತರಕನ್ನಡ: ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಶಿರಸಿ ಜಿಲ್ಲಾ ಹೋರಾಟ!

ಆರೋಪಿಗಳಾದ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಯರಮುಖ ನಿವಾಸಿ ನಾರಾಯಣ ದಬ್ಗಾರ, ಮಹದೇವ ದಬ್ಗಾರ, ಅನಂತ ಎಲ್ಲೇಕರ, ದೀಪಕ ವಸಂತ ನಾಯ್ಕ ಜಿಂಕೆ‌ ಬೇಟೆಯಾಡಿದ್ದರು. ಜಿಂಕೆಯ ಮಾಂಸವನ್ನು ತಮ್ಮ ಮನೆಯ ಶೆಡ್ಡಿನಲ್ಲಿ ಬೇಯಿಸಿ ತಿನ್ನುವ ವೇಳೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದರು. ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.  ಈ ಸಂದರ್ಭದಲ್ಲಿ ಆರೋಪಿಗಳಾದ ನಾರಾಯಣ ದಬ್ಗಾರ ಮತ್ತು ದೀಪಕ ನಾಯ್ಕ ತಪ್ಪಿಸಿಕೊಂಡಿದ್ದರು. ಇಬ್ಬರು ಆರೋಪಿಗಳನ್ನು ಬಂಧಿಸಲು ಅಧಿಕಾರಿಗಳು ಶೋಧಕಾರ್ಯ ಆರಂಭಿಸಿದ್ದರು. 

ದಾಳಿ ವೇಳೆ 4.40 ಕೆ.ಜಿ ಜಿಂಕೆ ಮಾಂಸ, ಬಕೆಟ್ ಮತ್ತು ಅಡಿಕೆ ಕಂಬಿಯನ್ನ ವಶಕ್ಕೆ ಪಡೆಯಲಾಗಿತ್ತು.  ಮಹದೇವ ದಬ್ಗಾರ ಮತ್ತು ಅನಂತ ಎಲ್ಲೆಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಆರಂಭಿಸಿದ್ದರು.  

ಕಾರ್ಯಾಚರಣೆಯಲ್ಲಿ ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ, ಪಣಸೋಲಿ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ, ಕುಳಗಿ ವಲಯ ಅರಣ್ಯಾಧಿಕಾರಿ ಮಾಹಂತೇಶ ಪಾಟೀಲ್ ,ಗುಂದ ವಲಯದ ಡಿ.ಎರ್ ಎಫ ಓ ಶರತ ಐಹೊಳೆ,  ಸಿಬ್ಬಂದಿ ಬಸವರಾಜ ಹಾವೇರಿ, ಮಂಜುನಾಥ ಜಾವವ್, ಕೃಷ್ಣ ಎಡಗೆ ಭಾಗಿಯಾಗಿದ್ದರು. 

click me!