ಫ್ರೆಂಡ್ ಅಂತಾ ಮನೆಗೆ ಕರ್ಕೊಂಡು ಬಂದ್ರೆ ಅಮ್ಮನ್ನ ಬುಟ್ಟಿಗೆ ಹಾಕೊಂಡ: ಅಪ್ಪ ಇಬ್ಬರ ಕಥೆ ಮುಗಿಸಿದ!

By Sathish Kumar KH  |  First Published Oct 17, 2024, 2:08 PM IST

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಿದ್ದ ಕುಟುಂಬದಲ್ಲಿ ಮಗನ ಸ್ನೇಹಿತನೊಂದಿಗೆ ತಾಯಿ ಅನೈತಿಕ ಸಂಬಂಧ ಬೆಳೆಸಿದ್ದಕ್ಕೆ ಪತಿ ಇಬ್ಬರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 


ಬೆಂಗಳೂರು (ಅ.17): ಆಂಧ್ರ ಪ್ರದೇಶ ರಾಜ್ಯದಿಂದ ಗಾರೆ ಕೆಲೆಸಕ್ಕೆಂದು ಬಂದು ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಿದ್ದ ಕುಟುಂಬದಲ್ಲಿ ಮಗನೊಂದಿಗೆ ಸ್ನೇಹ ಬೆಳೆಸಿಕೊಂಡ ಯುವ ಫ್ರೆಂಡ್‌ಶಿಪ್ ನೆಪದಲ್ಲಿ ಅವರ ಮನೆಗೆ ಹೋಗಿದ್ದಾನೆ. ಆಗ ಅವರ ಅಮ್ಮನನ್ನೇ ಬುಟ್ಟಿಗೆ ಬೀಳಿಸಿಕೊಂಡು ಅನೈತಿಕ ಸಂಬಂಧ ಬೆಳೆಸಿದ್ದಾನೆ. ಇಬ್ಬರೂ ಒಟ್ಟಿಗೆ ರತಿಕ್ರೀಡೆಯಲ್ಲಿ ತೊಡಗಿದ್ದಾಗ ರೆಡ್‌ಹ್ಯಾಂಡ್‌ ಆಗಿ ಹಿಡಿದ ಅಪ್ಪ ಇಬ್ಬರನ್ನೂ ಕೊಲೆ ಮಾಡಿ ಇದೀಗ ಆತನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಬೆಂಗಳೂರಿನ ಆರ್ ಬಿ ಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ ‌ಕಟ್ಟಡದಲ್ಲಿ‌ ನಿನ್ನೆ ಈ ಘಟನೆ ನಡೆದಿದೆ. ಯುವಕ (ಮಗನ ಸ್ನೇಹಿತ) ಗಣೇಶ್ ಕುಮಾರ್ (20), ಅಮ್ಮ ಫೈತಮ್ಮ (40) ಕೊಲೆಯಾದವರಾಗಿದ್ದಾನೆ. ಇನ್ನು ಇವರಿಬ್ಬರನ್ನು ಕೊಲೆ ಮಾಡಿ ತಾನೂ ನೇಣಿಗೆ ಶರಣಾದ ಅಪ್ಪ ಗೊಲ್ಲಬಾಬು (45) ಆಗಿದ್ದಾರೆ. ಗೊಲ್ಲಬಾಬು ಮತ್ತು ಫೈತಮ್ಮ ಅಲಿಯಾಸ್ ಲಕ್ಷ್ಮಿ ಆಂಧ್ರಪ್ರದೇಶ ಮೂಲದ ದಂಪತಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡು ನಿರ್ಮಾಣ ಹಂತದ ಕಟ್ಟಡಗಳಲ್ಲಿಯೇ ವಾಸ ಮಾಡುತ್ತಿದ್ದರು. ಆದರೆ, ಈ ಬಾರಿ ಬಂದಾಗ ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಗಂಡನೇ ಇಬ್ಬರನ್ನು ಕೊಲೆ ಮಾಡಿ, ತಾನೂ ಜೀವ ಬಿಟ್ಟಿರುವ ಪ್ರಸಂಗ ನಡೆದಿದೆ.

Tap to resize

Latest Videos

undefined

ಇದನ್ನೂ ಓದಿ: ಬೆಳಗಾವಿ ಉದ್ಯಮಿ ಸಂತೋಷ್ ಅವರದ್ದು ಸಾವಲ್ಲ, ಕೊಲೆ ಎಂದ ಮಗಳು: ಕೇಸಿಗೆ ಸಿಕ್ತು ರೋಚಕ ಟ್ವಿಸ್ಟ್

ಘಟನೆಯ ಹಿನ್ನೆಲೆಯೇನು ಗೊತ್ತಾ?
ಬೆಂಗಳೂರಿನಲ್ಲಿ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಗೊಲ್ಲಬಾಬು ಮತ್ತು ಫೈತಮ್ಮ ದಂಪತಿ ತಮ್ಮ ಮಗನೊಂದಿಗೆ ನಿರ್ಮಾಣ ಹಂತದ ಕಟ್ಟಡಗಳಲ್ಲಿಯೇ ವಾಸಕ್ಕೆ ಇರುತ್ತಿದ್ದರು. ಕೇವಲ 2 ತಿಂಗಳ ಹಿಂದಷ್ಟೇ ಕೊಣನಕುಂಟೆ ನಿರ್ಮಾಣ ಹಂತದ ಬಿಲ್ಡಿಂಗ್ ಕೆಲಸಕ್ಕೆ ಬಂದು ಅಲ್ಲಿಯೇ ವಾಸವಾಗಿದ್ದರು. ಇವರಿಗಿಂದ ಮೊದಲೇ ಗಾರೆ ಕೆಲಸಕ್ಕೆ ಬಂದು ಇದೇ ಕಟ್ಟಡದ ಇನ್ನೊಂದು ಶೆಡ್‌ನಲ್ಲಿ ವಾಸವಿದ್ದ ಗಣೇಶ ಕುಮಾರ್ ಇವರ ಮಗನನ್ನು ಪರಿಚಯ ಮಾಡಿಕೊಂಡಿದ್ದಾನೆ. ಇವರಿಬ್ಬರೂ ಕೆಲಸ ವೇಳೆ ಟೀ, ಕಾಫಿ ಕುಡಿಯಲು ಹಾಗೂ ತಿಂಡಿ ತಿನ್ನಲು ಸಂಜೆ ಜೊತೆಗೆ ಹೋಗುತ್ತಿದ್ದರು. ಜೊತೆಗೆ, ಕೆಲವೊಮ್ಮೆ ರಾತ್ರಿಯೂ ಇಬ್ಬರೂ ಒಟ್ಟಿಗೆ ತಿರುಗಾಡಲು ಹೋಗುತ್ತಿದ್ದರು. ಇವರಿಬ್ಬರ ಸ್ನೇಹ ತೀವ್ರ ಆಪ್ತತೆ ಹೆಚ್ಚಾದಾಗ ಗಣೇಶನನ್ನು ತಮ್ಮ ಶೆಡ್‌ಗೆ ಕರೆದೊಯ್ದು, ತಾಯಿಯನ್ನು ಪರಿಚಯ ಮಾಡಿಕೊಟ್ಟಿದ್ದಾನೆ. ಇಬ್ಬರೂ ಒಟ್ಟಿಗೆ ಊಟವನ್ನು ಮಾಡಿದ್ದಾರೆ.

ಗಣೇಶಕುಮಾರ್ ತನ್ನ ಸ್ನೇಹಿತನ ಮನೆಗೆ ಬರುವುದನ್ನು ಹೆಚ್ಚು ಮಾಡಿದ್ದಾನೆ. ಆಗ ಮಗನಿಗೆ ನಿನ್ನ ಸ್ನೇಹಿತ ಅನಗತ್ಯವಾಗಿ ಮನೆಗೆ ಬರುತ್ತಿದ್ದು, ಇದನ್ನು ಕಡಿಮೆ ಮಾಡುವಂತೆ ಅಪ್ಪ ಗೊಲ್ಲಬಾಬು ಸೂಚಿಸಿದ್ದಾರೆ. ಆದರೆ, ಅಪ್ಪನ ಮಾತಿನ ಒಳಮರ್ಮ ಮಗನಿಗೆ ಅರ್ಥವಾಗಿಲ್ಲ. ದಿನಕಳೆದಂತೆ ಸ್ನೇಹಿತನ ಅಮ್ಮನ ಮೇಲೆ ಕಣ್ಣು ಹಾಕಿದ್ದ ಗಣೇಶ ಅನೈತಿಕ ಸಂಬಂಧವನ್ನೂ ಬೆಳೆಸಿದ್ದಾನೆ. ಇದರ ಸುಳಿವು ಹಿಡಿದ ಗೊಲ್ಲಬಾಬು ನೀನು ಮನೆಗೆ ಬರಬೇಡ ಎಂದು ಖಡಕ್ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಗೊಲ್ಲಬಾಬು ಎಚ್ಚರಿಕೆಯನ್ನೂ ಗಣೇಶ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಇದನ್ನೂ ಓದಿ: ಬೆಳಗಾವಿ: ಖಾನಾಪುರದ ಲಾಡ್ಜ್‌ನಲ್ಲಿ ಹೈಟೆಕ್ ‌ವೇಶ್ಯಾವಾಟಿಕೆ ದಂಧೆ, ಐವರು ಮಹಿಳೆಯರ ರಕ್ಷಣೆ

ಗೊಲ್ಲಬಾಬು ಮತ್ತು ಫೈತಮ್ಮ ದಂಪತಿಯ ಮಗ ಕಳೆದ ಎರಡು ದಿನಗಳ ಹಿಂದ ಊರಿಗೆ ಹೋಗಿದ್ದಾನೆ. ಈ ವೇಳೆ ಸೀದಾ ಸ್ನೇಹಿತ ಮನೆಗೆ ತೆರಳಿ ಆತನ ಅಮ್ಮನೊಂದಿಗೆ ರತಿಕ್ರೀಡೆಯಲ್ಲಿ ತೊಡಗಿದ್ದಾನೆ. ಆದರೆ, ಈ ಬಗ್ಗೆ ಅನುಮಾನವಿದ್ದ ಗೊಲ್ಲಬಾಬು ಇವರಿಬ್ಬರು ಏಕಾಂತದಲ್ಲಿ ಇರುವಾಗಲೇ ಶೆಡ್‌ನೊಳಗೆ ಹೋಗಿದ್ದು, ಇಬ್ಬರನ್ನು ನೋಡಿ ತೀವ್ರ ಕೋಪಗೊಂಡಿದ್ದಾನೆ. ಆಗ ಇಬ್ಬರನ್ನೂ ಅಲ್ಲಿಯೇ ಇದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಟ್ಟಿಗೆಯನ್ನು ಹಿಡಿದು ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ, ನನ್ನ ಕುಟುಂಬವೇ ನಾಶವಾಗಿ ಹೋಯಿತು. ಮರ್ಯಾದೆ ಹೋದಮೇಲೆ ತಾನು ಬದುಕಿದ್ದಾರೂ ಫಲವೇನು ಎಂದು ತಾನು ಕೂಡ ಅದೇ ಕಟ್ಟದ ಕಿಟಕಿಯೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯ ನಂತರ ಮಾಲೀಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಕೋಣನಕುಂಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.

click me!