Chikkamagaluru: ಕಾರು ಹಾಗೂ ಟಿಟಿ ವಾಹನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

Published : May 11, 2023, 12:28 PM IST
Chikkamagaluru: ಕಾರು ಹಾಗೂ ಟಿಟಿ ವಾಹನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

ಸಾರಾಂಶ

ಕಾರು ಹಾಗೂ ಟಿಟಿ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನಪ್ಪಿ, ಟಿಟಿ ವಾಹನದಲ್ಲಿದ್ದ ಕೇರಳ ಮೂಲದ 7 ಪ್ರವಾಸಿಗರಿಗೆ ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ಟು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ನಡೆದಿದೆ. 

ಚಿಕ್ಕಮಗಳೂರು (ಮೇ.11): ಕಾರು ಹಾಗೂ ಟಿಟಿ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನಪ್ಪಿ, ಟಿಟಿ ವಾಹನದಲ್ಲಿದ್ದ ಕೇರಳ ಮೂಲದ 7 ಪ್ರವಾಸಿಗರಿಗೆ ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ಟು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ನಡೆದಿದೆ. 

ಭೀಕರ ಅಪಘಾತವು ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿ ನಡೆದಿದ್ದು, ಕಾರಿನಲ್ಲಿದ್ದ ಗಿರಿಧರ್ (46) ಮಯಾಂಕ್(3) ಸ್ಥಳದಲ್ಲೇ ಸಾವನಪ್ಪಿದ್ದಾರೆ. ಹೊನ್ನಾವರದಿಂದ  ಸಂಬಂಧಿಕರ ಮದುವೆಗೆ  ಗಿರಿಧರ್ ಕುಟುಂಬ ತೆರಳುವಾಗ ಘಟನೆ ನಡೆದಿದ್ದು, ಕೇರಳದಿಂದ ಚಿಕ್ಕಮಗಳೂರಿಗೆ ಟಿ ಟಿ ವಾಹನ ಪ್ರವಾಸಕ್ಕೆ ಬರುತ್ತಿತ್ತು. ಗಂಭೀರ ಗಾಯಗೊಂಡ ಕೇರಳ ಮೂಲದ 7 ಪ್ರವಾಸಿಗರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Mangaluru: ರೂಪದರ್ಶಿ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ!

ಎಲೆಕ್ಟ್ರಿಕ್‌ ಬಸ್‌ ಏಕಾಏಕಿ ಗುದ್ದಿ ಕಂಡಕ್ಟರ್‌ ದೇಹ ಛಿದ್ರ ಛಿದ್ರ: ಇನ್ನೊಂದು ವರ್ಷದ ಸೇವಾವಧಿ ಕಳೆದಿದ್ದರೆ ಅವರು ನಿವೃತ್ತಿಯ ಆರಾಮ ಜೀವನದಲ್ಲಿ ಇರುತ್ತಿದ್ದರು! ಆದರೆ, ಅಷ್ಟರಲ್ಲಿ ಎಲೆಕ್ಟ್ರಿಕ್‌ ಬಸ್‌ ಯಮ ಸ್ವರೂಪಿಯಾಗಿ ಬಂದು ಜೀವವನ್ನೇ ಕಸಿದುಕೊಂಡಿದೆ. ಬಿಎಂಟಿಸಿಯ ಯಲಹಂಕ ಉಪನಗರ ನಿವಾಸಿ ನಿರ್ವಾಹಕ ಸೋಮಶೇಖರಯ್ಯ(59) ಅವರು ಮಂಗಳವಾರ ದುರಂತ ಅಂತ್ಯ ಕಂಡರು. ಸಂಜೆ ಬಿಎಂಟಿಸಿ 30ರ ಘಟಕದ ಸಮೀಪ ಬಸ್‌ ನಿಲ್ದಾಣದ ಹಿರಿಯ ಅಧಿಕಾರಿಗಳಿಗೆ ಟಿಕೆಟ್‌ ಲೆಕ್ಕ ಕೊಟ್ಟು ಮರಳುತ್ತಿದ್ದ ನಿರ್ವಾಹಕ ಸೋಮಶೇಖರಯ್ಯ ಅವರಿಗೆ ಎಲೆಕ್ಟ್ರಿಕ್‌ ಬಸ್‌ ಏಕಾಏಕಿ ಬಂದು ಗುದ್ದಿದೆ. 

ಈ ರಭಸಕ್ಕೆ ನಿರ್ವಾಹಕ ಸೋಮಶೇಖರಯ್ಯ ಅವರ ದೇಹ ಛಿದ್ರಗೊಂಡಿದೆ. ಬಿಎಂಟಿಸಿಯ ಎಲೆಕ್ಟ್ರಿಕ್‌ ಬಸ್‌ಗೆ ನೇಮಕಗೊಂಡಿದ್ದ ಖಾಸಗಿ ಚಾಲಕ ಮೌನೇಶ್‌, ಬ್ರೇಕ್‌ಗೆ ಬದಲು ಎಕ್ಸಲೇಟರ್‌ ಒತ್ತಿದ್ದರಿಂದ ಬಸ್‌ ರಭಸವಾಗಿ ಮುನ್ನುಗ್ಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಚಾಲಕ ಮೌನೇಶ್‌ ಬಸ್‌ ಬಿಟ್ಟು ಪರಾರಿಯಾಗಿದ್ದು, ಯಲಹಂಕ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಚಾಲಕನ ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಲು ಕ್ರಮವಹಿಸಲಾಗಿದೆ.

ಮಾಗಡಿ ಕ್ಷೇತ್ರದ ಜನ ನನ್ನ ಕೈ ಹಿಡಿಯುವ ನಂಬಿಕೆ ಇದೆ: ಬಾಲಕೃಷ್ಣ

ಹಲವು ವರ್ಷಗಳಿಂದ ಬಿಎಂಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸೋಮಶೇಖರಯ್ಯ ಅವರು, ತಮ್ಮ ಕುಟುಂಬದ ಜತೆ ಯಲಹಂಕ ಉಪನಗರದಲ್ಲಿ ನೆಲೆಸಿದ್ದರು. ಪ್ರಸುತ್ತ ಯಲಹಂಕ ಮಾರ್ಗದ ಎಲೆಕ್ಟ್ರಿಕ್‌ ಬಸ್‌ ನಿರ್ವಾಹಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಈ ವರ್ಷದೊಳಗೆ ಸೋಮಶೇಖರಯ್ಯ ಅವರು ನಿವೃತ್ತಿ ಹೊಂದಬೇಕಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ