ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ಗೃಹಿಣಿ ಆತ್ಮಹತ್ಯೆ!

By Ravi Janekal  |  First Published Nov 26, 2023, 3:34 PM IST

ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹೆಡ್‌ ಬಂದರ್ ಬಳಿ ನಿನ್ನೆ ಸಂಜೆ ನಡೆದಿದೆ.


ಉತ್ತರ ಕನ್ನಡ (ನ.26): ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹೆಡ್‌ ಬಂದರ್ ಬಳಿ ನಿನ್ನೆ ಸಂಜೆ ನಡೆದಿದೆ.

ನಿವೇದಿತಾ ನಾಗರಾಜ ಭಂಡಾರಿ ಕಣ್ಮರೆಯಾಗಿರುವ ವಿವಾಹಿತೆ. ಸಾಂತಗಲ್ ಗ್ರಾಮದ ನಿವಾಸಿಯಾಗಿರುವ ನಿವೇದಿತಾ, ನಿನ್ನೆ ಸಂಜೆ ಮನೆಯಿಂದ ಇಬ್ಬರು ಗಂಡುಮಕ್ಕಳನ್ನು ಸ್ಕೂಟಿಯ ಹಿಂದೆ ಕೂಡಿಸಿಕೊಂಡು ಕುಮಟಾದ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣಕ್ಕೆ ಬಂದ ಬಳಿಕ ಮಕ್ಕಳಿಬ್ಬರನ್ನು ನಿಲ್ದಾಣದಲ್ಲೇ ಕೂರುವಂತೆ ತಿಳಿಸಿ ಸಮುದ್ರಕಡೆ ತೆರಳಿದ್ದ ನಿವೇದಿತಾ.

Tap to resize

Latest Videos

undefined

BSNL ಅಧಿಕಾರಿಗಳ ಕಳ್ಳಾಟಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದಂಪತಿ!

 ಆತ್ಮಹತ್ಯೆಗೆ ಮುನ್ನ ಸ್ಕೂಟಿಯ ಹಿಂಬದಿ ಸೀಟಿನಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಫೋನ್ ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ನಿವೇದಿತಾ ಸಮುದ್ರಕ್ಕೆ ಹಾರುವುದನ್ನ ಗಮನಿಸಿ ರಕ್ಷಣೆಗೆ ಮುಂದಾಗಿದ್ದ ಲೈಫ್‌ಗಾರ್ಡ್. ಆದರೆ ಬೃಹತ್ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿರುವ ಮಹಿಳೆ. ಸುತ್ತಮುತ್ತ ಎಲ್ಲೆಡೆ ಹುಡುಕಿದರೂ ಕಾಣದೇ ಕಣ್ಮರೆಯಾಗಿರುವ ಮಹಿಳೆ. ಅಲೆಗಳ ಅಬ್ಬರ ಹೆಚ್ಚಿದ್ದ ಹಿನ್ನೆಲೆ ಕಣ್ಮರೆಯಾಗಿರುವ ಮಹಿಳೆ  ಘಟನೆ ಬಳಿಕ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿದ್ದಾರೆ. ಲೈಫ್‌ ಗಾರ್ಡ್ ಈಜುಪಟುಗಳ ಸಹಾದಿಂದ ಹುಡುಕಾಟ ಮುಂದುವರಿಸಿರುವ ಪೊಲೀಸರು. ನಿವೇದಿತಾ ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.

ಸಂಬಂಧಿಕರ ಮದುವೆಗೆ ಹೋಗುವ ವಿಚಾರಕ್ಕೆ ಬೇಸರ: ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ!

click me!