
ಆನೇಕಲ್ (ನ.26): ಅಕ್ರಮ ಸಂಬಂಧ ಹೊಂದಿರುವ ಶಂಕೆಯಿಂದ ದೊಣ್ಣೆಯಿಂದ ಹೊಡೆದು ಪತ್ನಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ತಮ್ಮನಾಯಕಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮಮ್ಮ(40) ಪತಿಯಿಂದಲೇ ಹತ್ಯೆಯಾದ ಮಹಿಳೆ. ಮಹದೇವಯ್ಯ(45) ಕೊಲೆಗೈದ ಪತಿ.
ಮದುವೆಯಾಗಿ ಅನ್ಯೋನ್ಯ, ಪರಸ್ಪರ ಹೊಂದಾಣಿಕೆ ಪ್ರೀತಿಯಿಂದ ಇದ್ದ ಕುಟುಂಬ. ಪತಿ-ಪತ್ನಿ ಸುಖ ದಾಂಪತ್ಯಕ್ಕೆ ಆರು ಜನ ಮಕ್ಕಳಿದ್ದಾರೆ. ಆನೇಕಲ್‌ನ ಸ್ಟ್ರೈಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹದೇವಯ್ಯ. ಇತ್ತ ಮನೆಯಲ್ಲಿ ಖಾಲಿ ಇರಲಾರದೆ ಗಾರೇ ಕೆಲಸ ಮಾಡಿಕೊಂಡಿದ್ದ ಪತ್ನಿ ಲಕ್ಷ್ಮಮ್ಮ. ಆದರೆ ಇದೇ ದಾಂಪತ್ಯಕ್ಕೆ ಮುಳುವಾಗಿದೆ. ಗಾರೇ ಕೆಲಸ ಮಾಡುವ ವ್ಯಕ್ತಿ ಪರಿಚಯವಾಗಿ ಅವನೊಂದಿಗೆ ಲಕ್ಷ್ಮಮ್ಮ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರ ಇಡೀ ತಮ್ಮನಾಯಕನಹಳ್ಳಿ ಗ್ರಾಮದ ಜನರಿಗೆ ತಿಳಿದು ಮಹದೇವಯ್ಯಗೆ ಅವಮಾನ ಉಂಟುಮಾಡಿತ್ತು ಎನ್ನಲಾಗಿದೆ.
ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ಖತರ್ನಾಕ್ ಖದೀಮರ ಬಂಧನ
ಗ್ರಾಮದ ಜನರು ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪದೇಪದೆ ಮಾತಾಡಿಕೊಳ್ಳುತ್ತಿರುವುದು ಮಹದೇವಯ್ಯನ ಕಿವಿಗೆ ಬಿದ್ದಿದೆ. ಇದರಿಂದಾಗಿ ಗ್ರಾಮದಲ್ಲಿ ತಲೆಯೆತ್ತಿ ಓಡಾಡದಂತಾಗಿದೆ. ಇದೇ ಕಾರಣಕ್ಕೆ ಹಲವು ಬಾರಿ ಲಕ್ಷ್ಮಮ್ಮ ಹಾಗೂ ಮಹದೇವಯ್ಯ ನಡುವೆ ಗಲಾಟೆ ನಡೆದಿದೆ. ಪದೇ ಪದೆ ಜಗಳ, ಪತ್ನಿಯ ಅಕ್ರಮ ಸಂಬಂಧದಿಂದ ಮನನೊಂದು ಪತ್ನಿಯನ್ನು ಮುಗಿಸಲು ನಿರ್ಧಾರ ಮಾಡಿರುವ ಮಹದೇವಯ್ಯ. ಪತ್ನಿ ಮಲಗಿದ್ದಾಗಲೇ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಹಿತಿ ತಿಳಿದು ಆನೇಕಲ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು.
ಬೆಂಗಳೂರು: ದಂಡ ತಪ್ಪಿಸಲು ಬೈಕ್ ನಂಬರ್ ಪ್ಲೇಟ್‌ಗೆ ಸ್ಟಿಕ್ಕರ್ ಅಂಟಿಸಿದ ಭೂಪನ ವಿರುದ್ಧ ಕೇಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ