ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ ಸತ್ಯ ಬಾಯ್ಬಿಟ್ಟ ಮಾಜಿ ಉದ್ಯೋಗಿ

By Sathish Kumar KH  |  First Published Jun 17, 2023, 12:10 PM IST

ಬೆಂಗಳೂರಿನಲ್ಲಿ ಐಟಿ ಕಂಪನಿಗೆ ಹುಸಿ ಬಾಂಬ್‌ ಇಟ್ಟಿರುವ ಬೆದರಿಕೆ ಕರೆ ಮಾಡಿದ್ದ ಮಾಜಿ ಉದ್ಯೋಗಿ, ತನ್ನ ಟೀಂ ಲೀಡರ್‌ಗೆ ಬುದ್ಧಿ ಕಲಿಸುವುದಕ್ಕಾಗಿ ಈ ಕೃತ್ಯವನ್ನು ಎಸಗಿರುವುದಾಗಿ ಬಾಯಿ ಬಿಟ್ಟಿದ್ದಾನೆ. 


ಬೆಂಗಳೂರು (ಜೂ.17): ಐಟಿ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ಬಹುತೇಕ ಐಟಿ ಕಂಪನಿಗಳು ಕೇಂದ್ರೀಕೃತವಾಗಿರುವ ಬೆಳ್ಳಂದೂರಿನ ಆರ್‌ಎಂಝಡ್‌ ಇಕೋ ಸ್ಪೇಸ್‌ ಕ್ಯಾಂಪಸ್‌ನ ಕಂಪನಿಯೊಂದಕ್ಕೆ ಬಾಂಬ್‌ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಅದೇ ಕಂಪನಿಯ ಮಾಜಿ ಉದ್ಯೋಗಿ ಎಂದು ಹೇಳಲಾಗಿದೆ. ಇನ್ನು ಕಂಪನಿಗೆ ಬಾಂಬ್‌ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಬಗ್ಗೆ ವಿಚಾರಣೆ ಮಾಡಿದ ಪೊಲೀಸರ ಮುಂದೆ ಮಾಜಿ ಉದ್ಯೋಗಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ.

ಕಳೆದ ಮಂಗಳವಾರ ‘ಐಡಿಬಿಒ ರೈಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿ’ಗೆ ಮಧ್ಯಾಹ್ನ 12ರ ಸುಮಾರಿಗೆ ಬಾಂಬ್‌ ಬೆದರಿಕೆ ಕರೆ ಬಂದಿತ್ತು. ವಿಷಯ ತಿಳಿದ ಕೂಡಲೇ ಬೆಳ್ಳಂದೂರು ಠಾಣೆ ಪೊಲೀಸರು, ಬಾಂಬ್‌ ನಿಷ್ಕ್ರೀಯ ದಳ, ಶ್ವಾನದಳ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಮೊದಲಿಗೆ ಕಂಪನಿಯ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ಸುಮಾರು ಒಂದು ತಾಸು ಕಂಪನಿಯ ಕಟ್ಟಡ ಹಾಗೂ ಸುತ್ತಮುತ್ತಲ ಸ್ಥಳವನ್ನು ಇಂಚಿಂಚೂ ತಪಾಸಣೆ ಮಾಡಿದ್ದರು. ಈ ವೇಳೆ ಸ್ಥಳದಲ್ಲಿ ಯಾವುದೇ ಬಾಂಬ್‌ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿಬಾಂಬ್‌ ಬೆದರಿಕೆ ಕರೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಈ ಬಗ್ಗೆ ತನಿಖೆ ಮಾಡುತ್ತಾ ಹೋದ ಪೊಲೀಸರಿಗೆ ದೇ ಕಂಪನಿಯ ಮಾಜಿ ಉದ್ಯೋಗಿಯೇ ಬಾಂಬ್‌ ಇಟ್ಟಿರುವ ಬಗ್ಗೆ ಹುಸಿ ಕರೆ ಮಾಡಿರುವುದು ತಿಳಿದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

Tap to resize

Latest Videos

undefined

ಹೆಂಡ್ತಿ ಕೊಲ್ಲೋಕೆ ಕಂಟ್ರಿ ಪಿಸ್ತೂಲ್‌ ಖರೀದಿಸಿದ ಪತಿ: ಗನ್‌ ಇಟ್ಕೊಳೋಕೆ ಗೊತ್ತಾಗದೇ ಜೈಲು ಸೇರಿದ

ಬಾಂಬ್‌ ಇರಿಸಲಾಗಿದೆ ಎಂದು ಹೇಳಿ ಕಾಲ್‌ ಕಟ್‌ ಮಾಡಿದ: ಮಂಗಳವಾರ ಬೆಳಗ್ಗೆ 11ರ ಸುಮಾರಿಗೆ ಕಂಪನಿಗೆ ಕರೆ ಮಾಡಿರುವ ಈತ ತನ್ನ ಹೆಸರು ಹೇಳಿ ಪರಿಚಯಿಸಿಕೊಂಡು ಸೀನಿಯರ್‌ ಮ್ಯಾನೇಜರ್‌ಗೆ ಕರೆ ಕನೆಕ್ಟ್ ಮಾಡುವಂತೆ ಹೇಳಿದ್ದಾನೆ. ಈ ವೇಳೆ ಕಂಪನಿ ಸಿಬ್ಬಂದಿ ಕರೆ ಕನೆಕ್ಟ್ ಮಾಡಲು ವಿಳಂಬ ಮಾಡಿದ್ದಾರೆ. ಬಳಿಕ ಮಧ್ಯಾಹ್ನ 12ಕ್ಕೆ ಮತ್ತೆ ಕರೆ ಮಾಡಿರುವ ನವನೀತ್‌, ‘ಕಂಪನಿಯ ಕಟ್ಟಡದಲ್ಲಿ ಬಾಂಬ್‌ ಇರಿಸಲಾಗಿದೆ. ಸದ್ಯದಲ್ಲೇ ಸ್ಫೋಟವಾಗಲಿದೆ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಬಳಿಕ ಕಂಪನಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವನೀತ್‌ ಪ್ರಸಾದ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಮಾಜಿ ಉದ್ಯೋಗಿಯಿಂದಲೇ ಬೆದರಿಕೆ ಕರೆ: ಐಡಿಬಿಒ ಕಂಪನಿಯ ಉದ್ಯೋಗಿ ನವನೀತ್‌ ಪ್ರಸಾದ್‌ ಎಂಬಾತನೇ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ್ದು ಎಂಬುದು ಗೊತ್ತಾಗಿದೆ. ಕೇರಳ ಮೂಲದ ಈತ ಕಳೆದ ಒಂದು ವರ್ಷದಿಂದ ಐಡಿಬಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ, ಟೀಂ ಲೀಡರ್ ಹಾಗೂ ನವನೀತ್ ನ ನಡುವಿನ ಜಗಳವೇ ಬಾಂಬ್ ಬೆದರಿಕೆ ಕರೆಗೆ ಕಾರಣವೆಂದು ಬಾಯಿ ಬಿಟ್ಟಿದ್ದಾನೆ. ಟೀಂ ಲೀಡರ್ ಮೇಲಿನ ಕೋಪಕ್ಕೆ ಬಾಂಬ್ ಇಟ್ಟಿರೋದಾಗಿ ಕರೆ ಮಾಡಿದ್ದೇನೆ. ನಾನು ನವನೀತ್ಎಂದು ಹೇಳಿಕೊಂಡೆ ಕಂಪನಿಗೆ ಕರೆ ಮಾಡಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾನೆ.

 

ಬೆಂಗಳೂರು: ಸಹುದ್ಯೋಗಿ ಮೇಲಿನ ಸಿಟ್ಟಿಗೆ ಕಂಪನಿಗೆ ಹುಸಿ ಬಾಂಬ್‌ ಕರೆ..!

ಟೀಂ ಲೀಡರ್‌ಗೆ ಕಿರುಕುಳ ನೀಡಬೇಕೆಂದು ಕರೆ ಮಾಡಿದ: ಆರೋಪಿ ನವನೀತ್ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಗ ಟೀಂ ಲೀಡರ್ ಮತ್ತು ನವನೀತ್ ನಡುವೆ ಜಗಳ ಅಗ್ತಿತ್ತು. ನನ್ನ ವಿರುದ್ಧ ಇನ್ನೊಂದು ಟೀಂ ಕೆಲಸ ಮಾಡ್ತಿದೆ. ಟೀಂ ಲೀಡರ್ ನನ್ನ ವಿರುದ್ಧ ಇದ್ದಾನೆ. ನಾನು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್‌ ಅವರನ್ನು ಭೇಟಿ ಮಾಡಬೇಕು ಎಂದು ನವನೀತ್ ಹೇಳಿದ್ದನು. ಆದರೆ ಅದಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಇದರಿಂದ ಸಿಟ್ಟಾಗಿದ್ದ ನವನೀತ್, ಅನಂತರದಲ್ಲಿ ಕಂಪನಿ ಕೆಲಸ ಬಿಟ್ಟು ಹೋಗಿದ್ದನು. ಆದರೂ, ಟೀಂ ಲೀಡರ್ ಗೆ ಕಾಟ ಕೊಡಬೇಕು ಎಂದು ಹುಸಿ ಬಾಂಬ್ ಕರೆ ಮಾಡಿದ್ದನು. ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲು ಆಗಿತ್ತು.

click me!