
ವರದಿ: ಮಧು.ಎಂ.ಚಿನಕುರಳಿ, ಮೈಸೂರು
ಮೈಸೂರು (ಜು.28): ಆತ ಬ್ಯಾಂಕ್ ಹಣ ಜಮೇ ಮಾಡಲು ಅಂತ ಲಕ್ಷ ಲಕ್ಷ ಹಣ ತಂದಿದ್ದ. ಹಣ ತೆಗೆದುಕೊಂಡು ಬ್ಯಾಂಕ್‌ಗೆ ಇನ್ನೇನು ಹೋಗಿ ಹಣ ಜಮಾ ಮಾಡಬೇಕು ಅನ್ನುವಷ್ಟರಲ್ಲಿ ಸ್ಥಳಕ್ಕೆ ಕಳ್ಳ ಎಂಟ್ರಿ ಕೊಟ್ಟಿದ್ದ. ತಿರುಗಿ ನೋಡುವಷ್ಟರಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಹಣದ ಬ್ಯಾಗ್‌ನೊಂದಿಗೆ ಕಳ್ಳ ಎಸ್ಕೇಪ್ ಆಗಿದ್ದಾನೆ. ಈ ಘಟನೆ ನಡೆದಿರೋದು ಮೈಸೂರಿನ ಹೆಬ್ಬಾಳದ ಕೈಗಾರಿಕ ಪ್ರದೇಶದಲ್ಲಿ.
ಹೌದು, ಹಣ ಕಳೆದುಕೊಂಡವರ ಹೆಸರು ತುಳಸಿದಾಸ್. ಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದ ದಾಸರಗುಪ್ಪೆ ಎಸ್.ಎಸ್ ಇ ಕಂಪನಿಯಲ್ಲಿ ಕ್ಯಾಶ್ ಕಲೆಕ್ಟರ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡ್ತಿದ್ದಾರಂತೆ. ಇವರು ಪ್ರತಿ ದಿನ ತನ್ನ ಕಂಪನಿಯಲ್ಲಿ ನಡೆದ ವಹಿವಾಟಿನ ಹಣವನ್ನ ಅಲ್ಲೆ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿರುವ ಎಸ್.ಬಿ.ಐ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರಂತೆ.
ಲಕ್ಷ ಬಿಲ್ವಪತ್ರೆ ಸಸಿ ಸಂಕಲ್ಪ ಪೂರ್ಣಗೊಳಿಸಿದ ವೀರೇಶ ಬಸಯ್ಯ ಹಿರೇಮಠ
ಹೀಗೆ ನಿನ್ನೆ ಕೂಡ ತನ್ನ ಕಂಪನಿಯಲ್ಲಿ ನಡೆದ ವಹಿವಾಟಿನ 45 ಲಕ್ಷಕ್ಕು ಅಧಿಕ ಹಣವನ್ನ ಎರಡು ಬ್ಯಾಗ್ ನಲ್ಲಿ ಹಾಕಿಕೊಂಡು ಕಂಪನಿಯ ವಾಹನದಲ್ಲಿ ತೆರಳಿದ್ದಾರೆ. ಬ್ಯಾಂಕ್ ಬಳಿಗೆ ತೆರಳಿದವರೆ ವಾಹನ ನಿಲ್ಲಿಸಿ ಹಣದ ಬ್ಯಾಗ್ ತೆಗೆದುಕೊಂಡು ಬ್ಯಾಂಕ್ ಗೆ ಹೊಗೋಕೆ ರೆಡಿಯಾಗಿದ್ದಾರೆ. ಈ ವೇಳೆ ಅಲ್ಲೆ ಇದ್ದ ದರೋಡೆ ಕೋರ ಬ್ಯಾಗ್ ನೋಡುತ್ತಿದ್ದಂತೆ 6 ಲಕ್ಷ ಹಣ ಇದ್ದ ಬ್ಯಾಗ್ ಕಸಿದುಕೊಂಡು ತುಳಸಿದಾಸ್ ಅವರ ಕಣ್ಣಿಗೆ ಕಾರದ ಪುಡಿ ಎರಚಿ ಪರಾರಿಯಾಗಿದ್ದಾನೆ.
ರಕ್ತದಾನದ ಬಗ್ಗೆ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ: ಮಾಜಿ ಸಚಿವ ಸುಧಾಕರ್
ತುಳಸಿದಾಸ್ ಅವರು ಈ ರೀತಿ ಪ್ರತಿದಿನ ಲಕ್ಷ ಲಕ್ಷ ಹಣವನ್ನ ತೆಗೆದುಕೊಂಡು ಬ್ಯಾಂಕ್‌ನಲ್ಲಿ ಜಮೇ ಮಾಡಿದ್ದಾರಂತೆ. ಆದ್ರೆ ಎಂದು ಈ ರೀತಿ ಆಗಿರಲಿಲ್ಲ ನಿನ್ನೆಯೆ ಈ ರೀತಿ ಆಗಿರೋದು ಅಂತಾರೆ. ಅಷ್ಟೆ ಅಲ್ಲದೆ ದರೋಡೆ ಕೋರರಲ್ಲಿ ಓರ್ವ ಬೈಕ್ ನಲ್ಲಿ ಕುಳಿತಿದ್ದು, ಓರ್ವ ನಾವು ಬರುವುದನ್ನು ಕಾದು ಹಣ ಕಿತ್ತುಕೊಂಡು ಹೋದನಂತೆ. ಈ ವೇಳೆ ಕೂಗಿಕೊಂಡರು ತಕ್ಷಣ ಯಾರು ಬರಲಿಲ್ಲ ಅಂತ ತುಳಸಿದಾಸ್ ಹೇಳ್ತಿದ್ದಾರೆ. ಸದ್ಯ ಮೈಸೂರಿನ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ