ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಣ್ಣನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ. ಈ ಘಟನೆ ಮಹದೇವಪುರದಲ್ಲಿ ನಡೆದಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು (ಏ.03): ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬೀದ ಕಾಮುಕರ ಹಾವಳಿ ಹೆಚ್ಚಾಗಿದ್ದರೂ ಗೃಹ ಇಲಾಖೆ ಮಾತ್ರ ಗಡದ್ದಾಗಿ ನಿದ್ದೆ ಮಾಡುತ್ತಿದ್ದಂತೆ ಕಾಣುತ್ತಿದೆ. ಬಿಹಾರ ಮೂಲದ ಯುವತಿ ರೈಲಿನಲ್ಲಿ ಬಂದು ಅಣ್ಣನೊಂದಿಗೆ ಮಧ್ಯರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ ಆಶಿಫ್ ಮತ್ತು ಆತನ ಸ್ನೇಹಿತ, ಯುವತಿಯ ಅಣ್ಣನನ್ನು ಥಳಿಸಿ ಬಿಗಿಯಾಗಿ ಹಿಡಿದಿದ್ದಾರೆ. ಅದರಲ್ಲಿ ಒಬ್ಬ ಯುವತಿಯನ್ನು ರಸ್ತೆ ಪಕ್ಕಕ್ಕೆ ಎಳೆದೊಯ್ದು ಸಹಾಯಕ್ಕಾಗಿ ಚೀರುತ್ತಿದ್ದರೂ ಬಿಡದೇ ಅತ್ಯಾಚಾರ ಮಾಡಿದ್ದಾನೆ.
ಈ ಘಟನೆ ಮೊನ್ನೆ ರಾತ್ರಿ ಮಧ್ಯರಾತ್ರಿ 1.30ರ ಸುಮಾರಿಗೆ ನಡೆದಿದೆ. ಬಿಹಾರ ಮೂಲದ ಯುವತಿ ತನ್ನ ಅಕ್ಕ ಭಾವನ ಜೊತೆಗೆ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವುದಕ್ಕೆ ಕೇರಳಕ್ಕೆ ಹೋಗಿದ್ದಳು. ಆದರೆ, ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮುಗಿದ ನಂತರ ತಾನು ವಾಪಸ್ ಊರಿಗೆ ಹೋಗುವುದಾಗಿ ತಿಳಿಸಿದ್ದಾಳೆ. ಆಗ ಬೆಂಗಳೂರು ಮೂಲಕವೇ ಹೋಗಬೇಕು ಎಂದಾಗ ಬೆಂಗಳೂರಿನಲ್ಲಿದ್ದ ದೊಡ್ಡಮ್ಮನ ಮಗ ಅಣ್ಣನಿಗೆ ಕರೆ ಮಾಡಿ ಬರುವುದಾಗಿ ತಿಳಿಸಿದ್ದಾರೆ.
ಏ.1ರಂದು ಮಧ್ಯಾಹ್ನ ಕೇರಳದ ಎರ್ನಾಕುಲಂನಿಂದ ರೈಲು ಹತ್ತಿ ಮಧ್ಯರಾತ್ರಿ 1.20ಕ್ಕೆ ಕೆ.ಆರ್.ಪುರ ರೈಲು ನಿಲ್ದಾಣಕ್ಕೆ ಬಂದು ಇಳಿದಿದ್ದಾಳೆ. ಅಲ್ಲಿಗೆ ಅಣ್ಣನೂ ಬಂದಿದ್ದಾನೆ. ಇವರು ಮೊದಲೇ ಕಾರ್ಮಿಕ ಕುಟುಂಬವಾದ್ದರಿಂದ ಇವರ ಬಳಿ ಬೈಕ್ ಇರಲಿಲ್ಲ. ಆಟೋ ಮಾಡಿಕೊಂಡು ಹೋಗುವಷ್ಟು ಆರ್ಥಿಕವಾಗಿ ಸಬಲರಲ್ಲ. ಇನ್ನು ರಾತ್ರಿ ಆಟೋ ಚಾಲಕರು ಕೇಳುವ ಚಾರ್ಜ್, ಅವರ ಒಂದು ದಿನದ ದುಡಿಮೆ ಆಗಿರುತ್ತದೆ. ಆದ್ದರಿಂದ ರೈಲು ನಿಲ್ದಾಣದಿಂದ ಅನತಿ ದೂರದಲ್ಲಿದ್ದ ಮನೆಗೆ ನಡೆದುಕೊಂಡು ಹೋಗಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮಂಗಳೂರು ಹೈಟೆಕ್ ವೇಶ್ಯಾವಾಟಿಕೆ ಪ್ರಕರಣದ, 17 ಆರೋಪಿಗಳು ಖುಲಾಸೆ!
ರೈಲಿನಲ್ಲಿ ಬರುವಾಗ ಊಟ ಮಾಡಿಲ್ಲದ ಕಾರಣ ಮಧ್ಯರಾತ್ರಿ ಮಹದೇವಪುರ ಕಡೆಗೆ ಹೋಗಿ ಊಟ ಮಾಡಿಕೊಂಡು ಅಲ್ಲಿಂದ ಮನೆಗೆ ಹೋಗಲು ನಿರ್ಧರಿಸಿದ್ದಾರೆ. ಮಹದೇವಪುರ ಕಡೆಗೆ ಹೋಗುವಾಗ ದಿಢೀರನೆ ಎಂಟ್ರಿಯಾದ ಇಬ್ಬರು ಅಪರಿಚಿತ ಯುವಕರು ಏಕಾಏಕಿ ಯುವತಿ ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಒಬ್ಬ ಅಸಾಮಿ ಯುವತಿಯ ಅಣ್ಣನ ಕೈಗಳನ್ನು ಹಿಂದಕ್ಕೆ ಎಳೆದು ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ. ನಂತರ ಬಾಯಿಗೆ ಬಟ್ಟೆ ಕಟ್ಟುತ್ತಾನೆ. ನಂತರ ಇನ್ನೊಬ್ಬ ಯುವಕ ಯುವತಿಯನ್ನು ರಸ್ತೆ ಪಕ್ಕದಲ್ಲೆ ಎಳೆದೊಯ್ದು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ ಮಾಡುತ್ತಾನೆ.
ಆಗ ಯುವತಿ ಕಿರುಚಾಟ ಕಂಡು ಕೆಲವು ದಾರಿ ಹೋಕರು ಕೂಡಲೇ ಸ್ಥಳಕ್ಕೆ ಬಂದಿದ್ದಾರೆ. ಆಗ, ಯುವತಿ ಮೇಲೆ ಅತ್ಯಾಚಾರ ನಡೆಯುವುದನ್ನು ಕಂಡು ಸ್ಥಳಕ್ಕೆ ದೌಡಾಯಿಸಿ ಯುವತಿ ರಕ್ಷಣೆ ಮಾಡಿದ್ದಾರೆ. ಜೊತೆಗೆ, ಅತ್ಯಾಚಾರ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದ ಕಾಮುಕ ಆಶಿಫ್‌ನಲ್ಲಿ ಹಿಡಿದು ಥಳಿಸಿದ್ದಾರೆ. ನಂತರ, ಗಲಾಟೆ ನೆಯುತ್ತಿದ್ದ ಸ್ಥಳಕ್ಕೆ ನೈಟ್ ಬೀಟ್ ಪೊಲೀಸರು ಬಂದಿದ್ದಾರೆ. ಆಗ ಕಾಮುಕ ಆಶಿಫ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಈತನನ್ನು ಬಂಧಿಸಿದ್ದು, ಆತನೊಂದಿಗೆ ಸಾಥ್ ನೀಡಿದ ಮತ್ತೊಬ್ಬ ಆರೋಪಿಯನ್ನೂ ಬಂಧಿಸಿದ್ದಾರೆ. ಈ ಘಟನೆ ಕುರಿತು ಮಹದೇವಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಅತ್ಯಂತ ದುಬಾರಿ ಮುತ್ತು; ಒಂದು ಕಿಸ್ಸಿಗೆ 50 ಸಾವಿರ ರೂ. ಚಾರ್ಜ್ ಮಾಡುವ ಕಿಸ್ಸಿಂಗ್ ಟೀಚರ್!
ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ ಗಡದ್ ನಿದ್ದೆಗೆ ಜಾರಿದ ಸರ್ಕಾರ: ಈವರೆಗೆ ಒಬ್ಬಂಟಿ ಮಹಿಳೆಯರಿಗೆ ಮಾತ್ರ ಬೆಂಗಳೂರಿನಲ್ಲಿ ಸುರಕ್ಷತೆ ಇಲ್ಲವೆಂದು ಹೇಳಲಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಒಬ್ಬಂಟಿ ಮಹಿಳೆಯರು ಹಾಗೂ ಯುವತಿಯರು ರಾತ್ರಿ ವೇಳೆ ಹೋಗುವಾಗ ಅವರನ್ನು ಎಳೆದೊಯ್ದು ಅತ್ಯಾಚಾರ ಮಾಡಿದ ಘಟನೆಗಳು ನಡೆದಿದ್ದರು. ಆದರೆ, ಇದೀಗ ಬೆಂಗಳೂರಿನಲ್ಲಿ ಅಣ್ಣ-ತಮ್ಮ, ಅಪ್ಪ-ಅಮ್ಮನೊಂದಿಗೆ ಓಡಾಡುವುದು ಕೂಡ ಸುರಕ್ಷತೆ ಇಲ್ಲದಂತಾಗಿದೆ. ಅಣ್ಣನೊಂದಿಗೆ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಯುವತಿಯನ್ನು ರಾಜಾರೋಷವಾಗಿ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆಂದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂದಬುದನ್ನು ನೀವೇ ಊಹಿಸಿ. ಗಾಂಧಿ ತತ್ವವನ್ನು ಹೇಳಿಕೊಂಡು ಅಧಿಕಾರ ನಡೆಸುವ ಸರ್ಕಾರಕ್ಕೆ ಗಾಂಧಿ ಹೇಳಿದ ಮಧ್ಯರಾತ್ರಿ ಇಬ್ಬಂಟಿ ಮಹಿಳೆ ನಿರ್ಭಯವಾಗಿ ಓಡಾಡುವುದೇ ನಿಜವಾದ ಸ್ವಾತಂತ್ರ್ಯ ಎಂಬ ಮಾತನ್ನು ಈಡೇರಿಸಲು ಮಾತ್ರ ಬದ್ಧತೆ ತೋರಿಸುತ್ತಿಲ್ಲ.