*ಉದ್ಯಮಿಯ ಮನೆಯಿಂದ 2 ಕೋಟಿ ನಗದು, ಚಿನ್ನಾಭರಣ ದರೋಡೆ!
*ಇಬ್ಬರು ಮಹಿಳೆ ಸೇರಿದಂತೆ ಒಟ್ಟು ಐವರಿಂದ ಕೃತ್ಯ
*ಆರೋಪಿಗಳಿಗಾಗಿ ದೆಹಲಿ ಪಶ್ಚಿಮ್ ವಿಹಾರ್ ಪೋಲಿಸರ ಬಲೆ
ನವದೆಹಲಿ(ನ.6): ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿ ಉದ್ಯಮಿಯೊಬ್ಬರ (Business Man) ಮನೆಯಿಂದ ಐದು ಜನರು 2 ಕೋಟಿ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿರುವ (Robbery) ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರ (ನ.2 ) ಸಂಜೆ 6 ಗಂಟೆಗೆ ದೂರುದಾರ ಹರ್ಮೀತ್ ಅರೋರಾ (Harmeet Arora) ಅವರು ದರೋಡೆ ಬಗ್ಗೆ ಪಿಸಿಆರ್ (PCR) ಕರೆ ಮಾಡಿದ್ದರು.
Drugs Case: ವಾಂಖೆಡೆಗೆ ಕೊಕ್, 6 ಡ್ರಗ್ಸ್ ಪ್ರಕರಣಗಳ ತನಿಖೆ ನಡೆಸ್ತಾರೆ ಸಂಜಯ್ ಸಿಂಗ್!
undefined
ಪೊಲೀಸರ ಪ್ರಕಾರ, ದರೋಡೆಯಲ್ಲಿ ಇಬ್ಬರು ಮನೆ ಕೆಲಸದ ಮಹಿಳೆಯರು (Maid) ಇತರ ಮೂವರು ಪುರುಷ ಸ್ನೇಹಿತರ ಸಹಾಯದಿಂದ ಸಂಪೂರ್ಣ ದರೋಡೆ ಯೋಜನೆಗೆ ಸಂಚು ರೂಪಿಸಿದ್ದರು. ಆರೋಪಿಗಳು ಹರ್ಮೀತ್ ಅರೋರಾ ಅವರನ್ನು ಬೆದರಿಸಿ ಮನೆ ದರೋಡೆ ಮಾಡಿದ್ದಾರೆ ಮತ್ತು ಆಕೆಯ ಮಗನನ್ನು (Son) ಮನೆಯಲ್ಲಿ ಕಟ್ಟಿಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (Indian Penal Code) ಸೆಕ್ಷನ್ 392, ಸೆಕ್ಷನ್ 397, ಸೆಕ್ಷನ್ 34 ರ ಅಡಿಯಲ್ಲಿ ಪಶ್ಚಿಮ ವಿಹಾರ್ ಪೊಲೀಸ್ (Paschim Vihar police station) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೋಲಿಸರು ವಿಶೇಷ ತಂಡಗಳನ್ನು ರಚಿಸಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Honeytrap: ಮಹಿಳೆ ಮಾತು ನಂಬಿ ಲಕ್ಷಾಂತರ ರು. ಕಳಕೊಂಡ ನಿವೃತ್ತ ಪ್ರಾಚಾರ್ಯ..!
ಉದ್ಯಮಿಯ ಮನೆಯಿಂದ ಒಟ್ಟು 2 ಕೋಟಿ ರೂ. ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾರೆ ಎಂದು ತಿಳಿದುಬಂದೆ. ಘಟನೆ ನಡೆಯುತ್ತಿದ್ದಂತೆ ಉದ್ಯಮಿ ಪೋಲಿಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರ ಮನೆ ಪರೀಶೀಲನೆ ನಡೆಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ದರೋಡೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐವರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಕೋಟ್ಯಧಿಪತಿ ಗಂಡನ 47 ಲಕ್ಷ ಕದ್ದು ಆಟೋ ಚಾಲಕನೊಂದಿಗೆ ಮಹಿಳೆ ಪರಾರಿ!
ತನಗಿಂತ 13 ವರ್ಷ ಚಿಕ್ಕ ವಯಸ್ಸಿನ ಪತಿಯ 47 ಲಕ್ಷ ಕದ್ದು ಮಹಿಳೆಯೊಬ್ಬಳು ಆಟೋ ಚಾಲಕನೊಂದಿಗೆ (Auto driver)ಪರಾರಿಯಾಗಿರುವ ಘಟನೆ ಇಂದೋರ್‌ನ ಖಜ್ರಾನಾ (Indores's Khajrana)ಪ್ರದೇಶದಲ್ಲಿ ನಡೆದಿದೆ. ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಅಕ್ಟೋಬರ್ 13 ರಂದು ಈ ಘಟನೆ ನಡೆದಿದ್ದು, ಮನೆಯಿಂದ 47 ಲಕ್ಷ ರೂಪಾಯಿ ತೆಗೆದುಕೊಂಡು ಪತ್ನಿ ಓಡಿ ಹೋಗಿದ್ದಾಳೆ ಎಂದು ದೂರಿನಲ್ಲಿ ಪತಿ ತಿಳಿಸಿದ್ದಾರೆ.
ಗರ್ಲ್ ಫ್ರೆಂಡ್, ಐಷಾರಾಮಿ ಜೀವನಕ್ಕೆ ಸ್ಯಾಲರಿ ಸಾಲುತ್ತಿಲ್ಲ, ಸರಗಳ್ಳತನಕ್ಕೆ ಇಳಿದ ಸಿವಿಲ್ ಎಂಜನಿಯರ್!
ಮಹಿಳೆಯನ್ನು ಆಗಾಗ್ಗೆಆಟೊರಿಕ್ಷಾ ಚಾಲಕ ಆಕೆಯ ಆಗ್ಗಾಗೆ ಮನೆಗೆ ಡ್ರಾಪ್ (drop) ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಕ್ಟೋಬರ್ 13 ರಂದು ರಾತ್ರಿಯಾದರೂ ಪತ್ನಿ ಮನೆಗೆ ಬಾರದಿದ್ದಾಗ ಪತಿ ಏನಾದರು ಸಮಸ್ಯೆಯಾಗಿರಬಹುದೆಂದು ಅಂದುಕೊಂಡಿದ್ದಾರೆ. ಆದರೆ ಇದೇ ವೇಳೆ ತನ್ನ ಮನೆಯಲ್ಲಿನ 47 ಲಕ್ಷ ರೂ. ನಗದು ನಾಪತ್ತೆಯಾಗಿರುವುದ ಕೂಡ ತಿಳಿದಿದೆ. ಮನೆಯ ಕಬೋರ್ಡ್ ನಲ್ಲಿ (Cupboard) ಈ ಹಣವನ್ನು ಇಟ್ಟಿದ್ದ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ತನ್ನ 47 ಲಕ್ಷ ರೂಪಾಯಿ ಕಳೆದುಕೊಂಡ ಪತಿ ಈಗ ಪತ್ನಿ ಹಾಗೂ ರೀಕ್ಷಾ ಚಾಲಕನ ವಿರುದ್ಧ ದೂರು ನೀಡಿದ್ದಾನೆ.
ಪತ್ನಿ ಹಾಗೂ ಆಟೋರಿಕ್ಷಾ ಚಾಲಕನ ಪತ್ತೆಗೆ ಬಲೆ ಬೀಸುವ ಮೂಲಕ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ತನಿಖೆಯ ಪ್ರಕಾರ ಆಟೋರಿಕ್ಷಾ ಚಾಲಕ 32 ವರ್ಷ ಇಮ್ರಾನ್ (Imran) ಎಂದು ಗುರುತಿಸಲಾಗಿದೆ. ಚಾಲಕ ಮತ್ತು ಆರೋಪಿ ಮಹಿಳೆಯ ಪತ್ತೆಗಾಗಿ ಪೊಲಿಸರು ಖಾಂಡ್ವಾ, ಜವ್ರಾ, ಉಜ್ಜಯಿನಿ ಮತ್ತು ರತ್ಲಂ ನಗರಗಳಲ್ಲಿ ದಾಳಿ ಮಾಡಿ ಪತ್ತೆಕಾರ್ಯ ನಡೆಸಿದ್ದಾರೆ. ಹೆಚ್ಚಿನ ತನಿಖೆಗೆಂದು ಪೊಲೀಸರು ಮತ್ತೊಬ್ಬ ವ್ಯಕ್ತಿಯ ಮನೆಗೆ ತೆರಳಿದ್ದಾರೆ. ಅವನ ಬಳಿ 33 ಲಕ್ಷ ರೂ ಇರುವುದು ಪತ್ತೆಯಾಗಿದೆ. ಈ ವ್ಯಕ್ತಿ ಇಮ್ರಾನ್ ಸ್ನೇಹಿತ ಎಂದು ವರದಿಯಾಗಿದೆ