Cybercrime; ಗುಡ್ ಮಾರ್ನಿಂಗ್ 'ಮಾಯಾಂಗನೆ '  ಬೆಂಗ್ಳೂರು 50ರ ಪುರುಷ ಕಳಕೊಂಡಿದ್ದು 5 ಲಕ್ಷ!

By Suvarna News  |  First Published Nov 6, 2021, 12:23 AM IST

* ಗೊತ್ತಿಲ್ಲದ ನಂಬರ್ ನಿಂದ ಗುಡ್ ಮಾರ್ನಿಂಗ್ !
* ಮಾಯಾಂಗನೆ ಮೋಹಕ್ಕೆ ಸಿಲುಕಿ ಲಕ್ಷ ಲಕ್ಷ ಕಳೆದುಕೊಂಡ
* ಆಕೆ ಹೇಳಿದಂತೆ ಹೋಟೆಲ್ ರೂಂಗೆ ಹೋಗಿದ್ದ


ಬೆಂಗಳೂರು (ನ. 05) ಗೊತ್ತಿಲ್ಲದ ನಂಬರ್ ನಿಂದ ಗುಡ್ ಮಾರ್ನಿಂಗ್ (Cybercrime) ಮೆಸೇಜ್ ಬಂದರೆ ಯಾವ ಕಾರಣಕ್ಕೂ ಸ್ವೀಕರಿಸಲು ಹೋಗಬೇಡಿ. ಗುಡ್ ಮಾರ್ನಿಂಗ್ ಮೆಸೇಜ್ ಸ್ವೀಕರಿಸಿದ್ದಕ್ಕೆ ಇಲ್ಲೊಬ್ಬರು 5.91 ಲಕ್ಷ ರೂ. (Fraud) ಕಳೆದುಕೊಂಡಿದ್ದಾರೆ.  ಈ ಕತೆ ಬಹಳ ರೋಚಕವಾಗಿದೆ. ಮಾಯಾಂಗನೆ ಮೋಹಕ್ಕೆ ಸಿಲುಕಿದ್ದಕ್ಕೆ ಎಲ್ಲ ಹಣ ಕಳೆದುಕೊಳ್ಳಬೇಕಾಗಿದೆ. 

 50  ವರ್ಷದ ವ್ಯಕ್ತಿ ಗೋವಿಂದಪುರ ಪೊಲೀಸರಿಗೆ (Bengaluru Police) ದೂರು ನೀಡಿದ್ದಾರೆ.  ಕಳೆದ ಎರಡು ವರ್ಷಗಳಿಂದ ಗೊತ್ತಿಲ್ಲದ ಸಂಖ್ಯೆಯಿಂದ ನಿರಂತರವಾಗಿ ಮೆಸೇಜ್ ಬರುತ್ತಲೇ ಇತ್ತು.  ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಮೆಸೇಜ್ ಗಳ ಸ್ವೀಕಾರ ಆಗುತ್ತಲೇ ಇತ್ತು.  ಎರಡು ವರ್ಷದಲ್ಲಿ ಈ ಬೆಗೆ ಇಪ್ಪತ್ತು ಮೆಸೇಜ್ ಬಂದಿರಬಹುದು ಎಂದು ದೂರುದಾರರು ಹೇಳುತ್ತಾರೆ.

Latest Videos

undefined

ಆದರೆ ಅಕ್ಟೋಬರ್  8  ರಂದು ಮುಂಜಾನೆ  6.30ಕ್ಕೆ ಮೆಸೇಜ್ ಮಾಡುತ್ತಿದ್ದ ಮಾಯಾಂಗನೆ ಬೆಂಗಳೂರಿಗೆ ಬರುತ್ತಿರುವುದಾಗಿ  ಮತ್ತು ಹೋಟೆಲ್ ನಲ್ಲಿ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾಳೆ.  ಸುಮಾರು ಸಮಯದ ನಂತರ ವಾಟ್ಸ ಅಪ್ ನಲ್ಲಿ ಲೋಕೇಶನ್ ಸಹ ಶೇರ್ ಮಾಡಿದ್ದಾಳೆ.  ದೂರು ದಾರ ವ್ಯಕ್ತಿ ವೀರಣ್ಣ ಪಾಳ್ಯದ ಹೋಟೆಲ್ ಗೆ ಧಾವಿಸಿದ್ದು  ಬೆಳದಿಂಗಳ ಬಾಲೆ 10.30ಕ್ಕೆ ಭೇಟಿ ಮಾಡುತ್ತೇನೆ ಎಂದಿದ್ದಾಳೆ. 

ಆಂಟಿ ಬಲು ತುಂಟಿ, 17 ರ ಹುಡುಗನ ಜತೆ ಖುಲ್ಲಂ ಖುಲ್ಲಾ

ಆಕೆ ಕೊಟ್ಟ ಸಂದೇಶದ ಆಧಾರದಲ್ಲಿ ಹಣ ಕಳೆದುಕೊಂಡಾತ ರೂಂ ನಂಬರ್  212 ಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಆಕೆಯ ಬದಲು ಮೂರು ಜನರನ್ನು ಕಂಡು ದಂಗಾಗಿದ್ದಾನೆ.  ಯುವತಿ ಜತೆ ಇಬ್ಬರು ಪುರುಷರು ಇದ್ದು ನಾವು ಪೊಲೀಸರು ಈಕೆ ಡ್ರಗ್ ಪೆಡ್ಲರ್ ಆಗಿದ್ದು ನಿಮ್ಮನ್ನು ಕರೆಸಿಕೊಂಡಿದ್ದಾಳೆ ಎಂದು ಬ್ಲಾಕ್ ಮೇಲ್ ಶುರುಹಚ್ಚಿಕೊಂಡಿದ್ದಾರೆ.

ಬಲವಂತವಾಗಿ ನನ್ನ ಪರ್ಸ್ ಮತ್ತು ಮೊಬೈಲ್ ಕಿತ್ತುಕೊಂಡಿದ್ದಾರೆ. ಫಿಂಗರ್ ಫ್ರಿಂಟ್ ಬಳಸಿ ಮೊಬೈಲ್ ಓಪನ್ ಮಾಡಿದ್ದು ಅಕೌಂಟ್ ನಿಂದ ಎಲ್ಲ ಹಣ ಟ್ರಾನ್ಸ ಫರ್ ಮಾಡಿಕೊಂಡಿದ್ದಾರೆ. ಅಲ್ಲದೇ ಮೊಬೈಲ್ ನನ್ಉ ದೂರಕ್ಕೆ ಎಸೆದಿದ್ದಾರೆ. ನಂತರ ಮನೆಗೆ ಬಂದು ನೋಡಿದಾಗ ನನ್ನ ಖಾತೆಯಲ್ಲಿದ್ದ ಎಲ್ಲ ಐದು ಲ್ಷ ರೂ. ಹಣವನ್ನು ತಮ್ಮ ಕಡೆಗೆ ವರ್ಗಾಯಿಸಕೊಂಡಿದ್ದು ಗೊತ್ತಾಗಿದ್ದು ನ್ಯಾಯ ಕೊಡಿಸಬೇಕು ಎಂದು ವ್ಯಕ್ತಿ ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಈ  ರೀತಿಯ ಘಟನೆಗಳು ಇದು ಹೊಸದೇನಲ್ಲ..  ನಿಮ್ಮ ಖಾತೆ ಕ್ಲೋಸ್ ಆಗುತ್ತಿದೆ, ಕೆವೈಸಿ ಅಪ್ ಡೇಟ್ ಮಾಡಿ, ಲಾಟರಿ ಗೆದ್ದೀದ್ದೀರಾ.. ಗಿಫ್ಟ್  ಹೇಗೆ ಕಳುಹಿಸಲಿ... ನಿಮ್ಮ ಕಾರ್ಡ್ ಬ್ಲಾಕ್ ಆಗಿದೆ ಈ ರೀತಿ ಹಲವಾರು ನೆಪದಲ್ಲಿ ವಂಚಕರು ಜಾಲ ಬೀಸುತ್ತಾರೆ. ಪುರುಷರ ಲೋಪವನ್ನೇ ತಮ್ಮ ಲಾಭಕ್ಕೆ ಆಸೆ ತೋರಿಸಿ ಬಳಸಿಕೊಂಡು ಹಣ  ದೋಚುವ ದೊಡ್ಡ ಜಾಲವೇ ಇದೆ. 

click me!