ಬಾಲಕಿಯ ಕತ್ತು ಸೀಳಿ ಮುಖಕ್ಕೆ ಆಸಿಡ್ ಎರಚಿದ ಕಿರಾತಕ: ಆಂಧ್ರದಲ್ಲಿ ಭೀಭತ್ಸ ಕೃತ್ಯ

Published : Sep 07, 2022, 03:52 PM ISTUpdated : Sep 07, 2022, 03:56 PM IST
ಬಾಲಕಿಯ ಕತ್ತು ಸೀಳಿ ಮುಖಕ್ಕೆ ಆಸಿಡ್ ಎರಚಿದ ಕಿರಾತಕ: ಆಂಧ್ರದಲ್ಲಿ ಭೀಭತ್ಸ ಕೃತ್ಯ

ಸಾರಾಂಶ

ಪಾನಮತ್ತ ವ್ಯಕ್ತಿಯೊಬ್ಬ 14 ವರ್ಷದ ಬಾಲೆಯ ಮೇಲೆ ಭೀಭತ್ಸವಾಗಿ ಹಲ್ಲೆ ಮಾಡಿದ್ದು, ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಮೊದಲಿಗೆ ಬಾಲಕಿಯ ಕತ್ತು ಸೀಳಿದ ಪಾಪಿ ನಂತರ ಆಕೆಯ ಮುಖದ ಮೇಲೆ ಆಸಿಡ್ ಎರಚಿದ್ದಾನೆ.

ದೇಶದಲ್ಲಿ ಪುಟ್ಟ ಬಾಲೆಯರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಈಗ ನೆರೆಯ ಆಂಧ್ರದಿಂದ ಭಯಾನಕ ಘಟನೆಯೊಂದು ವರದಿ ಆಗಿದೆ. ಪಾನಮತ್ತ ವ್ಯಕ್ತಿಯೊಬ್ಬ 14 ವರ್ಷದ ಬಾಲೆಯ ಮೇಲೆ ಭೀಭತ್ಸವಾಗಿ ಹಲ್ಲೆ ಮಾಡಿದ್ದು, ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಮೊದಲಿಗೆ ಬಾಲಕಿಯ ಕತ್ತು ಸೀಳಿದ ಪಾಪಿ ನಂತರ ಆಕೆಯ ಮುಖದ ಮೇಲೆ ಆಸಿಡ್ ಎರಚಿದ್ದಾನೆ. ಇದರಿಂದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೆಂಕಟಾಚಲಂ ಗ್ರಾಮನದ ಚೆಮುಡ್ಗುಂಟ ಕಾಲೋನಿಯಲ್ಲಿ ಘಟನೆ ನಡೆದಿದೆ. 

ಘಟನೆಗ ಸಂಬಂಧಿಸಿದಂತೆ ನೆಲ್ಲೂರಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತ ಬಾಲಕಿಯ (Minor Girl) ಕುಟುಂಬಕ್ಕೆ ದೂರದ ಸಂಬಂಧಿ ಎಂದು ತಿಳಿದು ಬಂದಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮೊದಲು ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ  ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸಿಡ್ ದಾಳಿಯಿಂದ ಬಾಲಕಿಯ ಮುಖ ಪೂರ್ತಿ ಸುಟ್ಟು ಹೋಗಿದ್ದು, ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. 

Tamil Nadu: ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಬಿಸಾಡಿದ 11ನೇ ಕ್ಲಾಸ್‌ ಬಾಲಕಿ: 10ನೇ ತರಗತಿ ಬಾಲಕ ಸೆರೆ

ಪ್ರಕರಣದ ತನಿಖೆ ನಡೆಸಿದ ವೆಂಕಟಾಚಲಂ ಪೊಲೀಸರು (Venkatachalam Police), ಸಂತ್ರಸ್ತೆಯ ಸಂಬಂಧಿಯು ಆಗಿರುವ ದುಷ್ಕರ್ಮಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆ (IPS) ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ  ಬಾಲಕಿಯ ಮನೆಗೆ ಬಂದ ದುಷ್ಕರ್ಮಿ ಬಾಲಕಿಯ ಮೇಲೆ ಭಯಾನಕವಾಗಿ ಹಲ್ಲೆ ನಡೆಸಿದ್ದಾನೆ. ಕೂಡಲೇ ಬಾಲಕಿಯ ಪೋಷಕರಿಗೆ ನೆರೆಮನೆಯವರು ವಿಚಾರ ತಿಳಿಸಿದ್ದಾರೆ. ಅಲ್ಲದೇ 108 ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸಿಡ್ ದಾಳಿಯಿಂದ ಒಂದು ಕಡೆ ಬಾಲಕಿಯ ಮುಖ ಸುಟ್ಟು ಹೋಗಿದ್ದರೆ ಮತ್ತೊಂದೆಡೆ ಕುತ್ತಿಗೆಯಲ್ಲೂ ಇರಿತವಾಗಿರುವುದರಿಂದ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದಾಳೆ ಆಕೆಯ ಗಂಟಲಿಗೆ ತೀವ್ರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಜಾರ್ಖಂಡ್‌ ಬುಡಕಟ್ಟು ಬಾಲಕಿ ರೇಪ್‌, ಕೊಲೆ ಬಳಿಕ ಗರ್ಭಿಣಿ ಎಂಬ ವಿಚಾರ ಬೆಳಕಿಗೆ

ನೆಲ್ಲೂರು ಪೊಲೀಸ್ ಅಧಿಕ್ಷಕ ವಿಜಯ್ ರಾವ್ ಹೇಳುವಂತೆ ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ನಡೆದಿದೆ. ಆಕೆಯ ಮನೆಯಲ್ಲೇ ವ್ಯಕ್ತಿಯೊಬ್ಬ ಆಕೆಯ ಮೇಲೆ ಆಸಿಡ್ ಎರಚಿ ಕುತ್ತಿಗೆ ಸೀಳೆ ಕೊಲೆಗೆ ಯತ್ನಿಸಿದ್ದಾನೆ. ಆರೋಪಿಯನ್ನು ಐಪಿಸಿ, ಹಾಗೂ ಪೋಸ್ಕೊ ಅಡಿ ಬಂಧಿಸಲಾಗಿದೆ. ವೆಂಕಟಾಚಲಂ ಇನ್ಸ್‌ಪೆಕ್ಟರ್ ಪ್ರಕಾರ, ಆರೋಪಿಯು 35 ವರ್ಷ ವಯಸ್ಸಿನವನಾಗಿದ್ದು, ಸಂತ್ರಸ್ತೆಯ ಹತ್ತಿರದ ಸಂಬಂಧಿಯಾಗಿದ್ದಾನೆ. ಆರೋಪಿಯು ತನ್ನ ಐಷಾರಾಮಿ ಜೀವನಶೈಲಿಗೆ ಹಣದ ಆಸೆಯಿಂದ ಈ ರೀತಿಯ ದಾಳಿ ನಡೆಸಿದ್ದು, ಆತ ಕೃತ್ಯ ನಡೆಸುವ ವೇಳೆ ಮಧ್ಯದ ಅಮಲಿನಲ್ಲಿದ್ದ ಎಂದು ತಿಳಿದು ಬಂದಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ