Yadgir: ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

By Govindaraj S  |  First Published Sep 7, 2022, 3:28 PM IST

ತಾಲೂಕಿನ ರಾಮಸಮುದ್ರ ಗ್ರಾಮದ ಹೊರಭಾಗದ ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಬಿಸಾಕಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಿನ್ನೆ (ಮಂಗಳವಾರ) ಸಂಜೆ ಘಟನೆ ನಡೆದಿದ್ದು, ಮಲ್ಲಪ್ಪ ಸೊಂಡೇರ್ (23) ಎಂಬ ಯುವಕನ ಶವ ಪತ್ತೆಯಾಗಿದೆ.


ಯಾದಗಿರಿ (ಸೆ.07): ತಾಲೂಕಿನ ರಾಮಸಮುದ್ರ ಗ್ರಾಮದ ಹೊರಭಾಗದ ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಬಿಸಾಕಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಿನ್ನೆ (ಮಂಗಳವಾರ) ಸಂಜೆ ಘಟನೆ ನಡೆದಿದ್ದು, ಮಲ್ಲಪ್ಪ ಸೊಂಡೇರ್ (23) ಎಂಬ ಯುವಕನ ಶವ ಪತ್ತೆಯಾಗಿದೆ. ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಮಲ್ಲಪ್ಪ, ಮಧ್ಯಾಹ್ನ ಊಟ ಮಾಡಿ ನಂತರ ಎತ್ತುಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದರು. 

ಇನ್ನು ಮೃತ ಮಲ್ಲಪ್ಪ ಜಮೀನು ಪಕ್ಕ ಆಶನಾಳ ಗ್ರಾಮದ ಮಲ್ಲಿಕಾರ್ಜುನನ ಜಮೀನು ಇತ್ತು. ಎತ್ತುಗಳು ಆಶನಾಳ ಗ್ರಾಮದ ಮಲ್ಲಿಕಾರ್ಜುನ ಜಮೀನಿಗೆ ತೆರಳಿ ಮೇವು ತಿನ್ನಲು ಹೋಗಿದ್ದವು. ಮೇವು ತಿನ್ನುವ ವಿಚಾರಕ್ಕೆ ಮಲ್ಲಪ್ಪ ಹಾಗೂ ಮಲ್ಲಿಕಾರ್ಜುನ ನಡುವೆ ಜಗಳವಾಗಿದ್ದು, ಆಶನಾಳನ ಮಲ್ಲಿಕಾರ್ಜುನ ಹಾಗೂ ಪುತ್ರರಾದ ದೇವು, ಜ್ಯೋತಿರ್ಲಿಂಗ ಸೇರಿ ಕೊಲೆ ಮಾಡಿ ಕೃಷಿ ಹೊಂಡದಲ್ಲಿ ಬಿಸಾಕಿದ್ದಾರೆ ಎಂದು ಮಲ್ಲಪ್ಪ ಕುಟುಂಬಸ್ಥರು ಆರೋಪಿಸಿದ್ದು, ಸದ್ಯ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Videos

undefined

Shivamogga: ಗಂಡ-ಹೆಂಡತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ!

ಒಂದೇ ಕುಂಟುಂಬದ ಮೂರು ಜನ ಜಲ​ಸ​ಮಾಧಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಕಾರು ಉರುಳಿ ಬಿದ್ದು ಒಂದೇ ಕಟುಂಬದ ಮೂವರು ನೀರು ಪಾಲಾದ ಘಟನೆ ತಾಲೂಕಿನ ಗುಡದೂರು ಕಾಲುವೆ ಬಳಿ ನಡೆದಿದೆ. ಗಂಗಾವತಿ ತಾಲೂಕಿನ ಹೊಸಕೇರಿ ಕ್ಯಾಂಪಿನ ನಿವಾಸಿಗಳಾದ ಎಂ. ಸೂರ್ಯರಾವ್‌ (62) ಆತನ ಪತ್ನಿ ಎಂ. ಸುಬ್ಬಲಕ್ಷ್ಮೀ (58) ಮೃತಪಟ್ಟ ದುದೈರ್ವಿಗಳು ಎಂದು ಗುರುತಿಸಲಾಗಿದ್ದು, ಕಾರು ಚಲಾಯಿಸುತ್ತಿದ್ದ ಮಗ ಎಂ. ಶ್ರೀನಿವಾಸ್‌ ನಾಲೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. 

ಕೃಷಿ ಚುಟುವಟಿಕೆ ಮಾಡುತ್ತಿದ್ದ ಕುಟುಂಬ ಸ್ವಂತ ಗ್ರಾಮ ಹೊಸಕೇರಿ ಕ್ಯಾಂಪಿನಿಂದ ಲಿಂಗಸುಗೂರು ತಾಲೂಕಿನ ಗೋನವಾಟ್‌ ಗ್ರಾಮಕ್ಕೆ ಕಾರಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಜರುಗಿದೆ. ಆಂಧ್ರ ನೋಂದಣಿ ಹೊಂದಿರುವ ಟಾಟಾ ಇಂಡಿಗೋ ಕಾರಿನಲ್ಲಿ ಹೊರಟಿದ್ದ ಕುಟುಂಬವು ಗುಡದೂರು ಸಮೀಪದ ಕಾಲುವೆ ಹತ್ತಿರ ಮುಖ ತೊಳೆಯಲು ಇಳಿದು ಮುಖ ತೊಳೆದುಕೊಂಡ ನಂತರ ಕಾರಿನಲ್ಲಿ ಕುಳಿತುಕೊಂಡಿದ್ದನ್ನು ನೋಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಕಾಣಲಿಲ್ಲ. ಅಷ್ಟರಲ್ಲಿ ಚಿರಾಟ ಕೇಳಿದ್ದು, ಬಂದು ನೋಡಿದರೆ ಕಾರು ಸಂಪೂರ್ಣ ನೀರಿನಲ್ಲಿ ಮುಳಗಿತ್ತು.

ಒಬ್ಬರು ಮಾತ್ರ ನೀರಿನಲ್ಲಿ ಹರಿದುಕೊಂಡು ಹೋಗುತ್ತಿದ್ದು ಕಂಡುಬಂತು. ಆತನನ್ನು ರಕ್ಷಿಸಲು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಮೇಲಕ್ಕೆ ಹತ್ತುವಾಗ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಾಗಿ ಕಾಲುವೆಗೆ ಉರುಳಿರಬಹುದು ಎಂದು ಶಂಕಿಸಲಾಗಿದ್ದು, ಕಾಲುವೆಯಲ್ಲಿ ಮುಳಗಿದ್ದ ಕಾರಿನೊಳಗೆ ಸಿಲಿಕಿಕೊಂಡಿದ್ದ ಪತಿ, ಪತ್ನಿಯ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಮಸ್ಕಿ ಸಿಪಿಐ ಸಂಜೀವ ಬಳಿಗಾರ, ಪಿಎಸ್‌ಐ ಸಿದ್ದರಾಮ ಬಿದರಾಣಿ, ಸಿಂಧನೂರಿನ ಆಗ್ನಿ ಶಾಮಕ ಸಿಬ್ಬಂದಿ ಕ್ರೇನ್‌ ಮುಖಾಂತರ ಕಾರನ್ನು ಹೊರ ತೆಗೆದಿ​ದ್ದಾ​ರೆ. 

Chikkamagaluru: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್‌ನಿಂದ ಮೂವರು ಸಾವು

ಕಾಲುವೆಯಲ್ಲಿ ಕೊಚ್ಚಿ ಹೋದ ಚಾಲಕ ಮೃತ ದೇಹ ಪತ್ತೆಗೆ ಶೋಧ ಕಾರ್ಯವನ್ನು ಕೈಗೊಳ್ಳಲಾ​ಗಿ​ದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಜನ ಜಂಗುಳಿ ಸೇರಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು. ಬಳಗಾನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌, ನೀರಾವರಿ ಇಲಾಖೆ ಎಇಇ ದಾವುದ್‌ ಸೇರಿದಂತೆ ಅಧಿಕಾರಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

click me!