ತಮ್ಮ ಪತಿ ಹಾಗೂ ಮಕ್ಕಳು ಹೊರಗೆ ಹೋದ ಬಳಿಕ ನೀಲಂ ಒಬ್ಬರೇ ಮನೆಯಲ್ಲಿದ್ದರು. ಆ ವೇಳೆ ಅವರ ಮನೆಯೊಳಗೆ ಪ್ರವೇಶಿಸಿರುವ ಕಿಡಿಗೇಡಿಯು ನೀಲಂ ಅವರನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕೆಲ ಹೊತ್ತಿನ ಬಳಿಕ ಶಾಲೆಗೆ ಮುಗಿಸಿ ಮೃತರ ಕಿರಿಯ ಪುತ್ರ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಬೆಂಗಳೂರು(ಜ.05): ಮನೆಯಲ್ಲಿ ಏಕಾಂಗಿಯಾಗಿದ್ದಾಗ ಹಾರ್ಡ್‌ವೇರ್ ಮಳಿಗೆ ಮಾಲಿಕರೊಬ್ಬರ ಪತ್ನಿಯನ್ನು ಕಿಡಿಗೇಡಿಯೊಬ್ಬ ಕುತ್ತಿಗೆ ಹಿಸುಕಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಪ್ರಭಾಕರ ರೆಡ್ಡಿ ಲೇಔಟ್ ನಿವಾಸಿ ನೀಲಂ (30) ಕೊಲೆಯಾದ ದುರ್ದೈವಿ. ಈ ಕೃತ್ಯದಲ್ಲಿ ಮೃತರ ಪರಿಚಿತನ ಕೈವಾಡದ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ತಮ್ಮ ಪತಿ ಹಾಗೂ ಮಕ್ಕಳು ಹೊರಗೆ ಹೋದ ಬಳಿಕ ನೀಲಂ ಒಬ್ಬರೇ ಮನೆಯಲ್ಲಿದ್ದರು. ಆ ವೇಳೆ ಅವರ ಮನೆಯೊಳಗೆ ಪ್ರವೇಶಿಸಿರುವ ಕಿಡಿಗೇಡಿಯು ನೀಲಂ ಅವರನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕೆಲ ಹೊತ್ತಿನ ಬಳಿಕ ಶಾಲೆಗೆ ಮುಗಿಸಿ ಮೃತರ ಕಿರಿಯ ಪುತ್ರ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
undefined
ಅಕ್ರಮ ಸಂಬಂಧದ ತವರಾಗುತ್ತಿದೆಯೇ ಬೆಂಗಳೂರು: 2023ರಲ್ಲಿ ನಡೆದ 207 ಕೊಲೆಗಳಲ್ಲಿ ಅಕ್ರಮ ಸಂಬಂಧದ್ದೇ ಹೆಚ್ಚು!
ಹದಿಮೂರು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದ ಉತ್ತರಪ್ರದೇಶ ಮೂಲದ ಪ್ರದ್ಯುಮ್ನ ಅವರು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಪ್ರಭಾಕರ ರೆಡ್ಡಿ ಲೇಔಟ್‌ನಲ್ಲಿ ನೆಲೆಸಿದ್ದರು. ಮನೆ ಸಮೀಪದಲ್ಲೇ ಹಾರ್ಡ್ ವೇರ್ ಮಳಿಗೆ ನಡೆಸುತ್ತಿದ್ದ ಪ್ರದ್ಯುಮ್ನ, ಪೇಂಟರ್ ಗುತ್ತಿಗೆದಾರರೂ ಆಗಿದ್ದಾರೆ. ಎಂದಿನಂತೆ ಬೆಳಗ್ಗೆ 9 ಗಂಟೆಗೆ ಅಂಗಡಿಗೆ ಬಾಗಿಲು ತೆರೆಯಲು ಅವರು ಮನೆಯಿಂದ ಹೊರಟರೆ, ಮಕ್ಕಳು ಶಾಲೆಗೆ ತೆರಳಿದ್ದರು. ಆಗ ನೀಲಂ ಮಾತ್ರ ಮನೆಯಲ್ಲಿದ್ದಾಗ ಬೆಳಗ್ಗೆ 11.30ಕ್ಕೆ ಬಂದ ಆರೋಪಿ ಹತ್ಯೆ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಗೆ ಮುಗಿಸಿ ಮಧ್ಯಾಹ್ನ12 ಗಂಟೆಗೆ ಮೃತರ ಕಿರಿಯ ಪುತ್ರ ಮನೆಗೆ ಮರಳಿದ್ದಾನೆ. ಆ ವೇಳೆ ಬಾಗಿಲು ತೆರೆದಿದ್ದ ಮನೆಯೊಳಗೆ ಪ್ರವೇಶಿಸಿ ಬಾಲಕ, ಕೋಣೆಯಲ್ಲಿ ಪ್ರಜ್ಞಾಹೀನವಾಗಿ ಬಿದ್ದಿದ್ದ ತಾಯಿಯನ್ನು ಎಚ್ಚರಗೊಳಿಸಲು ಯತ್ನಿಸಿ ವಿಫಲವಾಗಿದ್ದಾನೆ. ಆಗ ಜೋರಾಗಿ ಬಾಲಕ ಅಳಲು ಕೇಳಿ ಆಗಮಿಸಿದ ನೆರೆಹೊರೆಯವರು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.