
ಮುಳಬಾಗಿಲು(ಆ.05): ನೇಣು ಹಾಕಿಕೊಳ್ಳುತ್ತಿರುವ ಫೋಟೋವನ್ನು ಮೊಬೈಲ್ ಸ್ಟೇಟಸ್‌ನಲ್ಲಿ ಹಾಕಿಕೊಂಡು ಯುವಕ ಆತ್ಮಹತೆ ಮಾಡಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ತಾಲೂಕಿನ ದೊಡ್ಡಗುಟ್ಟಹಳ್ಳಿ ಗ್ರಾಮದ ನವೀನ್(25) ಮೃತ ವ್ಯಕ್ತಿ. ಜುಲೈ 31 ರಂದು ಮನೆ ಬಿಟ್ಟವನು ರಾತ್ರಿಯದರೂ ಬಾರದೆ ಇದ್ದಾಗ ಆಗಷ್ಟು3 ರಂದು ನಂಗಲಿ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು ಅಂದೇ ನವೀನ್ ಮೊಬೈಲ್ ಸ್ಟೇಟಸ್‌ನಲ್ಲಿ ನೇಣು ಹಾಕಿಕೊಂಡ ಚಿತ್ರ ಹಾಕಿದ್ದು ಕುಟುಂಬದವರಿಗೆ ಗಾಬರಿ ಹುಟ್ಟಿಸಿತ್ತು. ಗುರುವಾರ ಸಂಜೆ ತಾಲೂಕಿನ ಕಸುವಗಾನಹಳ್ಳಿ ಮಾವಿನತೋಪಿನಲ್ಲಿ ನೇಣು ಬಿಗಿದುಕೊಂಡು ಕೊಳೆತ ಸ್ಥಿತಿಯಲ್ಲಿ ನವೀನ್ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ NEET ವಿದ್ಯಾರ್ಥಿಯ ಕೋಣೆಯಲ್ಲಿ ಸಿಕ್ಕ ನೋಟ್‌ನಲ್ಲಿತ್ತು 'ಹ್ಯಾಪಿ ಬರ್ತ್‌ಡೇ ಅಪ್ಪ..'
ನಂಗಲಿ ಪಿಎಸ್‌ಐ ಪ್ರದೀಪ್‌ಸಿಂಗ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ