ಮುಂಬೈ ಖ್ಯಾತ ನಟಿ ಮೇಲೆ ಅತ್ಯಾಚಾರ, NRI ಉದ್ಯಮಿ ವಿರುದ್ಧ ದೂರು ದಾಖಲು!

Published : Aug 05, 2023, 07:32 PM IST
ಮುಂಬೈ ಖ್ಯಾತ ನಟಿ ಮೇಲೆ ಅತ್ಯಾಚಾರ, NRI ಉದ್ಯಮಿ ವಿರುದ್ಧ ದೂರು ದಾಖಲು!

ಸಾರಾಂಶ

ಮದುವೆಯಾಗುವುದಾಗಿ ನಂಬಿಸಿ ಮುಂಬೈನ ಖ್ಯಾತ ನಟಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆದಿದೆ ಅನ್ನೋ ದೂರು ದಾಖಲಾಗಿದೆ. ಎನ್ಐಆರ್ ಉದ್ಯಮಿ ವಂಚಿಸಿದ್ದಾನೆ ಎಂದು ನಟಿ ದೂರು ದಾಖಲಿಸಿದ್ದಾರೆ. 

ಮುಂಬೈ(ಆ.05) ಖ್ಯಾತ ನಟಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಖುದ್ದು ನಟಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.ಮದುವೆಯಾಗುದಾಗಿ ನಂಬಿಸಿ 34 ವರ್ಷದ ಖ್ಯಾತ ನಟಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಲಾಗಿದೆ. ಈ ಕುರಿತು 41 ವರ್ಷದ NRI ಉದ್ಯಮಿ ವಿರೆನ್ ಪಟೇಲ್ ವಿರುದ್ಧ ದೂರು ದಾಖಲಾಗಿದೆ. ಮುಂಬೈನ ಎನ್‌ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಮುಂಬೈನ ಖ್ಯಾತ ನಟಿ, ತಾಂಜೇನಿಯಾದಲ್ಲಿ ಉದ್ಯಮಿಯಾಗಿರುವ ಭಾರತೀಯ ಮೂಲದ ವಿರೆನ್ ಪಟೇಲ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕೆಲ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ನಟಿಗೆ ಇದೀಗ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಟಿಯನ್ನು ಮದುವೆಯಾಗುವುದಾಗಿ ನಂಬಿಸಿ ಉದ್ಯಮಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಕುರಿತು ಸ್ವತಃ ನಟಿ ದೂರು ನೀಡಿದ್ದಾರೆ. ವಿಚಾರಣೆ ಆರಂಭಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

91 ಬಾಲಕಿಯರ ಮೇಲೆ ಅತ್ಯಾಚಾರ, 15 ವರ್ಷಗಳಿಂದ ರೇಪ್ ಮಾಡುತ್ತಿದ್ದ ಮಕ್ಕಳ ಕಲ್ಯಾಣ ಸಿಬ್ಬಂದಿ ಅರೆಸ್ಟ್!

2022ರಲ್ಲಿ ಮುಂಬೈನ ಅಂಧೇರಿಯಲ್ಲಿ ನಡೆದ ಖಾಸಗಿ ಪಾರ್ಟಿಯೊಂದರಲ್ಲಿ ನಟಿ, ಉದ್ಯಮಿ ಭೇಟಿಯಾಗಿದ್ದಾರೆ. ಪರಿಚಯ ಕೆಲವೇ ದಿನಗಳಲ್ಲಿ ಆತ್ಮೀಯತೆ ಪಡೆದುಕೊಂಡಿದೆ. ಬಳಿಕ ಪ್ರೀತಿ ಶುರುವಾಗಿದೆ. ದಿಢೀರ್ ಕರೆ ಮಾಡಿ ತನ್ನ ಜೊತೆಗಿರಲು ನಟಿಯನ್ನು ಉದ್ಯಮಿ ಆಹ್ವಾನಿಸಿದ್ದಾನೆ. 2023ರ ಫೆಬ್ರವರಿ ತಿಂಗಳಲ್ಲಿ ಉದ್ಯಮಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾನೆ. ಖುಷಿಯಿಂದ ಒಪ್ಪಿಕೊಂಡ ನಟಿ ಪೋಷಕರು, ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾಹಿತಿ ನೀಡಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.

ಒಂದು ದಿನ ಕುಡಿದು ಆಗಮಿಸಿದ ಉದ್ಯಮಿ ಮಧ್ಯ ರಾತ್ರಿ ತನ್ನ ಕೋಣೆಗೆ ಆಗಮಿಸಿ ಸಹಾಯ ಕೇಳಿದ್ದಾನೆ. ಬಳಿಕ ಬಿಗಿದಪ್ಪಿಕೊಂಡಿದ್ದಾನೆ. ಆತನಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಲ್ಲೆ ನಡೆಸಿದ್ದಾನೆ. ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮರುದಿನ ಬೆಳಗ್ಗೆ ನಾನು ಪೋಷಕರಿಗೆ ಮಾಹಿತಿ ನೀಡಿದ್ದೇನೆ. ಆದರೆ ಶೀಘ್ರದಲ್ಲೇ ಮದುವೆಯಾಗುವ ಕಾರಣ ಈ ವಿಚಾರವನ್ನು ಮುಂದಿಟ್ಟು ಸಂಬಂಧ ಹಾಳು ಮಾಡುವುದು ಬೇಡ ಎಂದು ಸುಮ್ಮನಾದೆ. 

ಪ್ರೀತಿಯಲ್ಲಿರುವ ವೇಳೆ ದೈಹಿಕ ಸಂಪರ್ಕಕ್ಕೆ ಮುಂದಾದಾಗ ವಿರೋಧ ವ್ಯಕ್ತಪಡಿಸಿದ್ದಾಳೆ. ಆದರೆ ಬೆದರಿಸಿ, ಹೆದರಿಸಿ ಅತ್ಯಾಚಾರ ಎಸಗಿದ್ದಾನೆ. ಮುಂಬೈ, ಪುಣೆ, ಆಲಿಬಗ್ ಹಾಗೂ ಕರ್ಜತ್‌ನಲ್ಲಿ ಅತ್ಯಾಚಾರ ಎಸಗಲಾಗಿದೆ. ಮೊದಲ ಅತ್ಯಾಚಾರವನ್ನು ಮುಂದಿಟ್ಟು ಪದೇ ಪದೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಟಿ ಹಾಗೂ ನನಗೆ ಇಂಡಸ್ಟ್ರಿಯಲ್ಲಿ ಉತ್ತಮ ಹೆಸರಿದೆ. ಜೊತೆಗೆ ಈ ಅತ್ಯಾಚಾರ ವಿಚಾರ ಹೊರಬಂದರೆ ನನ್ನ ಕುಟುಂಬ, ನನ್ನ ಕರಿಯರ್ ಕೂಡ ಹಾಳಾಗಲಿದೆ. ಮದುವೆಯಾಗುವ ಭರವಸೆ ನೀಡಿದ ಕಾರಣ ಮತ್ತೆ ಸುಮ್ಮನಾದೆ. ಆದರೆ ಉದ್ಯಮಿಯ ಉಪಟಳ ಅತೀಯಾದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಈ ವೇಳ ಪೊಲೀಸರು ವಾರ್ನಿಂಗ್ ಕೂಡ ನೀಡಿದ್ದರು.

Bengaluru Crime: ಯುವತಿ ಜತೆ ಲವ್ವಿಡವ್ವಿ: ಫ್ರೆಂಡ್ಸ್‌ ಜತೆ ಡ್ಯಾನ್ಸ್‌ ಟೀಚರ್‌ನಿಂದ ಗ್ಯಾಂಗ್‌ರೇಪ್‌!

ಈ ಬೆಳವಣಿಗೆ ಬಳಿಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಇತ್ತ ಮದುವೆಯಾಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಹೀಗಾಗಿ ನ್ಯಾಯ ಕೊಡಿಸಬೇಕು ಎಂದು ನಟಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!