ಕಲಬುರಗಿ: ಬ್ಯಾಂಕ್‌ನಲ್ಲಿ ನಕಲಿ ಚಿನ್ನವಿಟ್ಟು 4.30 ಲಕ್ಷ ಸಾಲ ಪಡೆದ ಕಿರಾತಕ

By Kannadaprabha News  |  First Published Aug 5, 2023, 8:10 PM IST

ಬಂದಿಗೆಪ್ಪ ಅಡ ಇಟ್ಟ ಬಂಗಾರದ ಮೇಲೆ ಸಂಶಯ ಬಂದು ಪರಿಶೋಧನೆ ಮಾಡಿದಾಗ ಬಂಗಾರದ ಬಳೆಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ. ಬಂಗಾರದ ಬಳೆಗಳ ವಿಚಾರ ಮಾಡುವ ಸಲುವಾಗಿ ಬಂದಿಗೆಪ್ಪ ಅವರಿಗೆ ಅಂಚೆಯ ಮೂಲಕ ನೋಟಿಸ್‌ ಕಳುಹಿಸಿದ್ದು, ನೋಟಿಸ್‌ ಸ್ವೀಕರಿಸಿ ವಿಚಾರಣೆಗೆ ಹಾಜರಾಗಿಲ್ಲ. 


ಕಲಬುರಗಿ(ಆ.05):  ಬ್ಯಾಂಕ್‌ನಲ್ಲಿ ನಕಲಿ ಬಂಗಾರದ ಬಳೆಗಳನ್ನು ಅಡ ಇಟ್ಟಕಿರಾತಕನೊಬ್ಬ 4.30 ಲಕ್ಷ ರು. ಸಾಲ ಪಡೆದು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ವಿದ್ಯಾನಗರದ ಬಂದಿಗೆಪ್ಪ ಎಂಬಾತನೆ ಬಡೇಪುರದ ಎಚ್ಡಿಎಫ್ಸಿ ಬ್ಯಾಂಕ್‌ ಶಾಖೆಯಲ್ಲಿ 8 ನಕಲಿ ಚಿನ್ನದ ಬಳೆಗಳನ್ನು ಅಡ ಇಟ್ಟು 4.30 ಲಕ್ಷ ರು.ಸಾಲ ಪಡೆದು ಮೋಸ ಮಾಡಿದ್ದು, ಈ ಸಂಬಂಧ ಎಚ್‌ಡಿಎಫ್‌ಸಿ ಬ್ಯಾಂಕ್‌ ತನಿಖಾಧಿಕಾರಿ ಬಸವರಾಜ ಕಿಶೋರಿ ಅವರು ಎಂ.ಬಿ. ನಗರ ಪೊಲೀಸ್‌ ಠಾಣೆಯಲ್ಲಿ ಆತನ ವಿರುದ್ಧ ದೂರು ಸಲ್ಲಿಸಿದ್ದಾರೆ.

ಬಂದಿಗೆಪ್ಪ ಮೊದಲು 50 ಗ್ರಾಂ., 940 ಮಿಲಿ ನಕಲಿ ಬಂಗಾರದ ಬಳೆಗಳನ್ನು ಬ್ಯಾಂಕಿನಲ್ಲಿ ಅಡ ಇಟ್ಟು 1.75 ಲಕ್ಷ ಸಾಲ ಪಡೆದಿದ್ದು, ನಂತರ 65 ಗ್ರಾಂ., 700 ಮಿಲಿ ನಕಲಿ ಬಂಗಾರದ ಬಳೆಗಳನ್ನು ಅಡ ಇಟ್ಟು 2.55 ಲಕ್ಷ ರು. ಸಾಲ ಪಡೆದಿದ್ದಾನೆ.

Latest Videos

undefined

Bengaluru: ಯೂಟ್ಯೂಬ್‌ ಚಾನಲ್‌ ಆರಂಭಿಸಿ ದಂಧೆ, ಮಾಂಸದಂಗಡಿಗಳಲ್ಲಿ ಹಫ್ತಾ ವಸೂಲಿ: 4 ಪತ್ರಕರ್ತರ ಸೆರೆ

ಬಂದಿಗೆಪ್ಪ ಅಡ ಇಟ್ಟ ಬಂಗಾರದ ಮೇಲೆ ಸಂಶಯ ಬಂದು ಪರಿಶೋಧನೆ ಮಾಡಿದಾಗ ಬಂಗಾರದ ಬಳೆಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ. ಬಂಗಾರದ ಬಳೆಗಳ ವಿಚಾರ ಮಾಡುವ ಸಲುವಾಗಿ ಬಂದಿಗೆಪ್ಪ ಅವರಿಗೆ ಅಂಚೆಯ ಮೂಲಕ ನೋಟಿಸ್‌ ಕಳುಹಿಸಿದ್ದು, ನೋಟಿಸ್‌ ಸ್ವೀಕರಿಸಿ ವಿಚಾರಣೆಗೆ ಹಾಜರಾಗಿಲ್ಲ. 116.ಗ್ರಾಂ.640 ಮಿಲಿ ನಕಲಿ ಬಂಗಾರ ಲೇಪನ ಮಾಡಿರುವ 8 ಬಳೆಗಳನ್ನು ಅಡ ಇಟ್ಟು 4.30 ಲಕ್ಷ ಹಣ ಪಡೆದು ಬ್ಯಾಂಕಿಗೆ ಮೋಸ್‌ ಮಾಡಿರುವ ಬಂದಿಗೆಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಸವರಾಜ ಕಿಶೊರಿ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಂ.ಬಿ.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

click me!