ಕೊಪ್ಪಳ: ದಲಿತನಿಗೆ ಕಟಿಂಗ್‌ ಮಾಡಲು ನಿರಾಕರಣೆ, ಮಾತಿಗೆ ಮಾತು ಬೆಳೆದು ಯುವಕನ ಹತ್ಯೆಗೈದ ಕ್ಷೌರಿಕ..!

By Girish Goudar  |  First Published Aug 18, 2024, 9:52 AM IST

ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಕಟಿಂಗ್ ಶಾಪ್‌ಗೆ ಹೋಗಿದ್ದ. ಈ ವೇಳೆ ದಲಿತರಿಗೆ ಕ್ಷೌರ ಮಾಡೋದು ಕಷ್ಟ ಆಗೈತಿ, ಮೊದಲು ಹಣ ಕೊಡು ಎಂದು ಮುದಕಪ್ಪ ಕೇಳಿದ್ದನಂತೆ. ನಮ್ಮ‌ ಅಣ್ಣ ಬಂದ ಮೇಲೆ ಹಣ ಕೊಡುತ್ತೇನೆ ಎಂದು ಯಮನೂರಪ್ಪ ಹೇಳಿದ್ದನು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದು ಯಮನೂರಪ್ಪನ ಹೊಟ್ಟೆಗೆ ಕತ್ತರಿಯಿಂದ ಚುಚ್ಚಿ ಮುದಕಪ್ಪ ಕೊಲೆ‌ ಮಾಡಿದ್ದಾನೆ.  


ಕೊಪ್ಪಳ(ಆ.18): ದಲಿತ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದು ದಲಿತ ಯುವಕನನ್ನು ಕ್ಷೌರಿಕ ಕೊಲೆ ಮಾಡಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದೆ. ಯಮನೂರಪ್ಪ ಬಂಡಿಹಾಳ (23) ಕೊಲೆಯಾದ ಯುವಕ. 

ಮುದಕಪ್ಪ ಹಡಪದ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.  ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಕಟಿಂಗ್ ಶಾಪ್‌ಗೆ ಹೋಗಿದ್ದ. ಈ ವೇಳೆ ದಲಿತರಿಗೆ ಕ್ಷೌರ ಮಾಡೋದು ಕಷ್ಟ ಆಗೈತಿ, ಮೊದಲು ಹಣ ಕೊಡು ಎಂದು ಮುದಕಪ್ಪ ಕೇಳಿದ್ದನಂತೆ. ನಮ್ಮ‌ ಅಣ್ಣ ಬಂದ ಮೇಲೆ ಹಣ ಕೊಡುತ್ತೇನೆ ಎಂದು ಯಮನೂರಪ್ಪ ಹೇಳಿದ್ದನು. 

Tap to resize

Latest Videos

undefined

ಸ್ನೇಹಿತೆಯ ಜೊತೆ ಸೇರಿ ಗಂಡನ ಪ್ರೈವೇಟ್‌ ಪಾರ್ಟ್‌ಗೆ ಕತ್ತರಿ ಹಾಕಿದ ಮಹಿಳೆ

ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದು ಯಮನೂರಪ್ಪನ ಹೊಟ್ಟೆಗೆ ಕತ್ತರಿಯಿಂದ ಚುಚ್ಚಿ ಮುದಕಪ್ಪ ಕೊಲೆ‌ ಮಾಡಿದ್ದಾನೆ.  ಸಂಗನಾಳ‌ ಗ್ರಾಮಕ್ಕೆ ಕೊಪ್ಪಳ ಎಸ್ಪಿ ರಾಮ ಎಲ್ ಅರಸಿದ್ದಿ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!