ಅಡುಗೆಯವರು, ವಾರ್ಡನ್, ಶಿಕ್ಷಕರ ನಡುವೆ ಕಿತ್ತಾಟ; ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ವಿಷ ಬೆರೆಸಿದ ಕಿರಾತಕರು!

By Ravi Janekal  |  First Published Aug 17, 2024, 6:17 PM IST

ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ಕೋಡ್ ಕಸ್ತೂರಿ ಬಾ ವಸತಿ ಶಾಲೆಯ ಮಧ್ಯಾಹ್ನದ ಬಿಸಿಯೂಟ ಸಾಂಬರು ಸೇವಿಸಿದ ಅಡುಗೆ ಸಹಾಯಕಿ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಸಾಂಬಾರಿನಲ್ಲಿ ಕಿರಾತಕರು ವಿಷ ಬೆರೆಸಿರುವ ಆರೋಪ ಕೇಳಿಬಂದಿದೆ.


ರಾಯಚೂರು (ಆ.17): ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ಕೋಡ್ ಕಸ್ತೂರಿ ಬಾ ವಸತಿ ಶಾಲೆಯ ಮಧ್ಯಾಹ್ನದ ಬಿಸಿಯೂಟ ಸಾಂಬರು ಸೇವಿಸಿದ ಅಡುಗೆ ಸಹಾಯಕಿ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಸಾಂಬಾರಿನಲ್ಲಿ ಕಿರಾತಕರು ವಿಷ ಬೆರೆಸಿರುವ ಆರೋಪ ಕೇಳಿಬಂದಿದೆ.

ವಿಜಯಲಕ್ಷ್ಮೀ ಸಾಂಬಾರು ಸೇವಿಸಿ ಅಸ್ವಸ್ಥಗೊಂಡ ಅಡುಗೆ ಸಹಾಯಕಿ. ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿಗಳು ಆಹಾರ ಸೇವಿಸಿಲ್ಲ. ಬಿಸಿಯೂಟದ ತಯಾರಿಸಿದ ಬಳಿಕ ಊಟಕ್ಕೆ ತಯಾರಿ ನಡೆದಿತ್ತು. ಈ ವೇಳೆ ಸಾಂಬಾರಿನ ಬಣ್ಣ ಬದಲಾಗಿರುವುದು ಗಮನಿಸಿದ್ದ ಅಡುಗೆ ಸಹಾಯಕಿ. ಹೀಗಾಗಿ ಮಕ್ಕಳಿಗೆ ಊಟ ಬಡಿಸುವ ಮೊದಲು ಸ್ವತಃ ತಾನೇ ಸಾಂಬಾರು  ಸೇವಿಸಿ ಟೆಸ್ಟ್ ಮಾಡಿದ್ದ ಸಹಾಯಕಿ ವಿಜಯಲಕ್ಷ್ಮೀ. ಊಟ ಸೇವಿಸಿದ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಡುಗೆ ಸಹಾಯಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿದು ಶಾಲೆಗೆ ದೌಡಾಯಿಸಿದ ಮಕ್ಕಳ ಪೋಷಕರು ಶಾಲಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಎಂದಿನಂತೆ ವಿದ್ಯಾರ್ಥಿಗಳು ಆಹಾರ ಸೇವಿಸಿದ್ದಾರೆ ಏನು ಗತಿ ಎಂದು ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ.

Tap to resize

Latest Videos

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ವಾಟಾಳ್ ನಾಗರಾಜ್ ಕೆಂಡ!

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು. ಮಧ್ಯಾಹ್ನ ಊಟ ಅನ್ನ, ಸಾಂಬಾರು ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಷ ಬೆರೆಸಿದ ಕಿರಾತಕರು ಯಾರು?

ವೈಯಕ್ತಿಕ ವಿಚಾರಕ್ಕೆ ಕಳೆದುಕೊಂಡು ವರ್ಷದಿಂದ ಅಡುಗೆಯವರು, ವಾರ್ಡನ್ ಹಾಗೂ ಶಿಕ್ಷಕರ ನಡುವೆ ಕಿತ್ತಾಟ ನಡೆದಿತ್ತು. ವಸತಿ ಶಾಲೆ ಸಿಬ್ಬಂದಿಯ ಮುಸುಕಿನ ಗುದ್ದಾಟದಿಂಧ ಹೈರಾಗಿರುವ ಬಡ ವಿದ್ಯಾರ್ಥಿನಿಯರು. ಪ್ರಭಾರಿ ಮುಖ್ಯ ಗುರುಗಳು ರಜೆ ಮೇಲೆ ತೆರಳಿದ ದಿನವೇ ಸಾಂಬಾರಿಗೆ ವಿಷ ಬೆರೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಷ ಬೆರೆಸುವ ಮುನ್ನ  ಅಂದು ಅದೇ ಸಾಂಬಾರು ಊಟ ಮಾಡಿದ್ದ ಶಿಕ್ಷಣ ಇಲಾಖೆ ಅಧಿಕಾರಿ.  ವಸತಿ ಶಾಲೆಗೆ ಭೇಟಿ ನೀಡಿದ್ದ ಉಪ ಸಮನ್ವಯ ಅಧಿಕಾರಿ ಇಂದ್ರಮ್ಮ. ವಸತಿ ಶಾಲೆಯಲ್ಲಿ ಅದೇ ಸಾಂಬಾರ ಅನ್ನ ಸೇವಿಸಿದ್ದರು. ಆದರೆ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಅವರು ಹೋಗುತ್ತಿದ್ದಂತೆ ಶಾಲೆಯಲ್ಲೆ ವಿಷ ಬೆರೆಸಿದ ಕಿರಾತಕರು? ಅದೃಷ್ಯವಶಾತ್ ದಿನ ಊಟ ಮಾಡಬೇಕಿದ್ದ ವಿದ್ಯಾರ್ಥಿನಿಯರು ಅಂದು ಶಿಕ್ಷಣ ಇಲಾಖೆ ಅಧಿಕಾರಿ ಬಂದಿದ್ದರಿಂದ ವಿಳಂಬವಾಗಿತ್ತು. ಅಧಿಕಾರಿ ಊಟ ತೆರಳಿದ ಬಳಿಕ ಮಕ್ಕಳಿಗೆ ಊಟಕ್ಕೆ ಬಡಿಸಲು ಸಿದ್ಧತೆ ಮಾಡಿಕೊಂಡಿದ್ದ ಅಡುಗೆ ಸಹಾಯಕಿ ವಿಜಯಲಕ್ಷ್ಮೀ. ಈ ವೇಳೆ ಸಾಂಬಾರು ಕೆಂಪು ಬಣ್ಣಕ್ಕೆ ಬದಲಾಗಿರುವುದು, ವಿಷದ ವಾಸನೆ ಬಂದಿದೆ.   ಹೀಗಾಗಿ ವಿದ್ಯಾರ್ಥಿನಿಯರಿಗೆ ಊಟಕ್ಕೆ ಕೊಡುವ ಮೊದಲು ಸಾಂಬಾರು ಸೇವಿಸಿ ಟೆಸ್ಟ್ ಮಾಡಿರುವ ವಿಜಯಲಕ್ಷ್ಮಿ. ಐದು ನಿಮಿಷದೊಳಗೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮುಖ್ಯಗುರುಗಳನ್ನು ಓಡಿಸುವ ಪ್ಲಾನ್?

ಆ.13ರಂದು ಶಾಲಾ ಆವರಣದಲ್ಲಿ ತಾಯಮ್ಮ ದೇವಿ ಪೂಜೆ ಮಾಡಿಸಿದ್ದ ಮುಖ್ಯ ಶಿಕ್ಷಕಿ ಸುರೇಖಾ. ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಕ್ಕೆ ಮುಖ್ಯಶಿಕ್ಷಕಿಯನ್ನ ಅಮಾನತುಗೊಳಿಸಿ ರಾಯಚೂರು ಡಿಡಿಪಿಐ ಆದೇಶ ಹೊರಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ರಜೆ ಮೇಲೆ ತೆರಳಿದ್ದ ಶಿಕ್ಷಕಿ ಸುರೇಖಾ ಡಿಡಿಪಿಐ ಆದೇಶ ನೋಡಿ ಶಾಕ್ ಆಗಿದ್ದಾರೆ.. ನನ್ನದೇನು ತಪ್ಪಿಲ್ಲ. ನನಗ್ಯಾಕೆ ಅಮಾನತು ಶಿಕ್ಷೆ. ನಾನು ರಜೆ ಮೇಲೆ ಇದ್ದೆ ಎಂದು ಕಣ್ಣೀರು ಹಾಕಿದ ಮುಖ್ಯ ಶಿಕ್ಷಕಿ. ಶಿಕ್ಷಕಿ ಶಾಲೆಯಿಂದ ತೆರಳುವಾಗ ವಿದ್ಯಾರ್ಥಿನಿಯರು ಸಹ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು.

ಕಳೆದೊಂದು ವರ್ಷದಿಂದ ಅಡುಗೆ ಸಿಬ್ಬಂದಿ, ವಾರ್ಡನ್, ಶಿಕ್ಷಕರ ನಡುವಿನ ಗಲಾಟೆ ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ. ಅಧಿಕಾರಿಗಳು ಭೇಟಿ ನೀಡಿ ಚರ್ಚೆ ನಡೆಸಿದರೂ ಮುಗಿಯದ ಮುಸುಕಿನ ಗುದ್ದಾಟ. ಬಡ ಮಕ್ಕಳ ಕಲ್ಯಾಣಕ್ಕಾಗಿ ಬಂದ ಹಣ ಲೂಟಿ ಹೊಡೆಯಲು ನಡೆದೀಯಾ ಸಂಚು? ಸರ್ಕಾರದಿಂದ ಶೌಚಾಲಯ, ಕಟ್ಟಡ ಹೆಸರಿನಲ್ಲಿ ಬಂದ ಲಕ್ಷ ಲಕ್ಷ ಹಣ ಗುಳುಂ. ನಿತ್ಯ ಸಮಸ್ಯೆಗಳ ಮಧ್ಯೆಯಲ್ಲೇ ನಡೆಯುತ್ತಿದೆ ಮಕ್ಕಳ ವಿದ್ಯಾಭ್ಯಾಸ. ಇದೀಗ ಮುಖ್ಯ ಶಿಕ್ಷಕರ ಅಮಾನತ್ತಿನಿಂದ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಅಮಾನತುಗೊಂಡ ಶಿಕ್ಷಕಿ ಶಾಲೆಯಿಂದ ಹೊರನಡೆಯುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯರು. ಟೀಚರ್ ನೀವು ನಮಗೆ ಬೇಕು, ಶಾಲೆ ಬಿಟ್ಟು ಹೋಗಬೇಡಿ ಟೀಚರ್ ಎಂದು ಕಣ್ಣೀರು ಹಾಕಿದ ವಿದ್ಯಾರ್ಥಿನಿಯರು.

ಸಿಎಂ ಗೆ ನೋಟಿಸ್ ಕೊಡೊದು ಪ್ರಜಾಪ್ರಭುತ್ವ ಅಲ್ಲ; ರಾಜ್ಯಪಾಲರಿಗೆ ಹೋರಾಟದ ಎಚ್ಚರಿಕೆ ನೀಡಿದ ವಾಟಾಳ್!

100 ವಿದ್ಯಾರ್ಥಿನಿಯರು ಇರುವ ವಸತಿ ನಿಲಯದಲ್ಲಿ ವಿಷಹಾಕಿದವರು ಯಾರು? ಪೊಲೀಸರು ತನಿಖೆ ಮುಗಿಯುವ ಮೊದಲೇ ಪ್ರಬಾರಿ ಮುಖ್ಯಗುರುಗಳನ್ನ ಅಮಾನತು ಮಾಡಿದ್ದು ಯಾಕೆ? ಶಾಲಾ ಅವರಣದಲ್ಲಿ ತಾಯಮ್ಮ ದೇವಿ ಪೂಜೆ ಮಾಡಿಸಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಯಿತೇ? ಪ್ರಭಾರಿ ಮುಖ್ಯ ಗುರುಗಳಿಗೆ ಅಮಾನತು ಮಾಡಿದಂತೆ ಎಲ್ಲ ಶಿಕ್ಷಕರನ್ನು ಅಮಾನತು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

click me!