
ಬೆಂಗಳೂರು(ಸೆ.20): ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ಟೋಪಿ ಹಾಕಿರುವ ವಂಚಕರ ಜಾಲದ ವಿರುದ್ಧ ಹಲಸೂರು ಗೇಟ್ ಹಾಗೂ ಹೈಗೌಂಡ್ಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಮಾಧವನಗರ ನಿವಾಸಿ ಬಿ. ಲೋಹಿತ್ ಗೌಡ ಮೋಸ ಹೋಗಿದ್ದು, ಅವರ ದೂರಿನ ಮೇರೆಗೆ ದಾಸರಹಳ್ಳಿಯ ಪ್ರವೀಣ್ ಎಂ.ಸೋಮನಕಟ್ಟಿ, ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂ ಕಿನ ವಿಶ್ವೇಶ್ ಹೆಗಡೆ, ದಾಬಸಪೇಟೆ ಎಚ್.ಆರ್.ವೆಂಕ ಟೇಶ್, ಆರ್.ಟಿ.ನಗರದ ಟಿ. ಶಿವಣ್ಣ, ತಿಪ್ಪಸಂದ್ರದ ಟಿ.ಎನ್. ಶ್ರೀನಿವಾಸ್ ಮತ್ತು ಸಹಕಾರ ನಗರದ ರಾಜೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫೇಕ್ MBBS ಸರ್ಟಿಫಿಕೇಟ್ ನೀಡಿದ ನಕಲಿ ವೈದ್ಯನ ಬಂಧನ
ಕಮೀಷನರ್ ಮುಂದೆಯೇ ಡೀಲ್: ಮೂರು ವರ್ಷಗಳ ಹಿಂದೆ ನಗರ ಪೊಲೀಸ್ ಆಯುಕ್ತರ ಕಚೇರಿ ಸಮೀಪದ ಹೋಟೆಲ್‌ನಲ್ಲೇ ಲೋಹಿತ್ ಅವರನ್ನು ತಾವು ಬೆಸ್ಕಾಂ ಅಧಿಕಾರಿಗಳು ಎಂದು ಹೇಳಿ ವಂಚಕರು ಭೇಟಿಯಾಗಿದ್ದರು. ಅಲ್ಲೇ 23 ಲಕ್ಷ ನೀಡಿದರೆ ಕೆಪಿಟಿ ಸಿಎಲ್ ಹಾಗೂ ಬೆಸ್ಕಾಂನಲ್ಲಿ ಎಇಇ ಹುದ್ದೆ ಕೊಡಿಸುವುದಾಗಿ ಡೀಲ್ ಮಾಡಿದ್ದರು. ಇದಕ್ಕೆ ಕೆಲ ದಾಖಲೆಗಳನ್ನು ತೋರಿಸಿ ನೇಮಕಾತಿ ಆದೇಶ ಎಂದಿದ್ದರು. ಈ ಮಾತು ನಂಬಿದ ಲೋಹಿತ್, ಆರೋಪಿಗಳಿಗೆ ಹಂತ ಹಂತವಾಗಿ ಹಣವನ್ನು ಪಾವತಿಸಿದ್ದರು.
ತರುವಾಯ ಬೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಲೋಹಿತ್ ಕೆಲಸ ಕೊಡಿಸಿದ ಆರೋಪಿಗಳು, 18 ತಿಂಗಳ ಬಳಿಕ ಕೆಲಸಖಾಯಂ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಕೆಲ ದಿನಗಳ ಬಳಿಕ ತಾನು ಮೋಸ ಹೋಗಿರುವ ಸಂಗತಿ ಲೋಹಿತ್‌ಗೆ ಅರಿವಾಗಿದೆ. ನಂತರ ಹಲಸೂರು ಗೇಟ್ ಠಾಣೆಗೆ ತೆರಳಿ ಅವರು ದೂರು ದಾಖಲಿಸಿದ್ದಾರೆ. ಇದೇ ರೀತಿ ಹಲವು ಜನರಿಗೆ ಆರೋಪಿಗಳು ವಂಚಿಸಿದ್ದಾರೆ. ಕೆಲವು ಹೈಗೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಂಪತಿಯ ಬರ್ಬರ ಹತ್ಯೆ: ಕೋಟೆನಾಡು ಚಿತ್ರದುರ್ಗದಲ್ಲಿ ಜಮೀನಿಗೆ ತೆರಳಿದ್ದ ದಂಪತಿಯ ಬರ್ಬರ ಹತ್ಯೆ ನಡೆದಿದ್ದು. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ವಿಡಿಯೋದಲ್ಲಿ ವೀಕ್ಷಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ