ಚಿಕ್ಕಮಗಳೂರಿನಲ್ಲಿ 5 ವರ್ಷದ ಬಾಲಕಿ ಅನುಮಾನಾಸ್ಪದ ಸಾವು: ಕಿವಿಯಲ್ಲಿದ್ದ ಓಲೆ, ಕಾಲ್ಗೆಜ್ಜೆ ನಾಪತ್ತೆ?

By Govindaraj S  |  First Published Sep 19, 2024, 7:16 PM IST

ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ನಿಲ್ದಾಣದ ಬಳಿ ವಾಸವಿರುವ ಮಂಜುನಾಥ್ ಹಾಗೂ ಮಂಗಳ ದಂಪತಿಯ ಐದು ಐದು ವರ್ಷದ ಬಾಲಕಿ ಮೃತ ದುರ್ದೈವಿ. ಇಂದು ಮಗುವಿಗೆ ಜ್ವರ ಇತ್ತು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.19): ಮನೆಯಲ್ಲಿದ್ದ ಐದು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಕೆಲಸ ಮುಗಿಸಿ ಮನೆ ಬಂದಾಗ ಪೋಷಕರು ಬಾಲಕಿ ಶವಕಂಡು ದಿಗ್ಭ್ರಾಂತರಾಗಿದ್ದಾರೆ.

Tap to resize

Latest Videos

undefined

ಬಾಲಕಿಯ ಕಿವಿಯಲ್ಲಿದ್ದ ಓಲೆ, ಕಾಲ್ಗೆಜ್ಜೆ ನಾಪತ್ತೆ?: ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ನಿಲ್ದಾಣದ ಬಳಿ ವಾಸವಿರುವ ಮಂಜುನಾಥ್ ಹಾಗೂ ಮಂಗಳ ದಂಪತಿಯ ಐದು ಐದು ವರ್ಷದ ಬಾಲಕಿ ಮೃತ ದುರ್ದೈವಿ. ಇಂದು ಮಗುವಿಗೆ ಜ್ವರ ಇತ್ತು. ಅಂಗನವಾಡಿ ಕೂಡ ರಜೆ ಇದ್ದ ಕಾರಣ ಮನೆಯವರು ಮಗುವನ್ನ ಮನೆಯಲ್ಲೇ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದರು. ದಂಪತಿಗಳಿಬ್ಬರು ಸಮೀಪದ ತೆಂಗಿನಕಾಯಿ ಮಂಡಿಯಲ್ಲಿ ಕೆಲಸಕ್ಕೆ ಹೋಗಿದ್ದರು. ಜ್ವರ ಇದ್ದ ಕಾರಣ ಮಗುವನ್ನ ಮನೆಯಲ್ಲಿ ಬಿಟ್ಟು ಹೋಗಿದ್ದರು. ಆದರೆ, ದಂಪತಿಗಳು ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಾಗ ಬಾಲಕಿಯ ಶವ ಕಂಡು ದಿಗ್ಭ್ರಾಂತರಾಗಿದ್ದಾರೆ. 

ಬೂತ್‌ ಮಟ್ಟದಿಂದ ಬಲ ಹೆಚ್ಚಿಸಿ ಮುಂಬರುವ ಚುನಾವಣೆಗೆ ಜೆಡಿಎಸ್ ಪಕ್ಷ ಸಜ್ಜಗೊಳಿಸಿ: ನಿಖಿಲ್ ಕುಮಾರಸ್ವಾಮಿ

ಮಗುವಿನ ಕಿವಿಯಲ್ಲಿ ಇದ್ದ ಓಲೆ ಹಾಗೂ ಕಾಲ್ಗೆಜ್ಜೆ ಇರಲಿಲ್ಲ. ಮಗುವಿನ ಕೆನ್ನೆ ಹಾಗೂ ಕೈ ಮೇಲೆ ಗಾಯಗಳಾಗಿದ್ದು ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಜ್ಜಂಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಹಾಗೂ ಡಾಗ್ ಸ್ಕ್ವಾಡ್ ಕೂಡ ಭೇಟಿ ನೀಡಿವೆ. ಮಗುವಿನ ಸಾವಿಗೆ ನಿಖರ ಕಾರಣ ಏನೆಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!