ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಟ್ಟ ಮಾಡೆಲ್ ಗಳು/ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಟೋ, ವಿಡಿಯೋ/ ದುಬೈನಿಂದ ಘಟನೆ ವರದಿ/ ಮಾಡೆಲ್ ಗಳನ್ನು ವಶಕ್ಕೆ ಪಡೆದ ಪೊಲೀಸರು
ದುಬೈ(ಏ. 05) ಇದು ಅರಬ್ ಸಂಸ್ಥಾನದಿಂದ ವರದಿಯಾದ ಸುದ್ದಿ ಅಂದರೆ ನೀವು ನಂಬಲೇಬೇಕು. ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತು ಪೋಸ್ ಕೊಟ್ಟಿದ್ದ ಎಲ್ಲ ಹೆಂಗಳೆಯರನ್ನು ಬಂಧಿಸಲಾಗಿದೆ.
ಡಜನ್ ಗೂ ಅಧಿಕ ಹೆಂಗಸರು ಬೆತ್ತಲಾಗಿ ನಿಂತು ಪೋಸ್ ಕೊಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಶನಿವಾರ ಘಟನೆ ನಡೆದಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಪ್ರಧಾನಿ ಗಮನ ಸೆಳೆಯಲು ವೇದಿಕೆಯಲ್ಲೇ ಬೆತ್ತಲಾದ ನಟಿ
ಸಾರ್ವಜನಿಕ ಸಭ್ಯತೆ ಕಾನೂನಿನ ಉಲ್ಲಂಘಟನೆ, ನಗ್ನತೆ ಪ್ರದರ್ಶನ, ಸಮಾಜ ವಿರೋಧಿ ನಡವಳಿಕೆ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಆರೋಪ ಸಾಬೀತಾದರೆ ಆರು ತಿಂಗಳು ಶಿಕ್ಷೆ ಜತೆಗೆ 5 ಸಾವಿರ ದಿರ್ಹಾಮ್ (ಒಂದು ಲಕ್ಷ ರೂ.) ದಂಡ ವಿಧಿಸಬಹುದು. ಪೋರ್ನ್ ವೆಬ್ ಸೈಟ್ ಒಂದಕ್ಕೆ ಬೆತ್ತಲೆ ಪೋಸ್ ಕೊಟ್ಟಿದ್ದರು ಎನ್ನಲಾಗಿದೆ.
ಹದಿನೈದು ಮಾಡೆಲ್ ಗಳು ಪುಕ್ಕಟೆ ಪ್ರಚಾರಕ್ಕೋಸ್ಕರ ಹೀಗೆ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಪೋಟೋಕ್ಕೆ ಪ್ರತಿಕ್ರಿಯೆ ನೀಡುವುದು ಮತ್ತು ಹಂಚಿಕೆ ಮಾಡುವವರಿಗೂ ಜೈಲು ಶಿಕ್ಷೆ ಸಾಧ್ಯತೆ ಇದೆ.