
ರಾಜ್ ಕೋಟ್(ಏ. 05) ಆನ್ ಲೈನ್ ನಲ್ಲಿ ಕಾರು ಬುಕ್ ಮಾಡಲು ಹೋಗಿ ಮಹಿಳೆಯೊಬ್ಬರು 1 ಲಕ್ಷ ರೂ. ಕಳೆದುಕೊಂಡಿದ್ದಾರೆ. ಗುಜರಾತ್‌ನ ಜಾಮ್‌ನಗರ್‌ನಲ್ಲಿ ವೃದ್ಧೆಯೊಬ್ಬರು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ. ವೈದ್ಯರಾಗಿ ಕೆಲಸ ಮಾಡುತ್ತಿರುವ 71 ವರ್ಷದ ಮಹಿಳೆ ಹಣ ಕಳೆದುಕೊಂಡಿದ್ದಾರೆ.
ಆನ್ ಲೈನ್ ನಲ್ಲಿ ಕಾರು ಕಾಯ್ದಿರಿಸಲು ಯತ್ನಿಸುತ್ತಿದ್ದಾಗ ಒಂದು ನಂಬರ್ ಸಿಕ್ಕಿದ್ದು ಅದಕ್ಕೆ ಕರೆ ಮಾಡಿದ್ದಾಳೆ. ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಎಂದು ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದಾನೆ.
ಹಣ ಕಳೆದುಕೊಂಡವನಿಗೆ ವಂಚಕನ ಪಟ್ಟ ಕಟ್ಟುವ ಸೈನರ್ ಕಳ್ಳರು
ಮಹಿಳೆ ಡಾ. ಕಲ್ಪನಾ ಶಾಗೆ ಒಂದಷ್ಟು ಡಿಟೆಲ್ಸ್ ಕಳಿಸಿ ಇದರಲ್ಲಿ ಯಾವ ಕಾರು ನಿಉಮಗೆ ಓಕೆ? ಬುಕ್ ಮಾಡಿ ಎಂದಿದ್ದಾನೆ. ಒಂದು ನಂಬರ್ ಕೊಟ್ಟು ನೀವು ಕಾಲ್ ಮಾಡಿದರೆ ಕಾರು ಬುಕ್ ಆಗುತ್ತದೆ ಎಂದು ನಂಬಿಸಿದ್ದಾನೆ.
ಒಂದಿಷ್ಟು ಆಪ್ ಗಳ ಲಿಂಕ್ ಕಳಿಸಿ ಇದನ್ನು ಡೌನ್ ಲೋಡ್ ಮಾಡಿಕೊಂಡು ಬುಕ್ ಮಾಡಬೇಕು ಎಂಇದ್ದಾನೆ. ನಂಬಿದ ಮಹಿಳೆ ಹಾಗೆ ಮಾಡಿದ್ದು ಆಕೆಯ ಪೋನ್ ನಲ್ಲಿದ್ದ ಎಲ್ಲ ವಿವರಗಳು ವಂಚಕನ ಪಾಲಾಗಿದೆ. ಇದಾದ ಮೇಲೆ ಮಹಿಳೆ ಮೊಬೈಲ್ ಗೆ ಮೂರು ಟೆಕ್ಸ್ಟ್ ಮೆಸೇಜ್ ಬಂದಿದ್ದು ಹಣ ಕಟ್ ಆಗಿದೆ.
ಹಣ ಕಳೆದುಕೊಂಡ ಮಹಿಳೆ ವಂಚಕ ನೀಡಿದ್ದ ನಂಬರ್ ಗೆ ಕಾಲ್ ಮಾಡಿದರೆ ಸ್ವಿಚ್ ಆಫ್ ಬಂದಿದೆ. ಏನೂ ಮಾಡಲೂ ತೋಚದೆ ಮಹಿಳೆ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ನೀವು ಹಣ ಗೆದ್ದಿರುವಿರಿ, ಈ ಲಿಂಕ್ ಓಪನ್ ಮಾಡಿ ಎಂಬ ಸಂದೇಶಗಳು ಎಲ್ಲರ ಮೊಬೈಲ್ ಗೆ ಬರುತ್ತಲಿದ್ದು ದಯವಿಟ್ಟು ತೆರೆಯಲು ಹೋಗಬೇಡಿ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ