ಮದುವೆಯಾಗಲು ಹುಡುಗಿ ಸಿಗಲಿಲ್ಲ/ ಕೊನೆಗೆ ಮೂರು ಲಕ್ಷ ರೂ. ಕೊಟ್ಟು ಮದುವೆಯಾದ/ ಮದುವೆಯಾದ ಹದಿಮೂರು ದಿನಕ್ಕೆ ಹುಡುಗಿ ಪರಾರಿ/ ಪತ್ನಿ ಹುಡುಕಿಕೊಡಿ ಎಂದು ದೂರು ದಾಖಲಿಸಿದ ವರ
ಭರತ್ ಪುರ(ಏ. 05) ಮದುವೆಗೆ ಹೆಣ್ಣು ಹುಡುಕಿ ಸಾಗಾಗಿ ಬೇಸತ್ತು ಕೊನೆಗೆ ಮೂರು ಲಕ್ಷ ರೂ. ಕೊಟ್ಟು ಹುಡುಗಿಯೊಬ್ಬಳನ್ನು ವಿವಾಹವಾದ. ಆದರೆ..
ಹೌದು.. ವಿವಾಹವಾದ ಯುವತಿ 13 ದಿನಕ್ಕೆ ಪರಾರಿ. ಭರತ್ ಪುರ ಜಿಲ್ಲೆಯ ಬಯಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಾಗ್ಲಾ ಮದರ್ ಗ್ರಾಮದ ನಾರಾಯಣ ಸಿಂಗ್ ಗುರ್ಜರ್ ಎಂಬಾತ ಹಣ ಮತ್ತು ಪತ್ನಿ ಇಬ್ಬರನ್ನು ಕಳೆದುಕೊಂಡಿದ್ದಾನೆ. ಪತ್ನಿ ಹುಡುಕಿಕೊಡಿ ಎಂದು ದೂರು ಸಲ್ಲಿಸಿದ್ದಾನೆ.
ಮದುವೆ ದಿನ ಗರಳೆಯನೊಂದಿಗೆ ಅಕ್ಕ ಪರಾರಿ, ತಂಗಿ ಮದುವೆಯಾದರೂ ದಕ್ಕದ ಪತ್ನಿ
ನಾರಾಯಣ್ ಸಿಂಗ್ ಮದುವೆಗೆ ಹುಡುಗಿಯೇ ಸಿಕ್ಕಿರಲಿಲ್ಲ. ನಂತರ ಮಧ್ಯ ಪ್ರದೇಶದ ಹುಡುಗಿಯೊಬ್ಬಳ ಜತೆ ಮದುವೆ ನಿಶ್ಚಯ ಮಾಡಿಕೊಳ್ಳುತ್ತಾನೆ. ಯುವತಿಯ ತಂದೆಗೆ ಮದುವೆ ಮೂರು ಲಕ್ಷ ರೂ. ನೀಡಲಾಗುತ್ತದೆ. ಮಧ್ಯವರ್ತಿ ಮೂಲಕ ಹಣ ಸಂದಾಯವಾಗುತ್ತದೆ.
ಮಗಳು ಮದುವೆಗೆ ಒಪ್ಪಿದ್ದಾಳೋ ಇಲ್ಲವೋ? ಎಂಬುದನ್ನು ತಂದೆ ಕೇಳಿರಲಿಲ್ಲ. ಮದುವೆಯಾದ ದಿನದಿಂದಲೂ ಒಂದೆಲ್ಲಾ ಒಂದು ಕಾರಣ ಹೇಳಿ ಗಂಡನಿಂದ ದೂರ ಇದ್ದಳು. ಹದಿಮೂರನೇ ದಿನ ಫಸ್ಟ್ ನೈಟ್ ಗೆ ಸಿದ್ಧ ಎಂದು ಹೇಳಿದ್ದಳು. ಇದೇ ಖುಷಿಯಲ್ಲಿದ್ದ ವರನಿಗೆ ದೊಡ್ಡ ಶಾಕ್ ಕಾದಿತ್ತು. ಎಷ್ಟೇ ಹುಡುಕಿದರೂ ಪತ್ನಿ ಸಿಗಲಿಲ್ಲ. ಅಂತಿಮವಾಗಿ ಆಕೆ ಯಾರ ಜತೆಗೋ ಎಸ್ಕೇಪ್ ಆಗಿದ್ದು ಪತ್ನಿ ಹುಡುಕಿಕೊಡಿ ಎಂದು ಠಾಣೆ ಮೆಟ್ಟಿಲು ಏರಿದ್ದಾನೆ.