ದಿಬ್ರುಗಢದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಭಾಯಿಜಾನ್ ಅಲಿ ಮತ್ತು ಸಫರ್ ಅಲಿ ಎಂದು ಗುರುತಿಸಲಾಗಿದೆ
ದಿಬ್ರುಗಢ (ಅಸ್ಸಾಂ) (ಫೆಬ್ರವರಿ 6, 2023): ಅಸ್ಸಾಂನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ ಸಂಬಂಧ ದಿಬ್ರುಗಢದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ. ಈ ಇಬ್ಬರು ಆರೋಪಿಗಳನ್ನು ಭಾಯಿಜಾನ್ ಅಲಿ ಮತ್ತು ಸಫರ್ ಅಲಿ ಎಂದು ಗುರುತಿಸಲಾಗಿದೆ ಎಂದೂ ದಿಬ್ರುಗಢ ಎಸ್‌ಪಿ ಶ್ವೇತಾಂಕ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ದಿಬ್ರುಗಢದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಭಾಯಿಜಾನ್ ಅಲಿ ಮತ್ತು ಸಫರ್ ಅಲಿ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿ ಅಥಾಬರಿ ಚಹಾ ತೋಟದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ" ಎಂದೂ ಅವರು ಹೇಳಿದರು. ಆರೋಪಿಗಳ ವಿರುದ್ಧ 2012 ರ ಪೋಕ್ಸೋ ಕಾಯ್ದೆಯ ಸೆಕ್ಷನ್ 376 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.
ಇದನ್ನು ಓದಿ: ರೇಪ್ ಮಾಡಲು ಯತ್ನಿಸಿದ ಪಾಪಿಯ ತುಟಿಯನ್ನೇ ಕಚ್ಚಿ ಕತ್ತರಿಸಿ ಬಚಾವ್ ಆದ ಯುವತಿ!
ಆಕೆಯ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು ಮತ್ತು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಶಂಕಿಸಲಾಗಿದೆ. ಫೆಬ್ರವರಿ 3 ರಿಂದ ಬಾಲಕಿ ನಾಪತ್ತೆಯಾಗಿದ್ದಳು. ಬಾಲಕಿಯನ್ನು ಸದ್ಯ ಅಸ್ಸಾಂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಚಿಕಿತ್ಸೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ ಎಂದೂ ತಿಳಿದುಬಂದಿದೆ.
ಇನ್ನು, ಸ್ಥಳೀಯ ವರದಿಗಳ ಪ್ರಕಾರ ಸಂತ್ರಸ್ಥೆ ಬಾಲಕಿಯನ್ನು ಭಾಯಿಜಾನ್ ಅಲಿ ಫೆಬ್ರವರಿ 3 ರಂದು ಕಿಡ್ನ್ಯಾಪ್ ಮಾಡಿದ್ದ ಹಾಗೂ ನಂತರ ಟೀ ಗಾರ್ಡನ್‌ಗೆ ಕರೆದೊಯ್ದಿದ್ದು, ಸತತ 2 ದಿನಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಭಾಯಿಜಾನ್ ಅಲಿ ತನ್ನ ಮಗಳನ್ನು ಎತ್ತಿಕೊಂಡು ಹೋಗಿದ್ದಾನೆ ಎಂದು 14 ವರ್ಷದ ಬಾಲಕಿಯ ತಾಯಿ ಸಹ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಆತನನ್ನು ಪ್ರಶ್ನೆ ಮಾಡಿದ್ದರು. ನಂತರ, ಪೊಲೀಸರಿಗೆ ದೂರು ನೀಡಿದ ಬಳಿಕ, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: 53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಅಪ್ರಾಪ್ತ ಬಾಲಕ!
ಪಾಪಿಯ ತುಟಿ ಕಚ್ಚಿ ಕತ್ತರಿಸಿ ಬಚಾವ್ ಆದ ಯುವತಿ!
ಇನ್ನೊಂದೆಡೆ, ಇತ್ತೀಚೆಗೆ ಯುವತಿಯೊಬ್ಬಳು ತನ್ನನ್ನು ರೇಪ್ ಮಾಡಲು ಯತ್ನಿಸಿದ ಪುರುಷನ ಮೇಲೆ ಧೈರ್ಯದಿಂದ ಹೋರಾಡಿ ಅತ್ಯಾಚಾರದಿಂದ ಬಚಾವ್ ಆಗಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ತನ್ನ ಅಗಾಧ ಧೈರ್ಯದಿಂದ ಆಕೆ ಮಾಡಿದ ಕೆಲಸ, ಆಕೆಯಲ್ಲಿ ಅತ್ಯಾಚಾರದಿಂದ ಪಾರು ಮಾಡಿದೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಹಿಡಿದು, ಅತ್ಯಾಚಾರ ಮಾಡಲು ಹೋದ ವ್ಯಕ್ತಿ ವೇಳೆ ಆಕೆಗೆ ಬಲವಂತವಾಗಿ ಚುಂಬಿಸಲು ಹೋಗಿದ್ದಾನೆ. ಈ ವೇಳೆ ಆಕೆ ಆತನ ತುಟಿಯನ್ನು ಹಲ್ಲುಗಳಿಂದ ಕಚ್ಚಿ ಕತ್ತರಿಸಿ ಹಾಕಿದ್ದಾಳೆ. ಇದರಿಂದ ಯುವಕ ತುಟಿಯ ಕೆಳಭಾಗದ ಭಾಗವೇ ಇಲ್ಲದಂತಾಗಿದ್ದು, ಸಂಪೂರ್ಣ ಬಾಯಿ ರಕ್ತಮಯವಾಗಿತ್ತು. ಯುವತಿ ಹಾಗೂ ಯುವಕನ ಕೂಗಾಟದ ಸದ್ದು ಕೇಳಿದ ಅಕ್ಕಪಕ್ಕದವರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹೆಣ್ಣು ಮಕ್ಕಳೇ ಹುಷಾರ್! ಕೆಲಸ ಕೊಡಿಸೊದಾಗಿ ನಂಬಿಸಿ ಯುವತಿಯ ಅತ್ಯಾಚಾರ ಎಸಗಿದ ಕಾಮುಕ ಟೆಕ್ಕಿ!