ಮಂಗಳೂರು: ಕಡಿಮೆ ಅಂಕ ಬಂದದ್ದಕ್ಕೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ!

By Kannadaprabha NewsFirst Published Feb 6, 2023, 11:17 AM IST
Highlights

ನಗರದ ಕುದ್ರೋಳಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ನಿರೀಕ್ಷಿಸಿದ್ದಷ್ಟುಅಂಕ ಬರಲಿಲ್ಲ ಎಂದು ಮಾನಸಿಕ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ. ಕುದ್ರೋಳಿ ಟಿಪ್ಪು ಸುಲ್ತಾನ್‌ ನಗರ ನಿವಾಸಿ ಖತೀಜಾ ರೀನಾ (16) ಮೃತಪಟ್ಟಬಾಲಕಿ.

ಮಂಗಳೂರು (ಫೆ.6): ನಗರದ ಕುದ್ರೋಳಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ನಿರೀಕ್ಷಿಸಿದ್ದಷ್ಟುಅಂಕ ಬರಲಿಲ್ಲ ಎಂದು ಮಾನಸಿಕ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ. ಕುದ್ರೋಳಿ ಟಿಪ್ಪು ಸುಲ್ತಾನ್‌ ನಗರ ನಿವಾಸಿ ಖತೀಜಾ ರೀನಾ (16) ಮೃತಪಟ್ಟಬಾಲಕಿ.

ವಿದ್ಯಾರ್ಥಿನಿ ಖತೀಜಾ ರೀನಾ ಪಡೀಲ್‌ನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇತ್ತೀಚೆಗೆ ತಾಯಿ-ಮಗಳು ಕಾಲೇಜಿಗೆ ಹೋದಾಗ ತಾನು ಮುಂದಿನ ಪರೀಕ್ಷೆಯಲ್ಲಿ ಬ್ಯಾಚ್‌ನಲ್ಲೇ ಫಸ್ಟ್‌ ಬರುವುದಾಗಿ ಹೇಳಿದ್ದರು. ಆದರೆ ಪರೀಕ್ಷೆಯ ಬಳಿ ನಿರೀಕ್ಷಿತ ಅಂಕ ಬರಲಿಲ್ಲ ಎಂದು ಮಾನಸಿಕವಾಗಿ ನೊಂದು ಕೊಂಡಿದ್ದರು.

Raichur: ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿನಿ ಆತ್ಮಹತ್ಯೆ

ವಿದ್ಯಾರ್ಥಿನಿಯ ತಂದೆ-ತಾಯಿ ಭಾನುವಾರ ಬೆಳಗ್ಗೆ ಕಾರ್ಯನಿಮಿತ್ತ ಮಂಜೇಶ್ವರಕ್ಕೆ ಹೋಗಿದ್ದರು. ಇವರ ನಾಲ್ವರು ಮಕ್ಕಳಲ್ಲಿ ಖತೀಜಾ ಮೂರನೇಯವರಾಗಿದ್ದು, ಅಣ್ಣ-ಅಕ್ಕ ಮನೆಯಲ್ಲಿರಲಿಲ್ಲ. ಇಬ್ಬರು ಸಹೋದರಿಯರು ಮದ್ರಾಸಾಕ್ಕೆ ಹೋಗಿದ್ದರು. ಬೆಳಗ್ಗೆ ವೇಳೆಗೆ ಖತೀಜಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖತೀಜಾರ ತಂದೆ ಗುಜರಿ ವ್ಯಾಪಾರಿಯಾಗಿದ್ದಾರೆ. ಬಂದರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕರಾಟೆ ಶಿಕ್ಷಕನಿಗೆ 10 ವರ್ಷ ಜೈಲು

ಉಡುಪಿ: ಪಡುಬಿದ್ರಿಯ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕರಾಟೆ ಶಿಕ್ಷಕನಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆರೋಪಿ ಪಡುಬಿದ್ರಿಯ ಉಮೇಶ್‌ ಬಂಗೇರ (45), 2020ರಲ್ಲಿ ತನ್ನ ಕರಾಟೆ ತರಗತಿಗೆ ಬಂದಿದ್ದ 12 ವರ್ಷದ ಬಾಲಕಿ ಮೇಲೆ ತರಗತಿ ಮುಗಿದ ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದ ಮತ್ತು ಈ ವಿಚಾರ ಯಾರಲ್ಲೂ ಹೇಳದಂತೆ ಬಾಲಕಿಗೆ ಬೆದರಿಕೆ ಒಡ್ಡಿದ್ದ. ಅನಂತರ ಬಾಲಕಿ ಕರಾಟೆ ತರಗತಿಗೆ ಹೋಗಲು ಒಪ್ಪದೇ ಅಳುತಿದ್ದು, ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಅದರಂತೆ ತಾಯಿ ಪಡುಬಿದ್ರೆ ಪೊಲೀಸ್‌ ಠಾಣೆಗೆ ಯಲ್ಲಿ ದೂರು ನೀಡಿದ್ದರು.

ಸೈನ್ಸ್ ಓದಲು ಇಷ್ಟವಿಲ್ಲದ್ದಕ್ಕೆ ರಾಯಚೂರು ಮೂಲದ ವಿದ್ಯಾರ್ಥಿನಿ ನೇಣಿಗೆ ಶರಣು!

ಆಗಿನ ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿಸಲ್ಲಿಸಿದ್ದರು. ಒಟ್ಟು 26 ಸಾಕ್ಷಿಗಳ ಪೈಕಿ 13 ಸಾಕ್ಷಿಗಳ ವಿಚಾರಣೆ ನಡೆಸಿ, ಆರೋಪ ಸಾಬೀತಾಗಿದ್ದು, ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಆರೋಪಿಗೆ ಫೋಕ್ಸೋ ಕಾಯ್ದೆಯಡಿ 10 ವರ್ಷ, ಲೈಂಗಿಕ ದೌರ್ಜನ್ಯಕ್ಕೆ 10 ವರ್ಷ, ಜೀವ ಬೆದರಿಕೆಗೆ 1 ವರ್ಷ, ದೈಹಿಕ ಕಿರುಕುಳಕ್ಕೆ 1 ಜೈಲು ಮತ್ತು 22 ಸಾವಿರ ರು. ದಂಡ ವಿಧಿಸಿದ್ದಾರೆ. ಅಲ್ಲದೇ ಸರ್ಕಾರ ನೊಂದ ಬಾಲಕಿಗೆ 1 ಲಕ್ಷ ರು. ರು. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು

click me!