
ರೇವಾ (ಫೆ.6): 16 ವರ್ಷದ ಬಾಲಕನೊಬ್ಬ 58 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ತನ್ನ ಮೇಲೆ ಮೊಬೈಲ್ ಕದ್ದ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಬಾಲಕ ಈ ಕೃತ್ಯ ಎಸಗಿದ್ದ ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಬಾಲಕನನ್ನು ವಶಕ್ಕೆ ಪಡೆದಿರುವ ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಜ.30ರಂದು ಸಂತ್ರಸ್ತ ಮಹಿಳೆಯ ಪತಿ ಮತ್ತು ಪುತ್ರ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದ ಬಾಲಕ ಆಕೆಯ ಮನೆಗೆ ತೆರಳಿದ್ದ. ಅಲ್ಲಿ ಆಕೆಯನ್ನು ಎಳೆದಾಡಿದಾಗ ಆಗ ಕೂಗಿಕೊಂಡಿದ್ದಾಳೆ. ಈ ವೇಳೆ ಆಕೆಯ ಬಾಯಿಗೆ ಬಟ್ಟೆತುರುಕಿ, ತಲೆಗೆ ಹಳೆಯ ಬ್ಯಾಗೊಂದೊಂದನ್ನು ಸುತ್ತಿದ ಬಾಲಕ, ಬಳಿಕ ಆಕೆಯ ಕಾಲಿಗೆ ಹಗ್ಗ ಕಟ್ಟಿಸಮೀಪದಲ್ಲೇ ಇದ್ದ ನಿರ್ಮಾಣದ ಹಂತದ ಕಟ್ಟಡದ ಬಳಿ ಎಳೆದೊಯ್ದಿದ್ದಾನೆ.
ಬೆಂಗಳೂರು: ವೃದ್ಧೆಯ ಚಿನ್ನದ ಸರ ಎಗರಿಸಿದ್ದ ಇಬ್ಬರು ಕಳ್ಳರು, ಖರೀದಿಸಿದ ಇನ್ನೊಬ್ಬನ ಬಂಧನ
ಅಲ್ಲಿ ಬಡಿಗೆ ತೆಗೆದುಕೊಂಡು ಮಹಿಳೆಯ ತಲೆ, ದೇಹದ ಎಲ್ಲಾ ಭಾಗಗಳ ಮೇಲೂ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಅಘಾತಕ್ಕೆ ಆಕೆ ನಿಸ್ತೇಜವಾಗಿ ಮಲಗಿದ ಬಳಿಕ ಬಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮತ್ತೆ ಆಕೆಯ ತಲೆ, ಗುಪ್ತಾಂಗ ಸೇರಿದಂತೆ ದೇಹದ ಎಲ್ಲಾ ಭಾಗಗಳ ಮೇಲೂ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಇಷ್ಟೆಲ್ಲಾ ಆದ ಮೇಲೆ ಮಹಿಳೆ ಮನೆಗೆ ತೆರಳಿ ಹ, ಚಿನ್ನ ದೋಚಿ ತೆರಳಿದ್ದಾನೆ.
ಫೆ.1ರಂದು ಅನಾಮಿಕ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕುಟುಂಬ ಸದಸ್ಯರು ಬಾಲಕನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ವೇಳೆ ತನಿಖೆ ನಡೆಸಿದಾಗ ಮೊಬೈಲ್ ಕದ್ದ ಆರೋಪಕ್ಕೆ ಸೇಡು ತೀರಿಸಿಕೊಳ್ಳಲು ಕೃತ್ಯ ಎಸಗಿದ್ದಾಗಿ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ