ಅತ್ಯಾಚಾರಕ್ಕೆ ಯತ್ನಿಸಿ 10 ವರ್ಷದ ಬಾಲಕಿಯ ಕೊಲೆ: 14 ರ ಬಾಲಕ ಆರೋಪಿ

Published : Apr 30, 2022, 12:59 PM IST
ಅತ್ಯಾಚಾರಕ್ಕೆ ಯತ್ನಿಸಿ 10 ವರ್ಷದ ಬಾಲಕಿಯ ಕೊಲೆ:  14 ರ ಬಾಲಕ ಆರೋಪಿ

ಸಾರಾಂಶ

ಅತ್ಯಾಚಾರಕ್ಕೆ ಯತ್ನಿಸಿ 10 ವರ್ಷದ ಬಾಲಕಿಯ ಹತ್ಯೆ 14 ವರ್ಷದ ಬಾಲಕನಿಂದ ಹೇಯ ಕೃತ್ಯ ಅಮೆರಿಕಾದ  ಚಿಪ್ಪೆವಾ ಕೌಂಟಿಯಲ್ಲಿ ಘಟನೆ

ಅತ್ಯಾಚಾರವೆಸಗಲು ಯತ್ನಿಸಿ ಬಾಲಕಿಯ ಕೊಲೆ ಮಾಡಿದ ಪ್ರಕರಣದಲ್ಲಿ 14 ವರ್ಷದ ಬಾಲಕ ತಪ್ಪಿತಸ್ಥ ಎಂದು ಸಾಬೀತಾಗಿದೆ. ಅಮೆರಿಕಾದ  ಚಿಪ್ಪೆವಾ ಕೌಂಟಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಇಲಿಯಾನಾ ಲಿಲಿ ಪೀಟರ್ಸ್ ( Iliana Lily Peters) ಎಂಬ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ  14 ವರ್ಷದ ಬಾಲಕ ಕೊಲೆ ಮಾಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ಚಿಪ್ಪೆವಾ ಕೌಂಟಿಯಲ್ಲಿ ನರಹತ್ಯೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ.

ಸಂತ್ರಸ್ತೆ ಮನೆಯಿಂದ ಹೊರಬಂದ ವೇಳೆ ಆರೋಪಿಯು ಅತ್ಯಾಚಾರವೆಸಗಿ ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂದು ವಿಸ್ಕಾನ್ಸಿನ್ ಕೌಂಟಿಯ ಅಟಾರ್ನಿ (Wisconsin County Attorney)  ವೇಡ್ ನೆವೆಲ್ (Wade Newell) ಹೇಳಿದ್ದಾರೆ. 10 ವರ್ಷದ ಬಾಲಕಿಯ ಹೊಟ್ಟೆಗೆ ಹೊಡೆದ ಆರೋಪಿ, ಆಕೆಯನ್ನು ನೆಲಕ್ಕೆ ಬೀಳಿಸಿದ್ದಾನೆ. ನಂತರ ಆಕೆಯ ಕತ್ತು ಹಿಸುಕುವ ಮೊದಲು ಕೋಲಿನಿಂದ ಹೊಡೆದಿದ್ದಾನೆ. ನಂತರ ಆಕೆಯ ಮೇಲೆ ಲೈಂಗಿಕವಾಗಿ ಆಕ್ರಮಣ ನಡೆಸಿದ್ದಾನೆ. 

ಬಾಲಾಪರಾಧಿ ವಯಸ್ಸಿನ ಮಿತಿ 16ಕ್ಕೆ ಇಳಿಕೆ ಅಗತ್ಯವಿಲ್ಲ: ಸಂಸದೀಯ ಸಮಿತಿ

ಈ ಬಾಲಾಪರಾಧಿ ಇತರ ಬಾಲಾಪರಾಧಿಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲ ಹಾಗೂ  ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ ಹೀಗಾಗಿ ಬಾಂಡ್ ನೀಡುವಂತೆ ವಿನಂತಿಸಿದರು. ಪಾರ್ಕ್‌ವ್ಯೂ ಎಲಿಮೆಂಟರಿ ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದ ಲಿಲ್ಲಿಯಂತೆಯೇ ಈ ಹುಡುಗನೂ ಮನೆ ತೊರೆದಿದ್ದ. ಆದರೆ ಅವರು ಪರಸ್ಪರ ಹೇಗೆ ತಿಳಿದಿದ್ದರು ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಲ್ಲ. ಘಟನೆಯ ಬಳಿಕ ಬಾಲಕಿಯ ಮೃತದೇಹವು ಆಕೆಯ ಚಿಕ್ಕಮ್ಮನ ಮನೆಯ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಪತ್ತೆಯಾಗಿತ್ತು. ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಲಿಲಿ ನಾಪತ್ತೆಯಾದ ಬಳಿಕ ಆಕೆಯ ಕುಟುಂಬ ಎಲ್ಲೆಡೆ ಹುಡುಕಾಟ ನಡೆಸಿ ಸಿಗದಿದ್ದಾಗ ಬಾಲಕಿಯ ತಂದೆ ನಾಪತ್ತೆ ದೂರು ದಾಖಲಿಸಿದ್ದರು.

Rape Case: 4ರ ಕಂದನ ರೇಪ್, ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ ಕೋರ್ಟ್‌, ಬಾಲಾಪರಾಧಿಗೆ ಜೈಲು!
ಆಕೆಯ ಬೈಸಿಕಲ್ ಹಾದಿಯಲ್ಲಿ ಸಿಕ್ಕಿತ್ತು. ಚಿಪ್ಪೆವಾ ಫಾಲ್ಸ್ ಪೊಲೀಸ್ ಮುಖ್ಯಸ್ಥ ಮ್ಯಾಥ್ಯೂ ಕೆಲ್ಮ್ (Matthew Kelm) ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಂಕಿತನ ಬಂಧನವಾಗಿದ್ದು, ಇದರಿಂದ ಸಮುದಾಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು. ಅಚಾನಕ್‌ ಆಗಿ ಹತ್ಯೆಗೀಡಾದ ಲಿಲಿ ಪೀಟರ್ಸ್ ಅನ್ನು ಯಾರಿಂದಲೂ ಮರಳಿಸಲಾಗದು. ಆದರೆ ಆಕೆಯ ಕುಟುಂಬ ಮತ್ತು ಸಮುದಾಯಕ್ಕೆ ಈ ಸುದ್ದಿ ತಲುಪಿಸಲು ನಾವು ತುಂಬಾ ಕೃತಜ್ಞರಾಗಿದ್ದೇವೆ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ವಿಸ್ಕಾನ್ಸಿನ್ ಪ್ರಾಸಿಕ್ಯೂಟರ್‌ಗಳು ಆರೋಪಿಗೆ $1 ಮಿಲಿಯನ್ (£797,850) ಬಾಂಡ್ ಅನ್ನು ವಿಧಿಸಿದ್ದರು. C P-B ಎಂಬ ಮೊದಲಕ್ಷರಗಳಿಂದ ಮಾತ್ರ ಗುರುತಿಸಲ್ಪಟ್ಟಿರುವ ಈ ಬಾಲಾಪರಾಧಿ ವೀಡಿಯೊ ಕರೆ ಮೂಲಕ ಮೊದಲ ಬಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಎಂದು ABC ನ್ಯೂಸ್ ವರದಿ ಮಾಡಿದೆ. ಮೊದಲ ಹಂತದ ಕೊಲೆ ಉದ್ದೇಶಪೂರ್ವಕ ನರಹತ್ಯೆ, ಮೊದಲ ಹಂತದ ಲೈಂಗಿಕ ದೌರ್ಜನ್ಯ ಮತ್ತು 13 ವರ್ಷದೊಳಗಿನ ಮಗುವಿನೊಂದಿಗೆ ಮೊದಲ ಹಂತದ ಲೈಂಗಿಕ ದೌರ್ಜನ್ಯದ ಪರಿಣಾಮವಾಗಿ ದೊಡ್ಡ ದೈಹಿಕ ಹಾನಿ ಒಳಗೊಂಡಂತೆ ಮೂರು ಆರೋಪಗಳನ್ನು ಬಾಲಕನ ಮೇಲೆ  ಹೊರಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು