ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ

Published : Jun 12, 2023, 11:00 AM ISTUpdated : Jun 12, 2023, 11:35 AM IST
ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ

ಸಾರಾಂಶ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದ ಮಾದರಿಯನ್ನು ಅಮೆರಿಕದಲ್ಲಿ ಪ್ರಚುರಪಡಿಸುತ್ತಿದ್ದ ದಿನವೇ ಬೀದಿನಾಯಿ ದಾಳಿಯಲ್ಲಿ ವಿಕಲಚೇತನ ಬಾಲಕ ಮೃತಪಟ್ಟಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಕಣ್ಣೂರು (ಕೇರಳ) (ಜೂನ್ 12, 2023): ಕೇರಳದ ಕಣ್ಣೂರಿಗೆ ಸಮೀಪದ ಮುಜಪ್ಪಿಲಂಗಾಡ್‌ನಲ್ಲಿ ಭಾನುವಾರ ಸಂಜೆ ಬೀದಿ ನಾಯಿಗಳ ಗುಂಪಿನಿಂದ ದಾಳಿಗೊಳಗಾದ 11 ವರ್ಷದ ವಿಶೇಷ ಚೇತನ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಟ್ಟಿನಕಂ ನಿವಾಸಿ ನಿಹಾಲ್ ಅವರ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಬಳಿಕ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕೇರಳ ಪೊಲೀಸರು ಹೇಳಿದರು.

ಇದನ್ನು ಓದಿ: ಪಂಜಾಬ್‌ನ ಗುರುದಾಸ್‌ಪುರದಲ್ಲಿ 12 ಜನರ ಮೇಲೆ Pitbull ದಾಳಿ: ಆತ್ಮರಕ್ಷಣೆಗೆ ಶ್ವಾನ ಕೊಂದ ನಿವೃತ್ತ ಸೇನಾಧಿಕಾರಿ

"ಆಟಿಸಂನಿಂದ ಬಳಲುತ್ತಿದ್ದ ಬಾಲಕ ಸಂಜೆ 5 ಗಂಟೆ ಸುಮಾರಿಗೆ ಕಾಣೆಯಾಗಿದ್ದು, ಸಂಬಂಧಿಕರು, ಸ್ಥಳೀಯರು ಮತ್ತು ಪೊಲೀಸರನ್ನು ಒಳಗೊಂಡ ತಂಡವು ಅವನನ್ನು ಹುಡುಕುತ್ತಿದ್ದರು. ನಾವು ಬಾಲಕನನ್ನು ರಾತ್ರಿ 8.30 ರ ಸುಮಾರಿಗೆ ಅವರ ಮನೆಯ ಬಳಿ ತೀವ್ರವಾಗಿ ಗಾಯಗೊಂಡ ರೀತಿಯಲ್ಲಿ ಕಂಡು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು’’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು, ಈ ಘಟನೆ ಕುರಿತು ಸಾರ್ವಜನಿಕರು ತೀವ್ರ ಟೀಕೆ ಮಾಡಿದ್ದು, ಬೀದಿ ನಾಯಿಗಳ ಹಾವಳಿ ತಡೆಯಲು ವಿಫಲವಾದ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್‌

ಘಟನೆಯ ವಿವರ..
ಜೂನ್ 11 ರಂದು ಕಣ್ಣೂರಿನ ಮುಜಪಿಲಂಗಾಡ್ ಕಿಟಿನಕಂ ಮಸೀದಿ ಬಳಿ 11 ವರ್ಷದ ಬಾಲಕನನ್ನು ಬೀದಿ ನಾಯಿಗಳು ಕೊಂದು ಹಾಕಿವೆ. ಮೃತ ಬಾಲಕನನ್ನು ವಿಕಲಚೇತನ ಮಗು ನಿಹಾಲ್ ನೌಶಾದ್ ಎಂದು ತಿಳಿದುಬಂದಿದ್ದು, ಆತನಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಮಗು ಮನೆಯಿಂದ ನಾಪತ್ತೆಯಾಗಿತ್ತು. ನಂತರ ಮನೆಯಿಂದ ಅರ್ಧ ಕಿಲೋಮೀಟರ್ ದೂರದ ಖಾಲಿ ನಿವೇಶನದಲ್ಲಿ ತೀವ್ರ ರಕ್ತಸ್ರಾವವಾಗಿ ಪತ್ತೆಯಾಗಿದ್ದಾನೆ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದಾಗ ಮಗು ಚಲನರಹಿತವಾಗಿದ್ದು ಸೊಂಟದ ಸುತ್ತ ರಕ್ತಸ್ರಾವವಾಗಿತ್ತು.

ಇದನ್ನೂ ಓದಿ: ಬೀದಿನಾಯಿಗಳ ಭೀಕರ ದಾಳಿಗೆ ವೃದ್ಧ ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಪೊಲೀಸರು ಮಗುವನ್ನು ತಲಶ್ಶೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದರು. ಇನ್ನು, ಬೀದಿನಾಯಿಗೆ ಒಳಗಾಗಿರುವ ಬಾಲಕ ವಿಶೇಷಚೇತನನಾಗಿದ್ದು ಮತ್ತು ಭಾಷಣ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಹಿನ್ನೆಲೆ ಬಾಲಕನಿಗೆ ಸಹಾಯಕ್ಕಾಗಿ ಕರೆ ಮಾಡಲು ಸಾಧ್ಯವಾಗದಿರಬಹುದು ಎಂಬುದು ಬೆಳಕಿಗೆ ಬಂದಿದೆ.ಬಾಲಕನ ದೇಹದ ಮೇಲೆ ಕಚ್ಚಿದ ಗುರುತುಗಳನ್ನು ಕಾಣಬಹುದು ಎಂದು ವರದಿಗಳು ಹೇಳಿವೆ. 

ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ನಿರಂತರ ಬೀದಿ ನಾಯಿಗಳ ಸಮಸ್ಯೆ ಇದೆ. ಮತ್ತು ಹಲವಾರು ದೂರುಗಳ ಹೊರತಾಗಿಯೂ, ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬೀದಿನಾಯಿಗಳ ದಾಳಿಗೆ 5 ವರ್ಷದ ಬಾಲಕ ಬಲಿ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ